ETV Bharat / state

ಬಿಜೆಪಿಗರು ಆದಷ್ಟು ಬೇಗ ಮುಹೂರ್ತ ಪಿಕ್ಸ್​ ಮಾಡಲಿ, ಯಾರು ಎಲ್ಲಿಗೆ ಹೋಗುತ್ತಾರೆ ಗೊತ್ತಾಗುತ್ತದೆ: ಡಿ.ಕೆ ಶಿವಕುಮಾರ್ - ಎಐಸಿಸಿ ಚುನಾವಣೆ ನಡೆದರೆ ರಾಹುಲ್ ಗಾಂಧಿ

ಸೆಪ್ಟೆಂಬರ್​ 30ರಿಂದ ರಾಜ್ಯಕ್ಕೆ ಜೋಡೋಯಾತ್ರೆ ಎಂಟ್ರಿಯಾಗಲಿದೆ. ಯಾತ್ರೆಯಲ್ಲಿ ನಾವು ಬಳ್ಳಾರಿಯಲ್ಲಿ ಮಾತ್ರ ಸಮಾವೇಶ ಹಮ್ಮಿಕೊಂಡಿದ್ದೇವೆ. ಎರಡು ದಿನ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

bharat-jodo-yatra-conference
ಡಿ ಕೆ ಶಿವಕುಮಾರ್
author img

By

Published : Sep 27, 2022, 10:17 PM IST

Updated : Sep 27, 2022, 10:36 PM IST

ಬಳ್ಳಾರಿ: ಅವರೇ ಆದಷ್ಟು ಬೇಗ ಮುಹೂರ್ತ ಫಿಕ್ಸ್ ಮಾಡಿಕೊಳ್ಳಲಿ, ನಮ್ಮ ಮುಹೂರ್ತ ಫಿಕ್ಸ್​​ ಆದರೆ. ಯಾವ ಪಾರ್ಟಿ ಇಂದ ಯಾರು ಬರುತ್ತಾರೆ ಆಮೇಲೆ ಗೊತ್ತಾಗುತ್ತದೆ. ಆದಷ್ಟು ಬೇಗ ಇವತ್ತು ಅಥವಾ ನಾಳೆ ಸಂಜೆಯೊಳಗೆ ಮುಹೂರ್ತ ಫಿಕ್ಸ್ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಬಿಜೆಪಿಗರು ಆದಷ್ಟು ಬೇಗ ಮುಹೂರ್ತ ಪಿಕ್ಸ್​ ಮಾಡಲಿ

ಭಾರತ್ ಜೋಡೊ ಯಾತ್ರೆ ನಿಮಿತ್ತ ಬಳ್ಳಾರಿಯಲ್ಲಿ ಸಮಾವೇಶ ಆಯೋಜಿಸುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಮೈದಾನವನ್ನು ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಸೆಪ್ಟೆಂಬರ್​ 30ರಿಂದ ರಾಜ್ಯಕ್ಕೆ ಜೋಡೋಯಾತ್ರೆ ಎಂಟ್ರಿಯಾಗಲಿದೆ. ಯಾತ್ರೆಯಲ್ಲಿ ನಾವು ಬಳ್ಳಾರಿಯಲ್ಲಿ ಮಾತ್ರ ಸಮಾವೇಶ ಹಮ್ಮಿಕೊಂಡಿದ್ದೇವೆ. ಎರಡು ದಿನ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹೀಗಾಗಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳ ಎಲ್ಲ ನಾಯಕರು ಪಕ್ಷಾತೀತವಾಗಿ ಬಂದು ಸಮಾವೇಶದಲ್ಲಿ ಭಾಗಿಯಾಗಬೇಕು ಎಂದು ಅವರು ಮನವಿ ಮಾಡಿದರು.

ಬಳ್ಳಾರಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಸಬೇಕು ಎಂಬ ಆಲೋಚನೆ ಇತ್ತು. ಆದರೆ, ಕ್ರೀಡಾಂಗಣ ಕಾಮಗಾರಿ ಕೆಲಸ ಇರುವುದರಿಂದ ಮುನಿಸಿಪಲ್ ಮೈದಾನದಲ್ಲಿ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಮುನಿಸಿಪಲ್ ಮೈದಾನ ಐತಿಹಾಸಿಕ ಮೈದಾನ ಈ ಹಿಂದೆ ಇಲ್ಲಿ ಇಂದಿರಾ ಗಾಂಧಿ ಅವರು, ಸೋನಿಯಾ ಗಾಂಧಿ ಅವರು ಸಮಾವೇಶ ನಡೆಸಿದ ಮೈದಾನ. ಹೀಗಾಗಿ ಈ ಮೈದಾನ ಆಯ್ಕೆ ಮಾಡಿಕೊಂಡಿದ್ದೇವೆ. ಮೈದಾನದಲ್ಲಿ ಕಡಿಮೆ ಜನ ಸೇರಲು ಅವಕಾಶ ಇದ್ದರೂ ಕೂಡ ಯಾತ್ರೆಯಲ್ಲಿ ಒಟ್ಟಾರೆಯಾಗಿ ಅಂದಾಜು ಐದು ಲಕ್ಷ ಜನ ಸೇರುತ್ತಾರೆ ಎಂದು ಅವರು ಹೇಳಿದರು.

ಎಐಸಿಸಿ ಚುನಾವಣೆ ನಡೆದರೆ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಮತದಾನ ಮಾಡಲಿದ್ದಾರೆ. ಅಕ್ಟೋಬರ್​ 17ರಂದು ಮತದಾನ ಮಾಡಬೇಕಾಗುತ್ತದೆ. ಇದರಿಂದ ಯಾತ್ರೆಯಲ್ಲಿ ಒಂದು ದಿನ ಹಿಂದೆ ಮುಂದೆ ಆಗಬಹುದು. ಸಮಾವೇಶದಲ್ಲಿ ಎಷ್ಟು ಜನರು ಭಾಗಿ ಆಗುತ್ತಾರೆಂದು ನಿಮ್ಮ ಕ್ಯಾಮರಾ, ನಿಮ್ಮ ಕಣ್ಣು ಸಮಾವೇಶಕ್ಕೆ ಸಾಕ್ಷಿಯಾಗಲಿದೆ ಎಂದರು.

ಕರ್ನಾಟಕ ರಾಜ್ಯ ಉಸ್ತುವಾರ ರಣದೀಪ್‍ಸಿಂಗ್ ಸುರ್ಜೇವಾಲಾ, ಸಂಸದ ಡಾ.ಸಯ್ಯದ್ ನಾಸಿರ್ ಹುಸೇನ್, ಡಾ.ಕೆ.ಎಲ್.ಹನುಮಂತಯ್ಯ, ಶಾಸಕ ಬಿ.ನಾಗೇಂದ್ರ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ್ ಖಂಡ್ರೆ, ಮಾಜಿ ಸಚಿವ ದಿವಾಕರಬಾಬು, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮೊಹಮ್ಮದ್ ರಫೀಕ್, ಮುರಳಿಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.

ಇದನ್ನೂ ಓದಿ : ವೇದಿಕೆ ಮೇಲೆ ಎಡವಿದ ಸಿದ್ದರಾಮಯ್ಯ.. ಗಲಿಬಿಲಿಗೊಂಡ ಮಾಜಿ ಸಿಎಂ.. ವಿಡಿಯೋ

Last Updated : Sep 27, 2022, 10:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.