ETV Bharat / state

ಬಳ್ಳಾರಿ ವಿವಿಯಲ್ಲಿ ಕೇಂದ್ರೀಯ ಗ್ರಂಥಾಲಯ ಉದ್ಘಾಟನೆ: ಪುತ್ಥಳಿಗಳ ಅನಾವರಣ - ಬಳ್ಳಾರಿ ಸುದ್ದಿ

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಬುಧವಾರ ಅನಾವರಣಗೊಳಿಸಿದರು.

DCM inaugurating Central Library in Sri Krishnadevaraya University

author img

By

Published : Feb 26, 2020, 11:45 PM IST

ಬಳ್ಳಾರಿ: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಲಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿಗಳನ್ನು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಅವರು ಬುಧವಾರ ಅನಾವರಣಗೊಳಿಸಿದರು.

ಗಣಿನಾಡು ಬಳ್ಳಾರಿ ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಗ್ರಂಥಾಲಯ ಕಟ್ಟಡ, ಸಾಮಾಜಿಕ ವಿಜ್ಞಾನ ಮತ್ತು ಸಾಮಾಜಿಕ ಕಾರ್ಯದ ಕಟ್ಟಡ, ಮಹಿಳಾ ಅಧ್ಯಯನದ ಕಟ್ಟಡಗಳನ್ನು ಇದೇ ಸಂದರ್ಭದಲ್ಲಿ ಉದ್ಘಾಟಿಸಿದರು.

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ

ನಂತರ ಮಾತನಾಡಿದ ಅವರು, ಯುವಜನತೆಗೆ ಬದುಕು ಕಟ್ಟಿಕೊಡುವ ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಡುವ ನಿಟ್ಟಿನಲ್ಲಿ ಅವರಿಗೆ ಉದ್ಯೋಗ ಅವಕಾಶಗಳು, ಶೈಕ್ಷಣಿಕ ಸಾಲ ಮತ್ತು ಶಿಷ್ಯವೇತನ ಸೇರಿದಂತೆ ಸಮಗ್ರ ಸೌಲಭ್ಯಗಳನ್ನು ಒಳಗೊಂಡ ಯುವಸಬಲೀಕರಣ ಘಟಕಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ. ಉನ್ನತ ಶಿಕ್ಷಣ ಇಲಾಖೆಯಲ್ಲಿ ನೂತನ ವರ್ಗಾವಣೆ ನೀತಿಯನ್ನು ಜಾರಿಗೆ ತರುವುದರ ಮುಖಾಂತರ ಎಲ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಮಾನ ಪ್ರಮಾಣದಲ್ಲಿ ಉಪನ್ಯಾಸಕರಿರುವಂತೆ ನೋಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಬರುವ ಮಾರ್ಚ್ ತಿಂಗಳ ಅಧಿವೇಶನದಲ್ಲಿ ಇದನ್ನು ಮಂಡಿಸಲಾಗುವುದು ಎಂದರು.

ಕೇಂದ್ರ ದೂರು ಕೋಶ ಆರಂಭ: ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೇಂದ್ರ ದೂರು ಕೋಶ ಪ್ರಾರಂಭಿಸಲಾಗಿದ್ದು, ಈ ಇಲಾಖೆಗೆ ಸಂಬಂಧಿಸಿದಂತೆ ಸಲಹೆಗಳು, ಸಮಸ್ಯೆಗಳು ಏನೇ ಇದ್ದರೂ ದೂರುಕೋಶಕ್ಕೆ ಸಲ್ಲಿಸಬಹುದಾಗಿದೆ. ಅವುಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು ಎಂದು ಡಿಸಿಎಂ ಭರವಸೆ ನೀಡಿದರು.

ವಿವಿಗಳಲ್ಲಿ ಉತ್ತಮ ಆಡಳಿತ ನೀಡುವುದಕ್ಕಾಗಿ ಯೂನಿಪೈಡ್ ಯೂನಿರ್ವಸಿಟಿ ಸಿಸ್ಟಮ್ ಮ್ಯಾನೇಜ್ ಮೆಂಟ್ ಶೀಘ್ರ ತರಲಾಗುವುದು. ವಿವಿಗಳಿಂದಲೇ ಸಮಾಜಕ್ಕೆ ದಿಕ್ಕು ದೊರೆಯಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಬೆಳೆಸಬೇಕು ಎನ್ನುವ ಸಂಕಲ್ಪದೊಂದಿಗೆ ಎಲ್ಲ ವಿವಿಗಳಲ್ಲಿ ನೂತನ ಆಡಳಿತ ಜಾರಿಗೊಳಿಸಲಾಗುವುದು. ಶಿಕ್ಷಣ ಆಧಾರಿತವಾದ ಆರ್ಥಿಕ ವ್ಯವಸ್ಥೆಯಿರುವುದರಿಂದ ಸಮಾಜದಲ್ಲಿ ಮೊದಲ ಆದ್ಯತೆ ಶಿಕ್ಷಣಕ್ಕಮೀಸಲಿಟ್ಡಿದ್ದೇವೆ ಎಂದು ತಿಳಿಸಿದರು.

ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದು ಅತ್ಯವಶ್ಯ: ನರ್ಸರಿ ಸ್ಕೂಲ್ ಮಟ್ಟದಲ್ಲಿ ಸರಿಯಾದ ಶಿಕ್ಷಣ ಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಶಾಲೆಗಳನ್ನು ಮಾಂಟೆಸರಿ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು. 3ರಿಂದ 6ವರ್ಷದಲ್ಲಿ ಮೆದುಳು ಬೆಳವಣಿಗೆಯಾಗುತ್ತದೆ.ಆ ವಯಸ್ಸಲ್ಲಿ 10 ರಿಂದ 15 ಭಾಷೆ ಕಲಿಯುವ ಸಾಮರ್ಥವಿರುತ್ತದೆ. ಈ ಸಮಯದಲ್ಲಿ ಗುಣಮಟ್ಟ ಶಿಕ್ಷಣ ನೀಡಿದರೇ ವಿದ್ಯಾರ್ಥಿಗಳು ಸುಭದ್ರ ಭವಿಷ್ಯ ಕಂಡುಕೊಳ್ಳಲಿದ್ದಾರೆ. ಎಲ್ಲ ಅಂಗನವಾಡಿ ಶಾಲೆಗಳಿಗೆ ಮೂಲ ಸೌಕರ್ಯ ಒದಗಿಸಲಾಗುವುದು ಎಂದರು.

ಬಳ್ಳಾರಿ ಪ್ರವಾಸದಲ್ಲಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ ಅವರು ಇದೇ ಸಂದರ್ಭದಲ್ಲಿ ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ಕನಕದುರ್ಗಮ್ಮ ದರ್ಶನ ಪಡೆದರು. ಹಾಗೂ ದೇವಸ್ಥಾನದ ಪ್ರಧಾನ ಧರ್ಮಕರ್ತ ಗಾದೆಪ್ಪ ಅವರು ದೇವಸ್ಥಾನದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮನವಿಪತ್ರ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.