ಬಳ್ಳಾರಿ: ನಗರದಲ್ಲಿ ಮಾಜಿ ಉಪಸಭಾಪತಿ ಡಿ.ಹೆಚ್. ಶಂಕರಮೂರ್ತಿ ಜೀವನ, ಸಾಧನೆ ಕುರಿತಾದ ಸಾಕ್ಷ್ಯಚಿತ್ರದ ಬಿಡುಗಡೆ ಸಮಾರಂಭವನ್ನು ನಡೆಯಿತು.
ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ಬಿಪಿಎಸ್ಸಿ ಶಾಲೆಯಲ್ಲಿ 'ಸಿರಿಗೇರಿ ಅನ್ನಪೂರ್ಣ ಕ್ರಿಯೇಷನ್ಸ್' ವತಿಯಿಂದ ಕಾರ್ಯಕ್ರಮವನ್ನು ಆಯೋಜನೆಗೊಂಡಿತ್ತು.
ಈ ವೇಳೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತನಾಡಿದ ಡಿ.ಹೆಚ್. ಶಂಕರಮೂರ್ತಿ, ನಮ್ಮೊಂದಿಗೆ ಒಳ್ಳೆಯ ರಾಜಕಾರಣಿಗಳು ಇದ್ದಾರೆಂಬ ಆಶಾಭಾವನೆಯನ್ನು ಎಲ್ಲರೂ ಹೊಂದಿರೋಣ. ಪ್ರಸ್ತುತ ರಾಜಕಾರಣಿಗಳಲ್ಲಿ ಕೆಟ್ಟವರು ಇರಬಹುದಾದರೂ ಒಳ್ಳೆಯ ರಾಜಕಾರಣಿಗಳೂ ಇದ್ದೇ ಇರ್ತಾರೆ ಎಂದರು. ಮುಂಬರುವ ದಿನಗಳಲ್ಲಿ ರಾಜಕಾರಣಕ್ಕೆ ಒಳ್ಳೆಯ ವ್ಯಕ್ತಿಗಳು ಬರಲಿದ್ದಾರೆಂಬ ಆಶಾಭಾವನೆಯನ್ನು ಹೊಂದಬೇಕು ಎಂದು ಸಲಹೆ ನೀಡಿದ್ರು.
ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿಯವರಂಥ ಸರಳ, ಸಜ್ಜನಿಕೆಯ ರಾಜಕಾರಣಿಗಳು ಅಪರೂಪ. ಹಾಲಿ ಪ್ರಧಾನಿ ನರೇಂದ್ರ ಮೋದಿಯವರೂ ಕೂಡ ಒಳ್ಳೆಯ ವ್ಯಕ್ತಿ. ಅಂತಹ ರಾಜಕಾರಣಿಗಳನ್ನು ಹುಡುಕುವುದು ಕಷ್ಟದಾಯಕ ಎಂದರು.