ಹೊಸಪೇಟೆ: ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಬಳ್ಳಾರಿ ಜಿಲ್ಲೆಯ ಬೇರೆ ತಾಲೂಕಿಗೆ ಹೋಲಿಕೆಯನ್ನು ಮಾಡಿದರೆ ಹೊಸಪೇಟೆ ಹೆಚ್ಚಿನ ಪ್ರಕರಣಗಳನ್ನು ಕಾಣಬಹುದಾಗಿದೆ.
ಜಿಲ್ಲೆಯಲ್ಲಿ ಹೊಸಪೇಟೆಯಲ್ಲಿ ಮೊದಲ ಬಾರಿಗೆ ಕೊರೊನಾ ಪಾಸಿಟಿವ್ ಪ್ರಕಣಗಳು ಕಂಡು ಬರುತ್ತವೆ. ಮಾರ್ಚ್ 31 ರಂದು ಮೂರು ಪ್ರಕರಣಗಳು ಪತ್ತೆಯಾಗುತ್ತವೆ. ಬಳಿಕ 8 ಪ್ರಕರಣಗಳು ಹೊಸಪೇಟೆಯಲ್ಲಿ ಪತ್ತೆಯಾಗುತ್ತವೆ.
ಕೊರೊನಾ ಪ್ರಕರಣಗಳೆಷ್ಟು?:
ಹೊಸಪೇಟೆ ತಾಲೂಕಿನಲ್ಲಿ ಈವರೆಗೂ 4,776 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಈ ಪೈಕಿ 49 ಸಾವುಗಳು ಸಂಭವಿಸಿವೆ. 1533 ಜನರು ಹೋಮ ಐಸೋಲೇಶನ್ಗೆ ಒಳಗಾಗಿದ್ದರು. ಅದರಲ್ಲಿ 1,302 ರೋಗಿಗಳು ಡಿಸ್ಜಾರ್ಜ್ ಆಗಿದ್ದಾರೆ. ಇನ್ನು 225 ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಕೇರ್ ಸೆಂಟರ್ಗಳು: ನಗರದಲ್ಲಿ ಎರಡು ಕೋವಿಡ್ ಕೇರ್ ಸೆಂಟರ್ಗಳನ್ನು ತೆರೆಯಲಾಗಿದೆ. ಎಂಸಿಹೆಚ್ ಹಾಗೂ ಜಂಬುನಾಥ ರಸ್ತೆ ಹಾಸ್ಟೆಲ್ ಅನ್ನು ಕೋವಿಡ್ ಕೇರ್ ಸೆಂಟರ್ ಮಾಡಲಾಗಿದೆ. ಎಂಸಿಹೆಚ್ನಲ್ಲಿ 201 ಕೊರೊನಾ ರೋಗಿಗಳು ಚಿಕಿತ್ಸೆಗಾಗಿ ದಾಖಲುಗೊಂಡಿದ್ದರು. ಈ ಪೈಕಿ 129 ಡಿಸ್ಜಾರ್ಜ್ ಆಗಿದ್ದಾರೆ. 14 ಜನ ರೋಗಿಗಳು ಸಾವನ್ನಪ್ಪಿದ್ದಾರೆ. 58 ರೋಗಿಗಳು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. 60 ಹಾಸಿಗೆವುಳ್ಳ ಆಸ್ಪತ್ರೆ ಇದಾಗಿದೆ.
ಜಂಬುನಾಥ ಗುಡ್ಡ ರಸ್ತೆಯಲ್ಲಿನ ಹಾಸ್ಟೆಲ್ನ ಕೋವಿಡ್ ಕೇರ್ ಸೆಂಟರ್ನಲ್ಲಿ 708 ಕೊರೊನಾ ರೋಗಿಗಳು ದಾಖಲಾಗಿದ್ದರು. ಈ ಪೈಕಿ 626 ಜನ ಡಿಸ್ಜಾರ್ಜ್ ಆಗಿದ್ದಾರೆ. ಇನ್ನು 41 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಡ್-150 ಹಾಸಿಗೆವುಳ್ಳ ಆಸ್ಪತ್ರೆ ಇದಾಗಿದೆ. ನಗರದಲ್ಲಿ ಮೂರು ಫಿವರ್ ಕ್ಲಿನಿಕ್ಗಳನ್ನು ತೆರೆಯಲಾಗಿದೆ.
