ಬಳ್ಳಾರಿ: ಕಾಲುವೆಯಲ್ಲಿ ಈಜಾಡಲು ಹೋಗಿ ಯುವಕನೊಬ್ಬ ಮೃತ ಪಟ್ಟಿರುವ ಘಟನೆ, ಸಿರುಗುಪ್ಪ ತಾಲೂಕಿನ ಬೈರಾಪುರ ಗ್ರಾಮದಲ್ಲಿ ನಡೆದಿದೆ. ವಿನೋದ್ (24) ಮೃತ ಯುವಕನಾಗಿದ್ದು, ನಿನ್ನೆ ಜನತಾ ಕರ್ಫ್ಯೂ ಹಾಗೂ ಭಾನುವಾರವಿದ್ದ ಕಾರಣ, ಗ್ರಾಮದ ಬಲದಂಡೆ ಕಳೆಮಟ್ಟ ಕಾಲುವೆಯಲ್ಲಿ ಬೆಳಗ್ಗೆ ಸ್ನಾನ ಮಾಡಲು ಹೋಗಿದ್ದ.
ಆದರೆ ಈಜು ಬಾರದೇ ನೀರಿನಲ್ಲಿ ಮುಳುಗಿದ್ದು, ದರೂರು ಗ್ರಾಮದ ಕಾಲುವೆಯಲ್ಲಿ ಮೃತ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸಿರಿಗೇರಿ ಪೊಲೀಸ್ ಠಾಣೆಯ ಪಿಎಸ್ಐ ಅಮರೇಗೌಡ ಮತ್ತು ಸಿಬ್ಬಂದಿ ಆಗಮಿಸಿ ಪರೀಶಿಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.