ಹೊಸಪೇಟೆ: ದೇವರು ಎಂದರೆ ಕಣ್ಣಿಗೆ ಕಾಣದ ಅಗಾಧವಾದ ಶಕ್ತಿ. ಆದರೆ ಜನರ ಭಾವನೆಗಳಿಗೆ ಮತ್ತು ನಂಬಿಕೆಗೆ ಯಾರೂ ಧಕ್ಕೆ ಉಂಟು ಮಾಡಬಾರದು. ಹಾಗಾಗಿ ಮದ್ಯದ ಅಂಗಡಿಗಳಿಗೆ ದೇವರ ಹೆಸರು ಇಡಬಾರದೆಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಮದ್ಯದ ಅಂಗಡಿಗಳನ್ನು ದೇವರ ಹೆಸರಿನ ನಾಮಫಲಕದಿಂದ ಕರೆಯುವುದು ಅಷ್ಟು ಸಮಂಜಸವಲ್ಲ. ಹೀಗಾಗಿ ದೇವರ ಹೆಸರಿಟ್ಟ ಅಂಗಡಿಗಳನ್ನು ತೆಗೆಯಲಾಗುವುದು. ಹಿಂದು ಧರ್ಮದಲ್ಲಿ ದೇವರುಗಳಿಗೆ ಉನ್ನತವಾದ ಸ್ಥಾನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹೆಸರುಗಳನ್ನಿಡಲು ಸರ್ಕಾರದಿಂದ ಅನುಮತಿ ನೀಡಲಾಗುವುದಿಲ್ಲ ಎಂದರು.
ಟಿಪ್ಪು ಜಯಂತಿಯನ್ನು ಸರ್ಕಾರ ಮಾಡುವುದಿಲ್ಲ:
ಟಿಪ್ಪು ಜಯಂತಿಯನ್ನು ರಾಜ್ಯ ಸರ್ಕಾರ ಆಚರಿಸೋದಿಲ್ಲ. ಬಿಜೆಪಿ ಪಕ್ಷ ಆಡಳಿತಕ್ಕೆ ಬಂದರೆ ನಾವು ಟಿಪ್ಪು ಜಯಂತಿಯನ್ನು ನಿಷೇಧ ಮಾಡುತ್ತೇವೆ ಎಂದು ಹೇಳಿದ್ದೆವು ಸಚಿವ ಶ್ರೀನಿವಾಸ ಪೂಜಾರಿ ಹೇಳಿದ್ರು.
ಈಡಿಗ ಸಮಾಜಕ್ಕೆ ಹೊಸ ನಾಯಕತ್ವ ಬೇಕಿದೆ:
ಈಡಿಗ ಸಮಾಜವು ಬದಲಾವಣೆಯಾಗಿ ನಾವೆಲ್ಲಾ ಒಗ್ಗಟ್ಟಿನಿಂದ ಇರಬೇಕು. ಹೊಸ ಹೊಸ ಯುವ ನಾಯಕರುಗಳನ್ನು ಬೆಳಸಬೇಕಿದೆ. ಸಂಘಟನೆ ಗಟ್ಟಿಗೊಳಿಸಬೇಕು. ಸರ್ಕಾರಿ ನೌಕರಿಯನ್ನು ಪಡೆಯಬೇಕು. ರಾಜಕೀಯದಲ್ಲಿ ತೊಡಗಬೇಕು. ಬಡವರ ಹಾಗೂ ಕಟ್ಟಕಡೆಯ ಜನರ ನೋವಿಗೆ ಸ್ಪಂದಿಸುವ ಮನೋಭಾವ ಬೆಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ರು.