ETV Bharat / state

ಬಳ್ಳಾರಿಯಲ್ಲಿ ಕಬ್ಬಿನ ಗದ್ದೆ ಮಧ್ಯೆ 4 ಟನ್​​ನಷ್ಟು ಗಾಂಜಾ ಬೆಳೆ... ಅಧಿಕಾರಿಗಳ ದಾಳಿ, ಓರ್ವನ ಬಂಧನ - Cannabis In sugar cane farm in bellary

ಕಬ್ಬಿನ ಗದ್ದೆ ಮಧ್ಯೆ ಕಾಲು ಎಕರೆ ಜಾಗದಲ್ಲಿ ಗಾಂಜಾ ಬೆಳೆದಿದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ಗಾಂಜಾ ಗಿಡಗಳ ಸಮೇತ ಬೆಳೆಗಾರನನ್ನು ವಶಕ್ಕೆ ಪಡೆದಿದ್ದಾರೆ.

ಕಬ್ಬಿನ ಗದ್ದೆ ಮಧ್ಯದಲ್ಲಿ ಗಾಂಜಾ ಬೆಳೆ
author img

By

Published : Oct 10, 2019, 8:22 PM IST

ಬಳ್ಳಾರಿ: ಗಣಿನಾಡು ಜಿಲ್ಲೆಯ ಎತ್ತಿನಬೂದಿಹಾಳು ಗ್ರಾಮದ ಹೊರವಲಯದಲ್ಲಿ ಕಬ್ಬು ಬೆಳೆಯ ಮಧ್ಯೆ ಅಂದಾಜು ಕಾಲು ಎಕರೆಯಲ್ಲಿ ಬೆಳೆದ ಗಾಂಜಾ ಗಿಡಗಳನ್ನು ಬಳ್ಳಾರಿ ಉಪ ವಿ‌ಭಾಗಾಧಿಕಾರಿಗಳ ತಂಡ, ಗಾಂಜಾ ಗಿಡಗಳ ಸಮೇತ ಅದನ್ನು ಬೆಳೆದ ರೈತನೋರ್ವನನ್ನು ಬಂಧಿಸಿದೆ.

ಬಳ್ಳಾರಿ ತಾಲೂಕಿನ ಬುರ್ರನಾಯಕನಹಳ್ಳಿ ಗ್ರಾಮದ ಅಲ್ಲಣ್ಣ ಎಂಬಾತನನ್ನು ಅಬಕಾರಿ ಉಪ ವಿಭಾಗಾಧಿಕಾರಿ ಕೆ.ಮೋತಿಲಾಲ್ ನೇತೃತ್ವದ ಸಿಬ್ಬಂದಿ ಬಂಧಿಸಿದ್ದಲ್ಲದೆ, ಲಕ್ಷಾಂತರ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಕಬ್ಬಿನ ಗದ್ದೆ ಮಧ್ಯದಲ್ಲಿ ಗಾಂಜಾ ಬೆಳೆ

ಅಬಕಾರಿ ಇಲಾಖೆ ಇನ್ಸ್​ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಸಿದ್ದೇಶ್ವರ ಪುತ್ರ ಕೆ.ಅಜಯ ಕುಮಾರ ಎಂಬುವವರಿಗೆ ಸೇರಿದ್ದ ಈ ಐದು ಎಕರೆಗೂ ಅಧಿಕ ಹೊಲವನ್ನು ಗುತ್ತಿಗೆ ಪಡೆದುಕೊಂಡಿದ್ದ ಅಲ್ಲಣ್ಣ ಎಂಬುವರು, ಕಬ್ಬು ಬೆಳೆಯನ್ನು ಸುತ್ತಲೂ ಬೆಳೆದು ಅದರ ನಡುವೆ ಕಾಲು ಎಕರೆ ಪ್ರದೇಶದಲ್ಲಿ ಅಂದಾಜು 450ಕ್ಕೂ ಹೆಚ್ಚು ಗಿಡಗಳನ್ನು ಬೆಳೆದಿದ್ದಾರೆ. ಸುಮಾರು 4 ಟನ್​ಗಳಷ್ಟು ಗಾಂಜಾ ಬೆಳೆಯನ್ನು ಬೆಳೆಯಲಾಗಿದೆ. ಈ ವಿಷಯ ತಿಳಿದ ಜಿಲ್ಲಾ ಅಬಕಾರಿ ಉಪ ವಿಭಾಗಾಧಿಕಾರಿ ಕೆ.ಮೋತಿಲಾಲ್ ಹಾಗೂ ಜಿಲ್ಲಾ ವಿಚಕ್ಷಣ ದಳದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ನಡೆಸಿ, ಗಾಂಜಾ ಗಿಡಗಳನ್ನು ಬೇರು ಸಮೇತ ಕೀಳುವ ಮುಖೇನ ನಾಶಪಡಿಸಿದ್ದಾರೆ.

ಉಪ ಕಾಲುವೆಗೆ ನೀರು ಬಿಟ್ಟಾಗ ಬಿತ್ತಿದ್ದೆ: ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ ಉಪ ಕಾಲುವೆಗೆ ನೀರು ಹರಿಬಿಟ್ಟಾಗ ಈ ಗಾಂಜಾ ಗಿಡಗಳನ್ನು ಬೆಳೆದಿದ್ದು, ಈ ಬಾರಿ ಮಾತ್ರವೇ ಗಾಂಜಾ ಬೆಳೆ ಬೆಳೆದಿರುವೆ ಎಂದು ಕಬ್ಬು ಬೆಳೆಗಾರ ಅಲ್ಲಣ್ಣ ಹೇಳಿದ್ದಾರೆ. ಈ ಹಿಂದೆ ಈತನ ತಂದೆ ಹನುಮಪ್ಪ ಎಂಬುವವರ ಮೇಲೂ ಗಾಂಜಾ ಬೆಳೆದ ಪ್ರಕರಣ ದಾಖಲಾಗಿದ್ದವು.

Intro:ಕದ್ದುಮುಚ್ಚಿ ಮುಕ್ಕಾಲು ಎಕರೆಯಲಿ ಬೆಳೆದ ಗಾಂಜಾ ಗಿಡಗಳ ನಾಶಪಡಿಸಿದ ಅಬಕಾರಿ ಅಧಿಕಾರಿಗಳ ತಂಡ!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲೂಕಿನ ಎತ್ತಿನಬೂದಿಹಾಳು ಗ್ರಾಮ ಹೊರವಲಯದ ಕಬ್ಬು ಬೆಳೆಯ
ಮಧ್ಯೆ ಭಾಗದಲ್ಲಿ ಅಂದಾಜು ಮುಕ್ಕಾಲು ಎಕರೆಯಲಿ ಬೆಳೆದ ಗಾಂಜಾ ಗಿಡಗಳನ್ನು ಬಳ್ಳಾರಿ ಉಪವಿ‌ಭಾಗಾಧಿಕಾರಿಗಳ ತಂಡ ನಾಶಪಡಿಸಿ, ಗಾಂಜಾ ಬೆಳೆದ ರೈತನೋರ್ವನನ್ನು ಬಂಧಿಸಿದ್ದಾರೆ.
ಬಳ್ಳಾರಿ ತಾಲೂಕಿನ ಬುರ್ರನಾಯಕನಹಳ್ಳಿ ಗ್ರಾಮದ ಅಲ್ಲಣ್ಣ ಎಂಬಾತನನ್ನು ಅಬಕಾರಿ ಉಪವಿಭಾಗಾಧಿಕಾರಿ ಕೆ.ಮೋತಿಲಾಲ್ ನೇತೃತ್ವದ ಸಿಬ್ಬಂದಿ ಬಂಧಿಸಿದ್ದಲ್ಲದೇ, ಲಕ್ಷಾಂತರ ರೂಗಳ ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಇಲಾಖೆ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಸಿದ್ದೇಶ್ವರ ಪುತ್ರ ಕೆ.ಅಜಯ ಕುಮಾರ ಎಂಬುವವರಿಗೆ ಸೇರಿದ್ದ ಈ ಐದು ಎಕರೆಗೂ ಅಧಿಕ ಹೊಲವನ್ನು ಗುತ್ತಿಗೆ ಪಡೆದುಕೊಂಡಿದ್ದ ಅಲ್ಲಣ್ಣ ಅವರು, ಕಬ್ಬು ಬೆಳೆಯನ್ನು ಸುತ್ತಲೂ ಬೆಳೆದ ಅದರ ನಡುವೆ ಮುಕ್ಕಾಲು ಪ್ರದೇಶದಲ್ಲಿ ಅಂದಾಜು 450ಕ್ಕೂ ಹೆಚ್ಚು ಗಿಡಗಳನ್ನು ಬೆಳೆದಿದ್ದು, 4 ಟನ್ ನಷ್ಟು ಗಾಂಜಾ ಬೆಳೆಯನ್ನು ಬೆಳೆಯ ಲಾಗಿದೆ. ಈ ವಿಷಯ ತಿಳಿದ ಜಿಲ್ಲಾ ಅಬಕಾರಿ ಉಪವಿಭಾಗಾಧಿ ಕಾರಿ ಕೆ.ಮೋತಿಲಾಲ್ ಹಾಗೂ ಜಿಲ್ಲಾ ವಿಚಕ್ಷಣ ದಳದ ಅಧಿಕಾರಿ ಮತ್ತು ಸಿಬ್ಬಂದಿ ದಾಳಿ ಕಾರ್ಯಾಚರಣೆ ನಡೆಸಿ, ಗಾಂಜಾ ಗಿಡ ಗಳನ್ನು ಬೇರು ಸಮೇತ ಕೀಳುವ ಮುಖೇನ ನಾಶಪಡಿಸಿದ್ದಾರೆ.