ನೂರರ ಹಾಸಿಗೆ ಆಸ್ಪತ್ರೆ, ಒಳಾಂಗಣ ಕ್ರೀಡಾಂಗಣ, ಬಳ್ಳಾರಿ ರಸ್ತೆ ವೃತ್ತದ ಅಂಬೇಡ್ಕರ್ ಶಾಲೆಯಲ್ಲಿ ಕೊರೊನಾ ತಡೆಗಟ್ಟಲು ತೆಗೆದುಕೊಂಡ ಕ್ರಮಗಳು:
ಕಂಟೈನ್ಮೆಂಟ್ ಹೊರತುಪಡಿಸಿ ಸ್ಪೇಶಲ್ ಸರ್ವೆ ಮಾಡಲಾಯಿತು. ಹೆಚ್ಚಿನ ಪ್ರಕರಣಗಳು ಬಂದಿರುವ ವಾರ್ಡ್ಗಳಲ್ಲಿ ಸರ್ವೆ ಮಾಡಲಾಯಿತು. ಬಿಪಿ, ಶುಗರ್, ಕ್ಯಾನ್ಸರ್, ಗರ್ಭಿಣಿ, ಟಿಬಿ ಕಾಯಿಲೆ, ಕಿಡ್ನಿ ಸಮಸ್ಯೆ ಹಾಗೂ 60 ವರ್ಷ ಮೇಲ್ಪಟ್ಟವರನ್ನು ತಪಾಸಣೆಗೆ ಒಳಪಡಿಸಲಾಯಿತು. ಪಲ್ಸ್ ಆಕ್ಸಿಮೀಟರ್ ಆಕ್ಸಿಜನ್ ಪ್ರಮಾಣವನ್ನು ಪರೀಕ್ಷೆ ಮಾಡಲಾಯಿತು. ಆಕ್ಸಿಜನ್ ಕಡಿಮೆ ಇರುವವರಿಗೆ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು.
400 ಜನರ ಪೈಕಿ 100 ಜನರಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿತ್ತು. ಪ್ರತಿ ದಿನಕ್ಕೆ 200 ರಿಂದ 350 ರವರೆಗೆ ಟೆಸ್ಟ್ ಮಾಡಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆ ತೆರಳುತ್ತಿದ್ದಾರೆ. ಅಲ್ಲದೇ, ಶಾಲೆಯ ಶಿಕ್ಷಕರಿಂದ ಕೊರೊನಾ ಪಾಸಿಟಿವ್ ಬಂದತಹ ವ್ಯಕ್ತಿಗಳ ಸಂಪರ್ಕವನ್ನು ಹುಡುಕುತ್ತಿದ್ದಾರೆ.
ಕೊರೊನಾ ಪ್ರಕರಣಗಳು ಹೆಚ್ಚಾಗಲು ಕಾರಣಗಳು:
ಜಿಂದಾಲ್ ಉದ್ಯೋಗಿ ಹಾಗೂ ಬೇರೆ ರಾಜ್ಯದಿಂದ ಬಂದವರಿಂದ ಕೊರೊನಾ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೇ ಹೊಸಪೇಟೆ ನಗರ 2.50 ಲಕ್ಷ ಹಾಗೂ ಗ್ರಾಮೀಣ ಭಾಗದಲ್ಲಿ 2.25 ಲಕ್ಷ ಜನ ಸಂಖ್ಯೆವಿದೆ. ಬೇರೆ ತಾಲೂಕಿನಲ್ಲಿ ಇಷ್ಟು ಜನಸಂಖ್ಯೆ ಕಾಣಸಿಗುವುದಿಲ್ಲ. ಲಾಕ್ಡೌನ್ ಸಂದರ್ಭದಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿಲ್ಲ. ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಚಿಕಿತ್ಸೆಗಾಗಿ ದಾಖಲಿಸಿಕೊಳ್ಳುತ್ತಿಲ್ಲ. ಸುಖಾ ಸುಮ್ಮನೆ ಬಳ್ಳಾರಿಗೆ ಕಳುಹಿಸಿ ಭಯ ಭೀತಿಗೊಳಿಸುತ್ತಿರುವುದು. ಇದು ಕೊರೊನಾ ಹೆಚ್ಚಾಗಲು ಕಾರಣ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ.
ಇನ್ನು ಹೊಸಪೇಟೆ ತಾಲೂಕು ವೈದ್ಯಾಧಿಕಾರಿ ಡಾ.ಡಿ.ಭಾಸ್ಕರ್ ಅವರು ಮಾತನಾಡಿ, ಕೊರೊನಾ ಪಾಸಿಟಿವ್ ಹೆಚ್ಚಾಗದಂತೆ ಜಾಗೃತ ವಹಿಸಲಾಗಿದೆ. ಕಳೆದ ಒಂದು ವಾರದಿಂದ ಕೊರೊನಾ ಪಾಸಿಟಿವ್ ಪ್ರಕರಣಗಳು ಹತೋಟಿಗೆ ಬರುತ್ತಿವೆ. ಸರ್ಕಾರದ ಮಾರ್ಗದರ್ಶನದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದರು.