ಬಳ್ಳಾರಿ : ಇಲ್ಲಿನ ರೈಲ್ವೆ ಬೋಗಿಯಲ್ಲಿ ಬಿಟ್ಟು ಹೋಗಿದ್ದ ಮಗುವಿಗೆ ಒಂದು ವರ್ಷ ತುಂಬಿದೆ. ಆ ಮಗುವಿನ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ಕಳೆದೊಂದು ವರ್ಷದ ಹಿಂದೆ ಬಳ್ಳಾರಿ ರೈಲ್ವೆ ನಿಲ್ದಾಣದ ಬೋಗಿಯಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿತ್ತು. ಅದನ್ನು ಅಧಿಕಾರಿಗಳು ರಕ್ಷಿಸಿ ಸರ್ಕಾರಿ ಶಿಶು ಗೃಹಕ್ಕೆ ತಂದು ಸಾಕುತ್ತಿದ್ದು, ನಿಶ್ವಿತಾ ಎಂದು ಆ ಮಗುವಿಗೆ ಈಗಾಗಲೇ ನಾಮಕರಣವನ್ನೂ ಮಾಡಲಾಗಿದೆ.
ಇಂದು ಆ ಮಗುವಿಗೆ ಒಂದು ವರ್ಷ ತುಂಬಿದೆ. ನಿಶ್ಚಿತಾಳ ಹುಟ್ಟು ಹಬ್ಬವನ್ನು ಶಿಶುಗೃಹದ ಸಿಬ್ಬಂದಿಯೆಲ್ಲ ಸೇರಿ ಸಂತಸ ಮತ್ತು ಸಂಭ್ರಮದಿಂದ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದಪಾಶಾ ಸೇರಿ ಸಂಸ್ಥೆಯ ಅಧೀಕ್ಷಕರು ಹಾಗೂ ಸಿಬ್ಬಂದಿ ಇದ್ದರು.