ETV Bharat / state

ಕೊರೊನಾ ಭೀತಿ.. ಹೊಸಪೇಟೆ ಹೋಟೆಲ್‌ವೊಂದರಲ್ಲಿ 16 ಮಂದಿ ವಿದೇಶಿಗರನ್ನ ಬಂಧಿಸಿಟ್ಟು ಪರೀಕ್ಷೆ..

ಕಳೆದ ಹದಿನಾಲ್ಕು ದಿನಗಳ ಹಿಂದೆ ಹೊರ ದೇಶಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನ ಜಿಂದಾಲ್ ವಿದ್ಯಾನಗರ ಏರ್‌ಪೋರ್ಟ್, ಹೊಸಪೇಟೆ, ಬಳ್ಳಾರಿ ರೈಲು ನಿಲ್ದಾಣ, ಹಂಪಿಯ ವಿಜಯ ವಿಠ್ಹಲ ದೇಗುಲ ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಸ್ಕ್ರೀನ್ ಮ್ಯಾಪಿಂಗ್ ಮಾಡಲಾಗಿದೆ. ಈವರೆಗೂ ಶಂಕಿತ ಹತ್ತು ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ.

Corona Virus Panic
ಜಿಲ್ಲಾಧಿಕಾರಿ ಎಸ್​.ಎಸ್.ನಕುಲ್
author img

By

Published : Mar 14, 2020, 8:58 PM IST

ಬಳ್ಳಾರಿ : ಕೊರೊನಾ ವೈರಸ್ ಭೀತಿ ಹೆಚ್ಚಾಗಿರುವುದರಿಂದ ಜಿಲ್ಲೆಯ ವಿಶ್ವ ಪ್ರಸಿದ್ಧ ಹಂಪಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ನಿರ್ಬಂಧಿಸಲು ಭಾನುವಾರ ಬೆಳಗ್ಗೆ 6ರಿಂದ ಒಂದು ವಾರದ ಅವಧಿಗೆ 144 (3) ಸೆಕ್ಷನ್ ಜಾರಿಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌ ಎಸ್‌ ನಕುಲ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರದೇಶಗಳಿಂದ ಬರುವ ಪ್ರವಾಸಿಗರನ್ನು ಹಂಪಿಯೊಳಗೆ ಬಿಡಬಾರದು. ಹಾಗೂ ಹಂಪಿ ವೀಕ್ಷಣೆಗೆಂದು ಆಗಮಿಸುವ ಪ್ರವಾಸಿಗರು ಮುಂಗಡವಾಗಿ ಬುಕ್ ಮಾಡಿಕೊಳ್ಳುತ್ತಿದ್ದ ಟಿಕೆಟ್ ಕೌಂಟರ್ ಬಂದ್ ಮಾಡಲಾಗಿದೆ ಎಂದರು.

ಕಳೆದ ಹದಿನಾಲ್ಕು ದಿನಗಳ ಹಿಂದೆ ಹೊರ ದೇಶಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನ ಜಿಂದಾಲ್ ವಿದ್ಯಾನಗರ ಏರ್‌ಪೋರ್ಟ್, ಹೊಸಪೇಟೆ, ಬಳ್ಳಾರಿ ರೈಲು ನಿಲ್ದಾಣ, ಹಂಪಿಯ ವಿಜಯ ವಿಠ್ಹಲ ದೇಗುಲ ಸೇರಿದಂತೆ ಬಸ್ ನಿಲ್ದಾಣಗಳಲ್ಲಿ ಸ್ಕ್ರೀನ್ ಮ್ಯಾಪಿಂಗ್ ಮಾಡಲಾಗಿದೆ. ಈವರೆಗೂ ಶಂಕಿತ ಹತ್ತು ಮಂದಿಯ ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ. ಅದರೊಳಗೆ ಈವರೆಗೆ ಮೂವರಲ್ಲಿ ನೆಗೆಟಿವ್ ಬಂದಿದೆ. ಈವರೆಗೂ ಯಾವುದೇ ಪಾಸಿಟಿವ್ ಪ್ರಕರಣಗಳು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್ ಎಸ್ ನಕುಲ್..

ಫ್ರೆಂಚ್ ಹಾಗೂ ಜರ್ಮನಿಯಿಂದ ಬಂದಿದ್ದ ಹದಿನಾರು ಮಂದಿ ವಿದೇಶಿಗರನ್ನ ಹೊಸಪೇಟೆಯ ಖಾಸಗಿ ಹೋಟೆಲ್ ಕೊಠಡಿಯಲ್ಲಿ ಬಂಧಿಸಿಡಲಾಗಿದೆ. ಅವರಿಗೆ ಕಳೆದ ಹದಿನಾಲ್ಕು ದಿನಗಳಿಂದ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಈವರೆಗೂ ಯಾವುದೇ ಪಾಸಿಟಿವ್ ಕೇಸ್ ಕಂಡು ಬಂದಿಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.