ಉಪಕಾಲುವೆಗೆ ನೀರು ಬಿಟ್ಟಾಗ ಬಿತ್ತಿದ್ದೆ: ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ ಉಪಕಾಲುವೆಗೆ ನೀರು ಹರಿಬಿಟ್ಟಾಗ ಈ ಗಾಂಜಾ ಬೆಳೆಯನ್ನು ಬೆಳೆದಿರುವೆ.‌ ಈ ಹೊಲದಲ್ಲಿಯೇ ಲಕ್ಷಾಂತರ ರೂ.ಗಳ ಮೌಲ್ಯದ ಗಾಂಜಾ ಮಾರಾಟ ಮಾಡುತ್ತಿರುವೆ.‌ ಈ ಬಾರಿ ಮಾತ್ರ ಗಾಂಜಾ ಬೆಳೆಯನ್ನು ಬೆಳೆದಿರುವೆ ಎಂದು ಕಬ್ಬು ಬೆಳೆಗಾರ ಅಲ್ಲಣ್ಣ ತಿಳಿಸಿದ್ದಾರೆ.
ಅಬಕಾರಿ ಉಪವಿಭಾಗಾಧಿಕಾರಿ ಕೆ.ಮೋತಿಲಾಲ್ ಅವರು ಮಾತನಾಡಿ, ಮುಕ್ಕಾಲು ಎಕರೆ ಪ್ರದೇಶದಲ್ಲಿ ಈ ಗಾಂಜಾ ಬೆಳೆಯನ್ನು ಬೆಳೆಯಲಾಗಿದೆಂಬ ಖಚಿತ ಮಾಹಿತಿ‌ ಮೇರೆಗೆ ದಾಳಿ ಕಾರ್ಯಾಚರಣೆ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು ಕೊಂಡು, ಈ ಗಾಂಜಾ ಬೆಳೆದ ರೈತ ಅಲ್ಲಣ್ಣ ಎಂಬುವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
Body:ಅಂದಾಜು ನಾಲ್ಕು ಟನ್ ನಷ್ಟು ಗಾಂಜಾ ಸಿಕ್ಕಿದ್ದು, ಎನ್ ಡಿಪಿಎಸ್ ಕಾಯ್ದಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈತನ ತಂದೆ ಹನುಮಪ್ಪ ಎಂಬುವವರ ಮೇಲೂ ಅಕ್ರಮ
ಗಾಂಜಾ ಬೆಳೆದ ಪ್ರಕರಣ ದಾಖಲಾಗಿದೆ.
ಬಂಧಿತ ಆರೋಪಿ ಅಲ್ಲಣ್ಣ ಅವರನ್ನು ಜಿಲ್ಲಾ ವಿಚಕ್ಷಣ ದಳ ಅಧಿಕಾರಿಗಳಿಗೆ ಒಪ್ಪಿಸಲಾಗು ವುದು. ಮುಂದಿನ ಕ್ರಮವನ್ನು ವಿಚಕ್ಷಣ ದಳ ಅಧಿಕಾರಿಗಳು ಕೈಗೊಳ್ಳುತ್ತಾರೆಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

ಬೈಟ್: ಅಲ್ಲಣ್ಣ, ಗಾಂಜಾ ಬೆಳೆದ ರೈತ, ಬುರ್ರನಾಯಕನಹಳ್ಳಿ.

ಬೈಟ್: ಕೆ.ಮೋತಿಲಾಲ್, ಅಬಕಾರಿ ಉಪವಿಭಾಗಾಧಿಕಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ವಿಡಿಯೊ ಕಳಿಸಿರುವೆ ಗಮನಿಸಿರಿ.
KN_BLY_5_YETHINABHUDIHALL_GANJA_TARPPED_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.