ETV Bharat / state

ಕಲ್ಲಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅವಿರೋಧ ಆಯ್ಕೆಯ ಸಂಪ್ರದಾಯಕ್ಕೆ ಬ್ರೇಕ್..! - ಕಲ್ಲಹಳ್ಳಿ ಗ್ರಾಮ‌ ಪಂಚಾಯಿತಿ ಚುನಾವಣೆ

ಸತತವಾಗಿ 30 ವರ್ಷಗಳಿಂದ ಕಲ್ಲಹಳ್ಳಿ ಗ್ರಾಮ‌ ಪಂಚಾಯಿತಿ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣ ಕಣದಲ್ಲಿ‌ ನಿಲ್ಲುವ ಮೂಲಕ ಗೆಲವಿಗಾಗಿ ಅಭ್ಯರ್ಥಿಗಳು ಪಣ ತೊಟ್ಟಿದ್ದಾರೆ.

kallahalli gramapanchayat
ಕಲ್ಲಹಳ್ಳಿ ಗ್ರಾಮ ಪಂಚಾಯಿತಿ
author img

By

Published : Dec 15, 2020, 2:44 PM IST

ಹೊಸಪೇಟೆ: ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಗ್ರಾಮ‌ ಪಂಚಾಯಿತಿ ಕಳೆದ 30 ವರ್ಷಗಳಿಂದ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ, ಈ ಬಾರಿ ಅವಿರೋಧ ಆಯ್ಕೆ ಪ್ರಕ್ರಿಯೆಗೆ ತಿಲಾಂಜಲಿ ಹಾಡಲಾಗಿದೆ.

ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಚುನಾವಣೆ ವೇಳೆ ಅವಿರೋಧವಾಗಿ ಆಯ್ಕೆಯಾಗುವ ಮೂಲಕವೇ ಹೆಸರುವಾಸಿಯಾಗಿದೆ. ಆದರೆ, ಈ ಬಾರಿ ಚುನಾವಣ ಕಣದಲ್ಲಿ‌ ನಿಲ್ಲುವ ಮೂಲಕ ಗೆಲವಿಗಾಗಿ ಅಭ್ಯರ್ಥಿಗಳು ಪಣ ತೊಟ್ಟಿದ್ದಾರೆ.

ಕಲ್ಲಹಳ್ಳಿ ಗ್ರಾಮ ಪಂಚಾಯಿತಿ

ಗ್ರಾಮ ಪಂಚಾಯಿತಿ ಚಿತ್ರಣ: ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೂರು ಕ್ಷೇತ್ರಗಳಿದ್ದು, 9 ಸ್ಥಾನಗಳಿವೆ. ಗ್ರಾಮ ಪಂಚಾಯಿತಿಗೆ ಕಲ್ಲಹಳ್ಳಿ, ರಾಜಾಪುರ, ಕಣಿರಾಯನ‌ ಗುಡಿ, ವ್ಯಾಸಕೇರಿ ರೈಲ್ವೇ ನಿಲ್ದಾಣ , ಜಂಬುನಾಥ ಹಳ್ಳಿ ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ. ಪರಿಶಿಷ್ಟ ಜಾತಿ-2, ಪರಿಶಿಷ್ಟ ಜಾತಿ ಮಹಿಳೆ-03, ಪರಿಶಿಷ್ಟ ಪಂಗಡ-01, ಪರಿಶಿಷ್ಟ ಪಂಗಡ, ಮಹಿಳೆ-01, ಸಾಮಾನ್ಯ-01, ಸಾಮಾನ್ಯ ಮಹಿಳೆ-01 ಮೀಸಲಾತಿ ಇದೆ. ಗ್ರಾಮ ಪಂಚಾಯಿತಿಯಲ್ಲಿ 2600 ಮತದಾರರು ಇದ್ದಾರೆ. ಚುನಾವಣೆಗಾಗಿ 32 ಜನರು ನಾಮಪತ್ರ ಸಲ್ಲಿಕೆಯನ್ನು ಮಾಡಿದ್ದರು. ಈಗ ಒಂದು ಸ್ಥಾನ ಅವಿರೋಧ ಆಯ್ಕೆ ಮಾಡಲಾಗಿದೆ. ಇನ್ನುಳಿದ 8 ಸ್ಥಾನಕ್ಕೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸಮುದಾಯಗಳ ಬಲ: ಕಲ್ಲಹಳ್ಳಿ ಗ್ರಾಮದಲ್ಲಿ ಶೇ.70 ರಷ್ಟು ಬಂಜಾರ ಸಮುದಾಯವಿದೆ. ಉಳಿದ ಸಮುದಾಯಗಳು ಸೇರಿ ಶೇ.30 ರಷ್ಟು ಮತದಾರರು ಇದ್ದಾರೆ. ಎಲ್ಲ ಸಮುದಾಯವರನ್ನು ವಿಶ್ವಾಸಕ್ಕೆ ತಗೆದುಕೊಂಡು ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಇದು ಮೊದಲಿಂದ ಬಂದ ಪದ್ಧತಿಯಾಗಿದೆ.

ಈ ಟಿವಿ ಭಾರತದೊಂದಿಗೆ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಾನಾಯ್ಕ್ ಅವರು ಮಾತನಾಡಿ, ಕಲ್ಲಹಳ್ಳಿಯಲ್ಲಿ ಕಳೆದ 35 ವರ್ಷಗಳಿಂದ ಚುನಾವಣೆ ನಡೆದಿಲ್ಲ. ಗುರು - ಹಿರಿಯರು ಒಮ್ಮತದಿಂದ ಸದಸ್ಯರನ್ನು ಅವಿರೋಧ ಆಯ್ಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಚುನಾವಣೆಗೆ ಯುವಕರು ನಿಲ್ಲಲು ಮುಂದೆ ಬಂದಿದ್ದಾರೆ. ಈಗಾಗಲೇ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕೆಲವರನ್ನು ಮನವೊಲಿಸಿ ಕಣದಿಂದ ಹಿಂದೆ ಸರಿಯುವಂತೆ ಮಾಡಲಾಗಿದೆ. ಗುರು - ಹಿರಿಯರ ಮಾರ್ಗದರ್ಶನದಲ್ಲಿ ಚುನಾವಣೆ ಮಾಡಲಾಗುವುದು ಎಂದರು.

ಕಲ್ಲಹಳ್ಳಿ ಗ್ರಾಮ‌‌ ಪಂಚಾಯಿತಿ ಚುನಾವಣಾಧಿಕಾರಿ ವೆಂಕಟೇಶ ರೆಡ್ಡಿ ಅವರು‌ ಮಾತನಾಡಿ, ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ಮೂರು ಕ್ಷೇತ್ರಗಳಲ್ಲಿ 9 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.‌ ಈಗ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡಲಾಗಿದೆ‌. ಇನ್ನು 8 ಸ್ಥಾನಗಳಿಗೆ 21 ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ...58 ವರ್ಷಗಳಿಂದ ಚುನಾವಣೆ ಕಾಣದ ಗ್ರಾಮ ಪಂಚಾಯಿತಿ: ಇತಿಹಾಸ ಬರೆದ ಅವಿರೋಧ ಆಯ್ಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.