ವಿಜಯನಗರ: ಗುಡಿಸಲಿಗೆ ಆಧಾರವಾಗಿ ಸುತ್ತಲೂ ನಿಲ್ಲಿಸಿದ್ದ ಉದ್ದದ ಕಲ್ಲು (ಬಂಡೆ) ಕುಸಿದ ಪರಿಣಾಮ ನಾಲ್ಕು ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ರಾಯಪುರ ಗ್ರಾಮದಲ್ಲಿ ನಡೆದಿದೆ.
ಶಾಂತಕುಮಾರ್ - ಮಲ್ಲೇಶ್ವರಿ ಪುತ್ರ ತೇಜಸ್ ಮೃತ ದುರ್ದೈವಿ. ಆಕಸ್ಮಿಕವಾಗಿ ತೆಂಗಿನ ಮರ ಗುಡಿಸಲಿನ ಮೇಲೆ ಬಿದ್ದಿದ್ದು, ಗುಡಿಸಲು ತೆಂಗಿನ ಮರದ ನಡುವೆ ಎಮ್ಮೆ ಸಿಲುಕಿಕೊಂಡಿತ್ತು. ಎಮ್ಮೆ ತನ್ನ ಪ್ರಾಣ ಕಾಪಾಡಿಕೊಳ್ಳಲು ಗುಡಿಸಲಿಗೆ ಉದ್ದದ ಕಲ್ಲಿನ ಕಡೆಗೆ (ಬಂಡೆ) ತಳ್ಳಿದ್ದರಿಂದ ಕಲ್ಲಿಗೆ ಬಾಲಕ ಸಿಲುಕಿ ಮೃತಪಟ್ಟಿದ್ದಾನೆ.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ ಎರಡು ಲಕ್ಷ ರೂ. ನೆರವು ನೀಡಿದ್ದಾರೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದಲೂ ನೆರವು ಕೊಡಿಸಲಾಗುವುದು. ರಾಜೀವ್ ಗಾಂಧಿ ವಸತಿ ನಿಗಮದಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ. ಕೂಡ್ಲಿಗಿ ಶಾಸಕ ಎನ್. ಟಿ. ಶ್ರೀನಿವಾಸ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂಓದಿ: ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಓರ್ವ ಸಾವು : ಮತ್ತೋರ್ವನಿಗೆ ಗಾಯ