ಹೊಸಪೇಟೆ: ಕೊರೊನಾ ವೈರಸ್ ಭೀತಿ ಸಾರ್ವಜನಿಕ ವಲಯದಲ್ಲಿ ತುಂಬಾ ಪರಿಣಾಮ ಬೀರಿದ್ದು, ಇಷ್ಟು ದಿನಗಳ ಕಾಲ ಶಾಲಾ-ಕಾಲೇಜಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಆದ್ರೀಗ ನ್ಯಾಯಾಲಯಕ್ಕೂ ಕೊರೊನಾ ವೈರಸ್ ಭೀತಿ ಕಾಡಿದೆ.
ಹೊಸಪೇಟೆಯ ನ್ಯಾಯಾಲಯ ಸಂಕೀರ್ಣಕ್ಕೆ ಮಾರ್ಚ್ 16ರಿಂದ 22ರವರೆಗೆ ರಜೆ ಘೋಷಣೆ ಮಾಡಲಾಗಿದೆ. ಆದರೆ ಸಾರ್ವಜಿನಿಕರು ಪ್ರತಿನಿತ್ಯದಂತೆ ನ್ಯಾಯಾಲಕ್ಕೆ ಬಂದಿದ್ದಾರೆ. ಪೊಲೀಸ್ ಇಲಾಖೆಯ ಸಿಬ್ಬಂದಿ ಸಾರ್ವಜನಿಕರನ್ನು ನ್ಯಾಯಾಲಯದ ಒಳಗೆ ಬಿಡುತ್ತಿಲ್ಲ ಎಂದು ವಕೀಲರಾದ ನಾಗರಾಜ ಗುಜ್ಜಲ್ ತಿಳಿಸಿದ್ದಾರೆ.
ನ್ಯಾಯವಾದಿಗಳು ತಮ್ಮ ತಮ್ಮ ಕಕ್ಷಿದಾರರಿಗೆ ಮಾಹಿತಿ ನೀಡಬೇಕು ಎಂದು ಸೋಮವಾರ ಸಂಜೆ ಸಭೆ ಕರೆಯಲಾಗಿತ್ತು. ಆದರೆ ಕೆಲ ನ್ಯಾಯವಾದಿಗಳು ತಮ್ಮ ಕಕ್ಷಿದಾರರಿಗೆ ಮಾಹಿತಿ ನೀಡಿಲ್ಲ. ಹಾಗಾಗಿ ಸಾರ್ವಜನಿಕರು ನ್ಯಾಯಾಲಯಕ್ಕೆ ದೌಡಾಯಿಸಿದ್ದಾರೆ. ಮುಖ್ಯವಾದ ಆರೋಪಿಗಳು ಮತ್ತು ಇನ್ನಿತರ ಮಹತ್ವದ ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯ ಅನುಮತಿ ನೀಡಿದೆ.