ಬಳ್ಳಾರಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿಜಯನಗರದ ಹೊಸ ಜಿಲ್ಲೆ ಘೋಷಣೆಗೂ ಮುನ್ನ ಈ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಸಂಸದರ ಸಭೆ ಕರೆದು ಮಾತನಾಡುತ್ತಾರೆ ಎಂದು ಶಾಸಕ ಜಿ. ಸೋಮಶೇಖರ್ ರೆಡ್ಡಿ ಹೇಳಿದ್ರು.
ಪಟೇಲ್ ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ವಿಜಯನಗರ ಜಿಲ್ಲೆ ಘೋಷಣೆ ಬಗ್ಗೆ ಸಿಎಂ ಸಭೆಯನ್ನು ಕರೆದು ಮಾತನಾಡುತ್ತಾರೆ ಎಂದರು. ಇನ್ನು ಹಂಪಿ ಉತ್ಸವಕ್ಕೆ ಕೇವಲ 10 ದಿನಗಳು ಬಾಕಿ ಇದೆ. ಸಿಎಂ ಸಭೆ ಕರೆದು ವಿಜಯನಗರದ ಜಿಲ್ಲೆಯ ಬಗ್ಗೆ ಮಾತನಾಡುತ್ತಾರೆ. ಸಭೆಯ ನಂತರ ತೀರ್ಮಾನ ಮಾಡಲಾಗುತ್ತದೆ. ಸ್ವಲ್ಪ ಸಮಯವಕಾಶ ಬೇಕಾಗುತ್ತದೆ ಎಂದು ತಿಳಿಸಿದರು.
ಒಟ್ಟಾರೆಯಾಗಿ ವಿಜಯನಗರದ ಜಿಲ್ಲೆ ಘೋಷಣೆ ಆಗುತ್ತೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.