ETV Bharat / state

ಉತ್ಸವ ಡೇ ಹಂಪಿ ಕಾರು-ಬೈಕ್ ರೇಸಿಂಗ್ ಸ್ಪೋರ್ಟ್ಸ್: ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

author img

By

Published : Jan 31, 2020, 4:16 AM IST

Updated : Jan 31, 2020, 7:17 AM IST

ಐತಿಹಾಸಿಕ ನಗರಿ ಹಂಪಿಯಲ್ಲಿ ಕಾರು ಮತ್ತು ಬೈಕ್ ರೇಸಿಂಗ್ ಸ್ಪೋರ್ಟ್ಸ್ ಆಯೋಜಿಸಲಾಗಿದ್ದು, ನಾನಾ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದಾರೆ.

car and bike racing games in hampi,ಉತ್ಸವ ಡೇ ಹಂಪಿ ಕಾರು-ಬೈಕ್ ರೇಸಿಂಗ್ ಸ್ಪೋರ್ಟ್ಸ್
ಉತ್ಸವ ಡೇ ಹಂಪಿ ಕಾರು-ಬೈಕ್ ರೇಸಿಂಗ್ ಸ್ಪೋರ್ಟ್ಸ್

ಹೊಸಪೇಟೆ: ಐತಿಹಾಸಿಕ ಹಂಪಿ ಉತ್ಸವ ಮುಗಿದ ಬಳಿಕ ಇದೀಗ ಹಂಪಿ ಕಾರು ಮತ್ತು ಬೈಕ್ ರೇಸಿಂಗ್ ಕಾರ್ಯಕ್ರಮಕ್ಕೆ ಡಿವೈಎಸ್ಪಿ ವಿ.ರಘುಕುಮಾರ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ.

ಯುವಕ,ಯುವತಿಯರು ಹಾಗು ಜನರ ಮನೋರಂಜನೆಗಾಗಿ 'ಉತ್ಸವ ಡೇ' ಹಂಪಿ ಕಾರು ಮತ್ತು ಬೈಕ್ ರೇಸಿಂಗ್ ಸ್ಪೋರ್ಟ್ಸ್ ಆಯೋಜನೆ ಮಾಡಲಾಗಿದೆ ಎಂದು ಕಾರ್ಯಕ್ರಮ ನಿರ್ದೇಶಕ ಸಂತೋಷ್ ಹೇಳಿದ್ದಾರೆ.

ಉತ್ತರ ಕರ್ನಾಟಕ ಭಾಗದ ಜನರು ಈ ಸ್ಪರ್ಧೆಯನ್ನು ನೋಡಲು ಮೈಸೂರು, ಬೆಂಗಳೂರು ಮತ್ತು ಚಿಕ್ಕಮಗಳೂರು ಹಾಗೂ ಕರಾವಳಿ ಭಾಗಕ್ಕೆ ಹೋಗಬೇಕಿತ್ತು. ಹಂಪಿಯು ಭವ್ಯ ಪರಂಪರೆ ಹೊಂದಿರುವ ಐತಿಹಾಸಿಕ ತಾಣವಾಗಿದ್ದು, ಇಂತಹ ಕ್ರೀಡೆಗಳನ್ನು ಮೊದಲ ಬಾರಿಗೆ ಏರ್ಪಾಡು ಮಾಡಲಾಗಿದೆ. ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಉತ್ಸವ ಡೇ ಹಂಪಿ ಕಾರು ಮತ್ತು ಬೈಕ್ ರೇಸಿಂಗ್​ನಲ್ಲಿ ಮುಂಬೈ, ಚೆನ್ನೈ, ಕೇರಳ, ದೆಹಲಿ, ಕೋಲ್ಕತ್ತಾ, ಹೈದರಾಬಾದ್, ಮಂಗಳೂರು ಹಾಗು ಬೆಂಗಳೂರು ಸೇರಿದಂತೆ ನಾನಾ ರಾಜ್ಯಗಳ ಸ್ಪರ್ಧಿಗಳು ಭಾಗವಹಿಸಿದ್ದಾರೆ.

Last Updated : Jan 31, 2020, 7:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.