ಬಳ್ಳಾರಿ: ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿನ ಅತಿಥಿ ಗೃಹದಲ್ಲಿ 50 ಬೆಡ್ಗಳ ಸೌಲಭ್ಯವುಳ್ಳ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರವನ್ನ ಆರಂಭಿಸಲಾಗಿದೆ.
ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ಮಾತನಾಡಿ, ಹೋಮ್ ಐಸೋಲೇಷನ್ನಲ್ಲಿರುವವರನ್ನ ಈ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸರ್ಕಾರಿ ಅತಿಥಿ ಗೃಹದಲ್ಲಿ ಉಚಿತವಾಗಿ ಕೋವಿಡ್ ಕೇರ್ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ ಎಂದರು.
ವೈದ್ಯ ಡಾ. ವಿಜಯ ಭಾಸ್ಕರ್ ರೆಡ್ಡಿ ಮಾತನಾಡಿ, ಹೋಮ್ ಐಸೋಲೇಷನ್ನಲ್ಲಿರುವವರಿಗೆ ಅವರ ಮನೆಯಲ್ಲಿ ಕೊಠಡಿಗಳ ಕೊರತೆ ಇದ್ದರೆ, ಅವರು ಇಲ್ಲಿ ಬಂದು ಇರಬಹುದು. ತುರ್ತು ಸಮಯದಲ್ಲಿ ಮಾತ್ರ ವೈದ್ಯರ ಸೌಲಭ್ಯವನ್ನ ಕಲ್ಪಿಸಲಾಗುತ್ತೆ. ವಿಶ್ವವಿದ್ಯಾಲಯದ ಈ ಕೇರ್ ಐಸೋಲೇಷನ್ನಲ್ಲಿರುವವರಿಗೆ ಯೋಗ, ವ್ಯಾಯಾಮ, ಧ್ಯಾನ, ಪ್ರಾಣಾಯಾಮ, ಓದಲು ಪುಸ್ತಕ ಹಾಗೂ ಧನಾತ್ಮಕ ಚಿಂತನೆಗಳನ್ನ ಬೆಳೆಸುವ ವಿಡಿಯೋಗಳನ್ನ ತೋರಿಸಿ, ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲಾಗುವುದು ಎಂದರು.
ಇದನ್ನೂ ಓದಿ : ಆಕ್ಸಿಜನ್ ಕೊರತೆ: ಅಫಜಲಪುರ ತಾಲೂಕು ಆಸ್ಪತ್ರೆಯಲ್ಲೂ ನಾಲ್ವರು ರೋಗಿಗಳು ಸಾವು!