ETV Bharat / state

ಜಿಂದಾಲ್​ನ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರಿಗೆ ಹೋಮ್ ಕ್ವಾರಂಟೈನ್

author img

By

Published : Jun 12, 2020, 10:39 AM IST

ಬಳ್ಳಾರಿಯ ಜಿಂದಾಲ್​ ಉಕ್ಕಿನ ಕಾರ್ಖನೆಯಲ್ಲಿ ಕೊರೊನಾ ಆತಂಕ ಮನೆ ಮಾಡಿದೆ. ನಿನ್ನೆ 40ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿದ್ದು, ಇಂದಿನಿಂದ ಹತ್ತು ಸಾವಿರ ಕಾರ್ಮಿಕರು ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ.

Jindal EMPLyees home QUARANTINE, jindal TEN THOUSAND EMPLyees home QUARANTINE, jindal TEN THOUSAND EMPLyees home QUARANTINE in bellary, TEN THOUSAND EMPLyees home QUARANTINE news, ಜಿಂದಾಲ್​ ಕಾರ್ಮಿಕರು ಹೋಮ್​ ಕ್ವಾರಂಟೈನ್​, ಹತ್ತು ಸಾವಿರ ಕಾರ್ಮಿಕರು ಹೋಮ್​ ಕ್ವಾರಂಟೈನ್​, ಬಳ್ಳಾರಿಯಲ್ಲಿ ಹತ್ತು ಸಾವಿರ ಕಾರ್ಮಿಕರು ಹೋಮ್​ ಕ್ವಾರಂಟೈನ್​, ಹತ್ತು ಸಾವಿರ ಕಾರ್ಮಿಕರು ಹೋಮ್​ ಕ್ವಾರಂಟೈನ್​ ಸುದ್ದಿ, ಬಳ್ಳಾರಿ ಜಿಂದಾಲ್​ ಸುದ್ದಿ,
ಸಂಗ್ರಹ ಚಿತ್ರ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆ ಜಿಂದಾಲ್​ನ ಅಂದಾಜು 10 ಸಾವಿರಕ್ಕೂ ಅಧಿಕ ಮಂದಿ ನೌಕರರನ್ನ ಹೋಮ್ ಕ್ವಾರಂಟೈನ್‌ ಮಾಡಲು ಜಿಂದಾಲ್ ಸಮೂಹ ಸಂಸ್ಥೆ ನಿರ್ಧರಿಸಿದೆ.

ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆ ಮೇರೆಗೆ ಜಿಂದಾಲ್ ಸಮೂಹ ಸಂಸ್ಥೆಯ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ. ಇಂದಿನಿಂದ ಮುಂದಿನ ನಾಲ್ಕು ದಿನಗಳ ಕಾಲ ಸರಿ ಸುಮಾರು 10751 ಮಂದಿ ನೌಕರರು ಹೋಮ್ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ.

ಬಳ್ಳಾರಿ ತಾಲೂಕಿನ 1793 ನೌಕರರು, ಸಂಡೂರು ತಾಲೂಕಿನ 503 ನೌಕರರು, ಹೊಸಪೇಟೆ ತಾಲೂಕಿನ 989 ನೌಕರರು, ತೋರಣಗಲ್ಲು ಸುತ್ತಲಿನ ಗ್ರಾಮಗಳ 4,262 ನೌಕರರು, ಜಿಂದಾಲ್ ಟೌನ್​ಶಿಪ್​ನಲ್ಲಿ ವಾಸವಾಗಿರುವ 3,207 ನೌಕರರು ಹೋಮ್ ಕ್ವಾರಂಟೈನ್​ನಲ್ಲಿ ಇರಲಿದ್ದಾರೆ ಎಂದು ಜಿಂದಾಲ್ ಸಮೂಹ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನಿಂದ ಜೂನ್ 16 ರವರೆಗೆ ಮನೆಯಲ್ಲಿ ಇರುವಂತೆ ಜಿಂದಾಲ್ ಸಮೂಹ ಸಂಸ್ಥೆಯು ಆದೇಶ ಹೊರಡಿಸಿದೆ.

ಸೋಂಕು ಹೆಚ್ಚಳ ಭೀತಿ: ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯಲ್ಲಿ ಕೊರೊನಾ ಭೀತಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಜಿಂದಾಲ್‌ ಸಮೂಹ ಸಂಸ್ಥೆಯ ನೂರು ಹಾಸಿಗೆಯ ಸಂಜೀವಿನಿ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.