ಬಳ್ಳಾರಿ : ಜಿಲ್ಲೆಯ ಸಂಡೂರು ಪುರಸಭೆಯ ಪೌರ ಕಾರ್ಮಿಕರಾದ ಗಿರಿಯಪ್ಪ ಅವರ ಮಗ ಯಾಹನ್ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.98.88 ಅಂಕಗಳನ್ನು ಪಡೆದು ಸಂಡೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾನೆ.
ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಪೌರ ಕಾರ್ಮಿಕನ ಪುತ್ರನಿಗೆ ಸಂಡೂರು ಪುರಸಭೆ ಅನುದಾನದ ಅಡಿ ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಲ್ಯಾಪ್ ಟಾಪ್ ವಿತರಿಸಿ ಶುಭ ಹಾರೈಸಿದರು. ಜೊತೆಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅಗತ್ಯ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ರಮೇಶ್ ಬಿ.ಎಸ್, ಸಂಡೂರು ಪುರಸಭೆಯ ಮುಖ್ಯಾಧಿಕಾರಿ ಎಸ್.ಸತ್ಯನಾರಾಯಣರಾವ್ ಹಾಗೂ ವಿದ್ಯಾರ್ಥಿಯ ತಂದೆ - ತಾಯಿ ಹಾಜರಿದ್ದರು.