ETV Bharat / state

ವಸತಿ ಯೋಜನೆಯಲ್ಲಿ ಮಾಧ್ಯಮದವರಿಗೆ ಮೀಸಲು: ಸಿಎಂ ಜೊತೆ ಬುಡಾ ಅಧ್ಯಕ್ಷ ಚರ್ಚೆ

ಬಳ್ಳಾರಿ ತಾಲೂಕಿನ ಗೊನಾಳು ಗ್ರಾಮದಲ್ಲಿ 101 ಎಕರೆ ವಿಸ್ತೀರ್ಣ ಜಮೀನಿನಲ್ಲಿ ವಸತಿ ಯೋಜನೆ ಅಭಿವೃದ್ಧಿ ಪಡಿಸುತ್ತಿದ್ದು, ಈ ಯೋಜನೆಯಲ್ಲಿ ಮಾಧ್ಯಮದವರಿಗೆ ಶೇ.5ರಷ್ಟು ಮೀಸಲಿಡುವುದಕ್ಕೆ ಸಂಬಂಧಿಸಿದಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸಿಎಂ ಜೊತೆ ಚರ್ಚೆ ನಡೆಸಿದರು.

Bellary
Bellary
author img

By

Published : Jun 18, 2020, 8:51 PM IST

ಬಳ್ಳಾರಿ: ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 50:50 ಅನುಪಾತದಲ್ಲಿ ತಾಲೂಕಿನ ಗೊನಾಳು ಗ್ರಾಮದಲ್ಲಿ 101 ಎಕರೆ ವಿಸ್ತೀರ್ಣ ಜಮೀನಿನಲ್ಲಿ ವಸತಿ ಯೋಜನೆ ಅಭಿವೃದ್ಧಿ ಪಡಿಸುತ್ತಿದ್ದು, ಈ ಯೋಜನೆಯಲ್ಲಿ ಮಾಧ್ಯಮದವರಿಗೆ ಶೇ.5ರಷ್ಟು ಮೀಸಲಿಡುವುದಕ್ಕೆ ಸಂಬಂಧಿಸಿದಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸಿಎಂ ಜೊತೆ ಚರ್ಚೆ ನಡೆಸಿದರು.

ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ಗೋನಾಳ ವಸತಿ ಯೋಜನೆ ಸೇರಿ ವಿವಿಧ ವಸತಿ ಯೋಜನೆಗಳ ಅಭಿವೃದ್ಧಿ ಕುರಿತು ಚರ್ಚೆ ನಡೆಸಿದರು.

ನಗರದ ಮುದ್ರಣ ಮತ್ತು ವಿದ್ಯುನ್ಮಾನ ಸುದ್ದಿ ವಾಹಿನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಾಲೂಕಿನ ಗೊನಾಳು ಗ್ರಾಮದಲ್ಲಿ 101 ಎಕರೆ ವಿಸ್ತೀರ್ಣ ಜಮೀನಿನಲ್ಲಿ ವಸತಿ ಯೋಜನೆಯಲ್ಲಿ ಶೇ.5ರಷ್ಟು ಮೀಸಲಿಡುವಂತೆ ಸಿಎಂ ಅವರಲ್ಲಿ ಕೋರಿ ಕೊಂಡರು.

ಮುಖ್ಯಮಂತ್ರಿಗಳು ಇದನ್ನು ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ನಿರ್ದೇಶಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.