ಬಳ್ಳಾರಿ: ಕೊರೊನಾ ಎರಡನೇ ಅಲೆ ಹಿನ್ನೆಲೆ ಮೇ 15ರವರೆಗೆ ಹಂಪಿಯ ಸ್ಮಾರಕಗಳ ವೀಕ್ಷಣೆಯನ್ನು ನಿಷೇಧಿಸಿ ಭಾರತೀಯ ಪುರಾತತ್ವ ಇಲಾಖೆ ಆದೇಶ ಹೊರಡಿಸಿದೆ.
![Corona](https://etvbharatimages.akamaized.net/etvbharat/prod-images/09:10:57:1618501257_kn-hpt-09-corona-second-wave-effect-restriction-on-hampi-memorial-view-vsl-ka10031_15042021210858_1504f_1618501138_697.jpg)
ಈ ಕುರಿತು ಇಲಾಖೆಯ ಸ್ಮಾರಕಗಳ ನಿರ್ದೇಶಕ ಎನ್.ಕೆ.ಪಾಠಕ್ ಅವರು, ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಸ್ಮಾರಕಗಳು ಮತ್ತು ಮ್ಯೂಸಿಯಂಗಳ ಪ್ರವೇಶ ಬಂದ್ ಮಾಡಲು ಆದೇಶಿಸಿದ್ದಾರೆ.
ಹಂಪಿಯ ವಿರೂಪಾಕ್ಷ ದೇವರಿಗೆ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಆದರೆ ಪ್ರವಾಸಿಗರ ಮತ್ತು ಭಕ್ತರ ದರ್ಶನಕ್ಕೆ ಅವಕಾಶವಿರುವುದಿಲ್ಲ ಎಂದು ತಿಳಿಸಿದ್ದಾರೆ.