ETV Bharat / state

ಬಳ್ಳಾರಿಯಲ್ಲಿ ನಿಲ್ಲದ ಕ್ರಿಕೆಟ್​ ಬೆಟ್ಟಿಂಗ್​ ದಂಧೆ, 18 ಕೇಸ್​ ದಾಖಲು - Cricket betting chain in Bellary

ಐಪಿಎಲ್​ ಶುರುವಾದಾಗಿನಿಂದ ಬಳ್ಳಾರಿ ಜಿಲ್ಲೆಯಲ್ಲಿ ಬೆಟ್ಟಿಂಗ್​ ದಂಧೆ ಜೋರಾಗಿದೆ. ನಿತ್ಯವೂ ದಾಳಿ ಮಾಡಿ ಜೂಜುಕೋರರ ಬಂಧನವಾಗುತ್ತಿದ್ದರೂ ಬೆಟ್ಟಿಂಗ್​ ಮಾತ್ರ ನಿಂತಿಲ್ಲ. ಈವರೆಗೂ 116 ಜನರ ವಿರುದ್ಧ 18 ಕೇಸ್​ ದಾಖಲಾಗಿವೆ.

cricket-betting
ಕ್ರಿಕೆಟ್​ ಬೆಟ್ಟಿಂಗ್
author img

By

Published : Apr 23, 2022, 9:24 PM IST

ಬಳ್ಳಾರಿ: ಇಂಡಿಯನ್ ಪ್ರೀಮಿಯರ್‌ ಲೀಗ್‌ ಟಿ-20 ಕ್ರಿಕೆಟ್‌ ಪಂದ್ಯಾವಳಿಯ ಫೀವರ್‌ ದೇಶದಲ್ಲಿ ಜೋರಾಗಿದೆ. ಐಪಿಎಲ್‌ ಹೆಸರಿನಲ್ಲಿ ಈಗ ಬೆಟ್ಟಿಂಗ್‌ ದಂಧೆ ಕೂಡ ಅವ್ಯಾಹತವಾಗಿ ನಡೆಯುತ್ತಿದೆ. ಗಣಿ ಜಿಲ್ಲೆ ಬಳ್ಳಾರಿಯಲ್ಲೂ ಬೆಟ್ಟಿಂಗ್‌ ದಂಧೆ ಜೋರಾಗಿದೆ. ಐಪಿಎಲ್‌ ಪಂದ್ಯದ ಆರಂಭದಿಂದ ಹಿಡಿದು ಅಂತ್ಯದವರೆಗೂ ಲಕ್ಷಾಂತರ ರೂಪಾಯಿ ಬೆಟ್ಟಿಂಗ್‌ ಕಟ್ಟುವ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.

ನಗರ ಭಾಗಕ್ಕೆ ಸೀಮಿತವಾಗಿದ್ದ ಬೆಟ್ಟಿಂಗ್‌ ದಂಧೆ ಈಗ ಗ್ರಾಮೀಣ ಭಾಗವನ್ನೂ ಆವರಿಸಿಕೊಂಡಿದೆ. ಅದರ ಪರಿಣಾಮ ಯುವಕರು ಬೆಟ್ಟಿಂಗ್‌ ಹುಚ್ಚಿಗೆ ಬಿದ್ದು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು, ಬೆಟ್ಟಿಂಗ್ ದಂಧೆಕೋರರನ್ನು ಬಂಧಿಸಿದ್ದಾರೆ. ಪೊಲೀಸರು ನಿತ್ಯ ದಾಳಿ ಮಾಡಿ ಹಲವರನ್ನು ಬಂಧಿಸಿ ಪ್ರಕರಣ ದಾಖಲಿಸುತ್ತಿದ್ದರೂ ಜೂಜಿಗೆ ಮಾತ್ರ ಕಡಿವಾಣ ಬಿದ್ದಿಲ್ಲ.

ಮೊಬೈಲ್​ ಮೂಲಕ ದಂಧೆ: ಇನ್ನು ಕೆಲವರು ಮೊಬೈಲ್‌ ಆ್ಯಪ್‌ ಮೂಲಕ ಬೆಟ್ಟಿಂಗ್‌ ಆಡುತ್ತಿರುವುದರಿಂದ ಜಾಲಕ್ಕೆ ತಡೆಯೊಡ್ಡುವುದೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಪೊಲೀಸರ ಕೈಗೆ ಸಿಗುವವರೆಲ್ಲ ಸಾಮಾನ್ಯ ಬುಕ್ಕಿಗಳಾಗಿದ್ದು, ಬೆಟ್ಟಿಂಗ್‌ ಕಿಂಗ್‌ಪಿನ್‌ ಮತ್ತು ಪ್ರಮುಖ ಬುಕ್ಕಿಗಳ ಬಂಧನ ಸಾಧ್ಯವಾಗುತ್ತಿಲ್ಲ. ಯುವ ಸಮುದಾಯ ಹೆಚ್ಚಾಗಿ ಬೆಟ್ಟಿಂಗ್‌ ಗೀಳು ಬೆಳೆಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.

ಪ್ರತಿನಿತ್ಯ ಜಿಲ್ಲೆಯ ಹಲವು ಠಾಣೆಗಳಲ್ಲಿಅಕ್ರಮ ಬೆಟ್ಟಿಂಗ್‌ ದಂಧೆ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 15 ದಿನದಲ್ಲಿ ಜಿಲ್ಲೆಯಲ್ಲಿ 18 ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದ್ದು, 13 ಲಕ್ಷ ರೂಪಾಯಿ ಜಪ್ತಿ ಮಾಡಿ ಹಲವರನ್ನು ಬಂಧಿಸಲಾಗಿದೆ. ದಂಧೆಯಲ್ಲಿ ಭಾಗಿಯಾದ 116 ಜನರ ವಿರುದ್ದ ಕೇಸ್ ದಾಖಲಿಸಲಾಗಿದೆ.

ಬಳ್ಳಾರಿಯ ಕೌಲಬಜಾರ, ಬ್ರೂಸಪೇಟೆ, ಗಾಂಧಿನಗರ ಕಂಪ್ಲಿ ಸಿರಗುಪ್ಪ ಸೇರಿದಂತೆ ಹಲವು ಪೊಲೀಸ್​ ಠಾಣೆಯಲ್ಲಿ ಈಗಾಗಲೇ ಕ್ರಿಕೆಟ್‌ ಬೆಟ್ಟಿಂಗ್ ದಂಧೆಯಲ್ಲಿ ಭಾಗಿಯಾದವರ ವಿರುದ್ದ ಕೇಸ್ ದಾಖಲಾಗಿದೆ. ಮೊಬೈಲ್ ಹಾಗೂ ಆ್ಯಪ್ ಮೂಲಕ ಆರೋಪಿಗಳು ಬೆಟ್ಟಿಂಗ್ ನಡೆಸುತ್ತಿದ್ದರು ಎಂದು ಎಸ್​ಪಿ ಸೈದುಲು ಅಡಾವತ್ ಮಾಹಿತಿ ನೀಡಿದರು.

ಇದನ್ನೂ ಓದಿ: ಮೈಸೂರು: ಪಿಯುಸಿ ಪರೀಕ್ಷೆಗೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.