ETV Bharat / state

ಪತಿಯ ಅಂತ್ಯಸಂಸ್ಕಾರ ಮುಗಿಸಿ ಮನೆಗೆ ಬಂದ ಪತ್ನಿಯೂ ಕೊನೆಯುಸಿರು! - ವಿಜಯನಗರ ಮೃತ ಪ್ರಕರಣ

ಕೊರೊನಾಗೆ ತುತ್ತಾಗಿ ಪರಮೇಶ್ವರಪ್ಪ ಅವರು ನಿನ್ನೆ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರ ಮುಗಿಸಿಕೊಂಡು ಬಂದ ಪತ್ನಿ ವಾಮದೇವಮ್ಮ ಅವರಿಗೆ ಹೃದಯಾಘಾತವಾಗಿದೆ.

vijayanagara couple death news
ಸಾವಿನಲ್ಲೂ ಒಂದಾದ ದಂಪತಿ
author img

By

Published : May 25, 2021, 11:49 AM IST

ಹೊಸಪೇಟೆ (ವಿಜಯನಗರ): ವಿಜಯನಗರ ಜಿಲ್ಲೆಯ ಅಪ್ಪೇನಹಳ್ಳಿಯಲ್ಲಿ ನಿನ್ನೆ ಪತಿ-ಪತ್ನಿ ಸಾವನ್ನಪ್ಪಿ, ಸಾವಿನಲ್ಲೂ ಒಂದಾಗಿದ್ದಾರೆ.

ಕೆಳ ದಿನಗಳ ಹಿಂದೆ ಗುತ್ತಿಗೆದಾರ ಪರಮೇಶ್ವರಪ್ಪ (65) ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಬಳ್ಳಾರಿ ವಿಮ್ಸ್​ನಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.‌ ಆದ್ರೆ ಚಿಕಿತ್ಸೆ ಫಲಿಸದೆ ನಿನ್ನೆ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಯ ಯಡವಟ್ಟು, ಗ್ರಾಮಸ್ಥರ ಅಮಾನವೀಯತೆ: ಊರ ಹೊರಗೆ ಶವವಿಟ್ಟು ಕುಟುಂಬ ಕಣ್ಣೀರು

ಸಂಜೆ ಪತಿಯ ಅಂತ್ಯಸಂಸ್ಕಾರ ಮುಗಿಸಿಕೊಂಡು ಪತ್ನಿ ವಾಮದೇವಮ್ಮ (60) ಮನೆಗೆ ಬಂದಿದ್ದಾರೆ. ಪತಿಯ ಸಾವಿನಿಂದ‌ ನೊಂದಿದ್ದ ವಾಮದೇವಮ್ಮ ಅವರಿಗೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.