ETV Bharat / state

ಕಾಂಗ್ರೆಸ್​​ನಿಂದ ವ್ಯಾಪಾರೀಕಣ ಪ್ರಾರಂಭ: ನಳೀನ್ ಕುಮಾರ ಆರೋಪ - BJP President Nalin Kumar Katil

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ‌ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ, ಕಾಂಗ್ರೆಸ್ ವ್ಯಾಪಾರೀಕಣ ಪ್ರಾರಂಭಿಸಿದೆ. ನಮ್ಮ ಸದಸ್ಯರಿಗೆ ಅಕ್ರಮವಾಗಿ ಆಸೆ, ಆಮಿಷಗಳನ್ನು ತೋರಿಸಿ ಅಧ್ಯಕ್ಷರಾಗುವುದಕ್ಕೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್​ ದೂರಿದರು.

BJP President Nalin Kumar Katil
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​ ಕುಮಾರ ಕಟೀಲ್
author img

By

Published : Jan 24, 2021, 12:49 PM IST

ಹೊಸಪೇಟೆ: ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ಹೊಸಪೇಟೆಯಲ್ಲಿ ನಡೆಯುತ್ತಿದೆ. ಮೂರು ತಿಂಗಳಿಗೊಮ್ಮೆ ಪ್ರತಿ ಜಿಲ್ಲೆಯಲ್ಲಿ ಕಾರ್ಯಕಾರಿಣಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್​ ಕಮಾರ ಕಟೀಲ್ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​​ ಕುಮಾರ ಕಟೀಲ್ ಪ್ರತಿಕ್ರಿಯೆ

ನಗರದ ಪ್ರವಾಸಿ ಮಂದಿರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ಮುಗಿದಿದೆ. ಈ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ‌ ಸಂಖ್ಯೆಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ, ಕಾಂಗ್ರೆಸ್ ವ್ಯಾಪಾರೀಕಣ ಪ್ರಾರಂಭಿಸಿದೆ. ನಮ್ಮ ಸದಸ್ಯರಿಗೆ ಅಕ್ರಮವಾಗಿ ಆಸೆ, ಆಮಿಷಗಳನ್ನು ತೋರಿಸಿ ಅಧ್ಯಕ್ಷರಾಗುವುದಕ್ಕೆ ತೊಡಕುಂಟು ಮಾಡುತ್ತಿದ್ದಾರೆ ಎಂದು ಕಟೀಲ್​ ದೂರಿದರು.

ಪಾರ್ಟಿಯಲ್ಲಿ ಸಂಪ್ರದಾಯಗಳಿವೆ. ಮೊದಲು ಕರೆದು ವಿಷಯವನ್ನು ತಿಳಿದುಕೊಳ್ಳಬೇಕು. ಬಳಿಕ ನೋಟಿಸ್ ನೀಡಬೇಕು. ದೆಹಲಿ ಶಿಸ್ತು ಸಮಿತಿಗೆ ಎಲ್ಲಾ ಮಾಹಿತಿಯನ್ನು ನೀಡಲಾಗಿದೆ. ಸಮಯ, ಸಂದರ್ಭದಲ್ಲಿ ಸೂಕ್ತ ಉತ್ತರ ಸಿಗಲಿದೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಕುರಿತ ಪ್ರಶ್ನೆಗೆ ಕಟೀಲ್​ ಉತ್ತರಿಸಿದರು.

ಅಸಮಧಾನಿತ ಸಚಿವರು, ಶಾಸಕರು ನಮ್ಮಲ್ಲಿ ಇಲ್ಲ. ಅಭಿವೃದ್ಧಿಗಾಗಿ ಸಭೆಯನ್ನು‌ ನಡೆಸಲಾಗುತ್ತಿದೆ. ಸಚಿವ ಗೋಪಾಲಯ್ಯ ಸೇರಿದ ಸಭೆಗೆ ಬಣ್ಣ ಹಚ್ಚಬೇಕಾಗಿಲ್ಲ. ರೆಸಾರ್ಟ್​ನಲ್ಲಿ ನಾನು ಇದ್ದೆ. ಅದು ತಪ್ಪಾ? ನಾಲ್ಕು ಜನ ಸೇರಿ ಮಾತನಾಡುವುದು ತಪ್ಪಾ? ಎಲ್ಲರ ಜತೆಯಲ್ಲಿ ಮಾತನಾಡಿದ್ದೇನೆ. ಯಾವುದೇ ಅಸಮಧಾನವಿಲ್ಲ ಎಂದು ನಳೀನ್​ ಕಮಾರ ಕಟೀಲ್ ಪ್ರತಿಕ್ರಿಯಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.