ETV Bharat / state

ಟ್ರಬಲ್ ಶೂಟರ್​​ ಇಡಿ ಬಲೆಯಿಂದ ಮುಕ್ತರಾಗಲು ಕಾಂಗ್ರೆಸ್​ ಕಾರ್ಯಕರ್ತೆಯರಿಂದ ತೆಂಗಿನಕಾಯಿ ಹರಕೆ!

ತೆಂಗಿನಕಾಯಿ ಒಡೆಯೋ ಮುಖೇನ ಟ್ರಬಲ್ ಶೂಟರ್, ಡಿ.ಕೆ.ಶಿವಕುಮಾರ್​ ಅವರು ಆದಷ್ಟು ಬೇಗನೆ ಬೆಂಗಳೂರಿಗೆ ವಾಪಾಸ್ ಆಗಲಿ ಎಂದು, ಬಳ್ಳಾರಿಯಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೆಂಗಿನಕಾಯಿ ಹರಕೆ ತೀರಿಸಿದರು.

ತೆಂಗಿನಕಾಯಿ ಹರಕೆ
author img

By

Published : Sep 3, 2019, 1:42 PM IST

ಬಳ್ಳಾರಿ: ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಅನಗತ್ಯವಾಗಿ ಜಾರಿ ನಿರ್ದೇಶನಾಲಯವು (ಇಡಿ) ನೀಡುತ್ತಿರುವ ಕಿರುಕುಳದಿಂದ ಬಹುಬೇಗನೆ ಮುಕ್ತರಾಗಬೇಕೆಂದು, ಗಣಿನಗರಿ ಬಳ್ಳಾರಿಯ ಕನಕದುರ್ಗಮ್ಮ ದೇಗುಲದಲ್ಲಿಂದು ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೆಂಗಿನಕಾಯಿ ಹರಕೆ ತೀರಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಟಿ.ಪದ್ಮಾ ಹಾಗೂ ಹಿರಿಯ ಕಾಂಗ್ರೆಸ್ ಸದಸ್ಯೆ ಜಿ.ಕಮಲಾ ಮರಿಸ್ವಾಮಿಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ಜಮಾಯಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಅಂದಾಜು ನೂರೊಂದು ತೆಂಗಿನಕಾಯಿ ಒಡೆಯೋ ಮುಖೇನ ಟ್ರಬಲ್ ಶೂಟರ್, ಡಿ.ಕೆ.ಶಿವಕುಮಾರ್​ ಅವರು ಆದಷ್ಟು ಬೇಗನೆ ಬೆಂಗಳೂರಿಗೆ ವಾಪಾಸ್ ಆಗಲಿ ಎಂದು ಕನಕದುರ್ಗಮ್ಮ ದೇವಿಯಲ್ಲಿ ಪ್ರಾರ್ಥಿಸಿದ್ದಾರೆ.

ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ತೆಂಗಿನಕಾಯಿ ಹರಕೆ

ಹಿರಿಯ ಕಾಂಗ್ರೆಸ್ ಸದಸ್ಯೆ ಕಮಲಾ ಮರಿಸ್ವಾಮಿ ಮಾತನಾಡಿ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ಅವರಿಗೆ ಇಡಿ ಸಂಸ್ಥೆಯಿಂದ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಮುಖ ರೂವಾರಿಗಳಾದ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರೇ ಪ್ರಮುಖ ಕಾರಣರಾಗಿದ್ದಾರೆ. ಈ ಉಭಯ ನಾಯಕರು ಹಳೆಯ ದ್ವೇಷವನ್ನು ಸಾಧಿಸುತ್ತಿದ್ದಾರೆ.‌ ಗುಜರಾತ್ ಶಾಸಕರನ್ನ ಕೂಡಿ ಹಾಕುವಲ್ಲಿ ಯಶಸ್ವಿ ಆಗಿದ್ದ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ಹಗೆತನ ಸಾಧಿಸಿದ್ದಾರೆ. ಅವರೊಬ್ಬ ಬಂಡೆ ಇದ್ದಂತೆ.‌ ಇಂತಹ ನೂರು ಮಂದಿ ಮೋದಿ, ಅಮಿತ್ ಷಾ ಅವರು ಬಂದ್ರೂ ಏನೂ ಮಾಡಲಿಕ್ಕಾಗಲ್ಲ ಎಂದು ಕುಟುಕಿದರು.

