ಬಳ್ಳಾರಿ : ಸಾಲಬಾಧೆ ತಾಳಲಾರದೇ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಳ್ಳಾರಿ ನಗರದ ಬಂಡಿಹಟ್ಟಿಯಲ್ಲಿ ಇಂದು ನಡೆದಿದೆ. ಮೃತ ದಂಪತಿಯನ್ನು ಈರಣ್ಣ(28), ಪತ್ನಿ ದುರ್ಗಮ್ಮ(25) ಎಂದು ಗುರುತಿಸಲಾಗಿದೆ. ದಂಪತಿ ಸಾವಿನಿಂದಾಗಿ 16 ತಿಂಗಳ ಮಗು ಅನಾಥವಾಗಿದೆ.
ಕುಡಿತದ ಚಟಕ್ಕೆ ದಾಸನಾಗಿದ್ದ ಈರಣ್ಣ ಮೈ ತುಂಬಾ ಸಾಲ ಮಾಡಿಕೊಂಡಿದ್ದ. ಪತ್ನಿ ದುರ್ಗಮ್ಮ ಕೆಲಸಕ್ಕೆ ಹೋಗಿ ಕುಟುಂಬವನ್ನು ಸಾಕುತ್ತಿದ್ದಳು. ಅಲ್ಲದೆ ಈರಣ್ಣ ಕುಡಿಯಲು ಪತ್ನಿ ದುರ್ಗಮ್ಮ ಬಳಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದ. ಈರಣ್ಣನು ಹೆಂಡತಿ ದುಡಿದ ಹಣ ಕಿತ್ತುಕೊಂಡು ಮದ್ಯ ಸೇವನೆ ಮಾಡುತ್ತಿದ್ದನು. ಅಲ್ಲದೆ ಹಣ ನೀಡದಾಗ ಪತ್ನಿ ಮೇಲೆ ಹಲ್ಲೆ ನಡೆಸುತ್ತಿದ್ದನಂತೆ.
ಇವೆಲ್ಲದರಿಂದ ಬೇಸತ್ತು ದುರ್ಗಮ್ಮ ಮನೆಯಲ್ಲಿ ಸಾವಿಗೆ ಶರಣಾಗಿದ್ದಾಳೆ. ಕುಡಿತದ ಕಿರುಕುಳದಿಂದಲೇ ಪತ್ನಿ ಸಾವಿಗೀಡಾಗಿದ್ದಾಳೆ ಎಂಬ ಆರೋಪ ತನ್ನ ಮೇಲೆ ಬರಬಹುದು ಎಂದು ಹೆದರಿದ ಪತಿ ಈರಣ್ಣ, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಕುರಿತು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು: ಎತ್ತಿನಗಾಡಿ ಸ್ಪರ್ಧೆ ವೇಳೆ ನೊಗ ಬಡಿದು ಯುವಕ ಸಾವು