Intro:ಟ್ರಬಲ್ ಶೂಟರ್ ಗೆ ಇಡಿ ಟ್ರಬಲ್ ಗೆ ವಿರೋಧ
ಗಣಿನಗರಿಯ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಿಂದ ತೆಂಗಿನಕಾಯಿ ಹರಕೆ..!
ಬಳ್ಳಾರಿ: ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಳ್ಳುವ
ಹಾಲಿ ಶಾಸಕ ಡಿ.ಕೆ.ಶಿವಕುಮಾರ ಅವರು ಅನಗತ್ಯವಾಗಿ
ಜಾರಿ ನಿರ್ದೇಶನಾಲಯವು (ಇಡಿ) ನೀಡುತ್ತಿರುವ ಕಿರುಕುಳದಿಂದ ಬಹುಬೇಗನೆ ಮುಕ್ತರಾಗಬೇಕೆಂದು ಗಣಿ
ನಗರಿ ಬಳ್ಳಾರಿಯ ಕನಕದುರ್ಗಮ್ಮ ದೇಗುಲದಲ್ಲಿಂದು
ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ತೆಂಗಿನಕಾಯಿ
ಹರಕೆ ತೀರಿಸಿದ್ದಾರೆ.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಟಿ.ಪದ್ಮಾ ಹಾಗೂ ಹಿರಿಯ ಕಾಂಗ್ರೆಸ್ ಸದಸ್ಯೆ ಜಿ.ಕಮಲಾ ಮರಿಸ್ವಾಮಿಯವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತೆಯರು ಜಮಾಯಿಸಿ ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು.
ಕುರುಬ ಸಮುದಾಯದ ಮಹಿಳಾ ಕಾರ್ಯಕರ್ತೆಯೊಬ್ಬರಿಂದ ತೆಂಗಿನಕಾಯಿ ಒಡೆಸಿದರು. ಆ ಬಳಿಕ, ಒಬ್ಬೊಬ್ಬರಾದಿಯಾಗಿ ಅಂದಾಜು ನೂರೊಂದು ತೆಂಗಿನಕಾಯಿ ಒಡೆಯೋ ಮುಖೇನ ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಳ್ಳುವ ಡಿ.ಕೆ.ಶಿವ ಕುಮಾರ ಅವರು ಆದಷ್ಟುಬೇಗನೆ ಬೆಂಗಳೂರಿಗೆ ವಾಪಾಸ್ ಆಗಲಿ ಎಂದು ಆ ಕನಕದುರ್ಗಮ್ಮ ದೇವಿಯಲ್ಲಿ ಪ್ರಾರ್ಥಿಸಿ ದ್ದಾರೆ.
ಇದಕ್ಕೂ ಮುಂಚೆ ಕನಕದುರ್ಗಮ್ಮ ದೇಗುಲದಲ್ಲಿ ಅಭಿಷೇಕ ಹಾಗೂ ವಿಶೇಷಪೂಜೆಯನ್ನು ಸಲ್ಲಿಸಿದರು. ವಿಶೇಷಪೂಜೆಯ ಆರತಿಯನ್ನು ಹೊರಗಡೆ ತೆಂಗಿನಕಾಯಿ ಹರಕೆ ತೀರಿಸುವ ಜಾಗ ಕ್ಕೆ ಅರ್ಚಕರು ತಂದು ಪ್ರದಕ್ಷಿಣೆ ಮಾಡುವ ಹರಕೆ ತೀರಿಕೆಯ ಕಾರ್ಯಕ್ಕೆ ಚಾಲನೆ ನೀಡಲಾಯಿತು.

Body:ಹಿರಿಯ ಕಾಂಗ್ರೆಸ್ ಸದಸ್ಯೆ ಕಮಲಾ ಮರಿಸ್ವಾಮಿ ಮಾತನಾಡಿ, ಹಾಲಿ ಶಾಸಕ ಡಿ.ಕೆ.ಶಿವಕುಮಾರ ಅವರಿಗೆ ಇಡಿ ಸಂಸ್ಥೆಯಿಂದ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಪ್ರಮುಖ ರೂವಾರಿಗಳಾದ ಪ್ರಧಾನಿ ಮೋದಿ ಮತ್ತು ಅಮಿತ್ ಷಾ ಅವರೇ ಪ್ರಮುಖ ಕಾರಣರಾಗಿದ್ದಾರೆ. ಈ ಉಭಯ ನಾಯಕರು ಹಳೆಯ ದ್ವೇಷವನ್ನು ಸಾಧಿಸುತ್ತಿದ್ದಾರೆ.‌
ಗುಜರಾತ್ ಶಾಸಕರನ್ನ ಕೂಡಿ ಹಾಕುವಲ್ಲಿ ಯಶಸ್ವಿ ಆಗಿದ್ದ
ಡಿ.ಕೆ.ಶಿವಕುಮಾರ ಅವರ ವೈಯಕ್ತಿಕ ಹಗೆತನ ಸಾಧಿಸಿದ್ದಾರೆ. ಅವರೊಬ್ಬ ಬಂಡೆ ಇದ್ದಂತೆ.‌ ಇಂತಹ ನೂರು ಮಂದಿ ಮೋದಿ, ಅಮಿತ್ ಷಾ ಅವರು ಬಂದ್ರೂ ಏನೂ ಮಾಡಲಿಕ್ಕಾಗಲ್ಲ ಎಂದು ಕುಟುಕಿದ್ದಾರೆ.
ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಟಿ.ಪದ್ಮಾ ಅವರು, ಬಿಜೆಪಿಯವ್ರು ಇಡಿ ಸಂಸ್ಥೆಯನ್ನು ಮುಂದಿಟ್ಟುಕೊಂಡು ಅನಗತ್ಯವಾಗಿ ಡಿಕೆಶಿಗೆ ಕಿರುಕುಳ ನೀಡುತ್ತಿದ್ದಾರೆ. ಆದಷ್ಟು ಬೇಗನೆ ಇಡಿ ಟ್ರಬಲ್ ನಿಂದ ಮುಕ್ತರಾಗಿ ನಿರ್ದೋಷಿಯಾಗಿ ಹೊರ ಬರಲಿದ್ದಾರೆ. ಆಗಾಗಿ, ಈ ದಿನ ತೆಂಗಿನಕಾಯಿ ಹರಕೆಯನ್ನು ‌ತೀರಿಸಲಾಯಿತೆಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ‌ನಲ್ಲಿ ಈ ವಿಡಿಯೊ ಕಳಿಸಿರುವೆ. ‌ಗಮನಿಸಿರಿ.
KN_BLY_1_DKS_ED_TROUBLE_CONGRESS_WOMAN_WING_HARAKE_VISUALS_7203310

ಬೈಟ್ 1 : ಕಮಲಾ ಮರಿಸ್ವಾಮಿ, ಕಾಂಗ್ರೆಸ್ ಹಿರಿಯ ಸದಸ್ಯೆ.

ಬೈಟ್ 2 : ಟಿ.ಪದ್ಮಾ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.