ETV Bharat / state

ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿಣದ ವಾಜಪೇಯಿ.. ಸಚಿವ ಶ್ರೀರಾಮುಲು ಬಣ್ಣನೆ - ಈಟಿವಿ ಭಾರತ​ ಕರ್ನಾಟಕ

ಬಿಲ್ಲಿನಿಂದ ಬಾಣವನ್ನು ಹೊಡೆಯುವ ಮೂಲಕ ನವಶಕ್ತಿ ಸಮಾವೇಶಕ್ಕೆ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡಿದರು.

Etv Bharat
ಬಿಜೆಪಿ ನವಶಕ್ತಿ ಸಮಾವೇಶ
author img

By

Published : Nov 20, 2022, 5:08 PM IST

Updated : Nov 20, 2022, 10:42 PM IST

ಬಳ್ಳಾರಿ : ಮುಂಬರುವ ವಿಧಾನಸಭಾ ಚುನಾವನಣೆ ಹಿನ್ನೆಲೆಯಲ್ಲಿ ಬೃಹತ್​ ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವ ಬಿಜೆಪಿ ಇಲ್ಲಿ ರಾಜ್ಯ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶವನ್ನು ಹಮ್ಮಿಕೊಂಡಿದೆ. ಬಿಲ್ಲಿನಿಂದ ಬಾಣವನ್ನು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಬಿಜೆಪಿ‌ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಡ್ಡಾ, ಸಿಎಂ ಬೊಮ್ಮಾಯಿ, ಮಾಜಿ‌ ಸಿಎಂ ಯಡಿಯೂರಪ್ಪ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜೆ.ಪಿ. ನಡ್ಡಾ, ರಾಜಕೀಯದಲ್ಲಿ ಪರಿಶಿಷ್ಟ ಪಂಗಡದ ಜನರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಬಹಳ ವರ್ಷಗಳಿಂದ ನಿಮ್ಮನ್ನು ಕೇವಲ ಮತಬ್ಯಾಂಕ್ ಅಗಿ ಮಾಡಿಕೊಂಡು ಯಾವುದೇ ಸವಲತ್ತುಗಳನ್ನು ನೀಡದೆ ಸಂಪತ್ತು ಲೂಟಿ ಮಾಡಿದರು. ಕಳೆದ 60 ವರ್ಷಗಳಲ್ಲಿ ಯಾಕೆ ಒಬ್ಬ ಪರಿಶಿಷ್ಟ ಜನಾಂಗದ ಜನರನ್ನು ಗುರುತಿಸಲಿಲ್ಲ ಎಂದು ಕಾಂಗ್ರೆಸ್​ಗೆ ಪರೋಕ್ಷವಾಗಿ ಟಾಂಗ್​ ಕೊಟ್ಟರು.

ಬಳ್ಳಾರಿಯಲ್ಲಿ ಬಿಜೆಪಿ‌ಯ ನವಶಕ್ತಿ ಸಮಾವೇಶ

ಪ.ಪಂ. ಮಹಿಳೆಗೆ ರಾಷ್ಟ್ರಪತಿ ಸ್ಥಾನ : ನರೇಂದ್ರ ಮೋದಿ ಪರಿಶಿಷ್ಟ ಪಂಗಡದ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಮಾಡುವ ಮೂಲಕ ಪ್ರಾತಿನಿಧ್ಯತೆ ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿಯನ್ನು ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ. ಎಸ್​ಟಿ ಸಮುದಾಯ ಮೀಸಲಾತಿ ಪಡೆಯಲು 60 ವರ್ಷ ಕಾಯಬೇಕಿತ್ತಾ?. ಎಸ್​ಟಿ ಮೀಸಲಾತಿಯನ್ನು ಮೂರು ಪರ್ಸೆಂಟ್​ನಿಂದ ಏಳು ಪರ್ಸೆಂಟ್​ಗೆ ಏರಿಕೆ ಮಾಡಲಾಗಿದೆ. ಇದಕ್ಕೆ ಬೊಮ್ಮಾಯಿ ಮತ್ತು ಸಚಿವ ಶ್ರೀರಾಮುಲು ಅವರನ್ನು ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ನಿಮ್ಮ ಅಶೀರ್ವಾದ ಬೊಮ್ಮಾಯಿ ನೇತೃತ್ವದ ಸರ್ಕಾರದ ಮೇಲಿರಬೇಕು ಎಂದು ಕೇಳಿಕೊಂಡರು.

ಇದೇ ವೇದಿಕೆಯಲ್ಲಿ ಕೇಂದ್ರ ಸಚಿವ ಅರ್ಜುನ್​ ಮುಂಡಾ ಮಾತನಾಡಿ, ಬುಡಕಟ್ಟು ಮತ್ತು ದಲಿತರ ಪರವಾಗಿ ಪಿಎಂ ಉತ್ತಮ ಕಾಳಜಿ ತೋರಿಸುತ್ತಿದ್ದಾರೆ. ಆದಿವಾಸಿ ಪರವಾಗಿ ಎಸ್​ಸಿ, ಎಸ್​ಟಿ ಪರವಾಗಿ ಬಿಜೆಪಿ ಕೆಲಸ ಮಾಡುತ್ತಿದೆ. ಅದಿವಾಸಿಗಳ ಗ್ರಾಮಗಳನ್ನು ಮಾದರಿ ಗ್ರಾಮ ಮಾಡುವುದು ಬಿಜೆಪಿ‌ ಸಂಕಲ್ಪ. ಈ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ಕೆಲಸ ಆರಂಭಿಸಿದೆ ಎಂದರು.

ಬಳ್ಳಾರಿಯಲ್ಲಿ ಬಿಜೆಪಿ‌ಯ ನವಶಕ್ತಿ ಸಮಾವೇಶದಲ್ಲಿ ಬಸವರಾಜ ಬೊಮ್ಮಾಯಿ

ಭಾರತ್​ ತೋಡೋ ಯಾತ್ರೆ : ರಾಹುಲ್ ಗಾಂಧಿ ಅವರು ಭಾರತ ಜೋಡೋ ಮಾಡುತ್ತಿಲ್ಲ. ಅವರ ವಿರುದ್ಧ ಭಾರತ ತೋಡೋ ಯಾತ್ರೆ ಮಾಡಬೇಕಿದೆ. ಏಕತೆಯಲ್ಲಿರುವ ದೇಶವನ್ನು ರಾಹುಲ್ ಗಾಂಧಿ ಎಲ್ಲಿ ಜೋಡಿಸುತ್ತಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷ ಪತನಕ್ಕೆ ಪಣ : ಸಚಿವ ಬಿ. ಶ್ರೀರಾಮುಲು ಮಾತನಾಡಿ, ಸಮಾವೇಶಕ್ಕೆ 10 ಲಕ್ಷಕ್ಕೂ ಅಧಿಕ ಜನ ಸೇರಿರುವುದು ನಮ್ಮ ಸರ್ಕಾರದ ನಡೆ ಸಾಮಾಜಿಕ ನ್ಯಾಯದ ಕಡೆ ಎಂಬುದನ್ನು ತೋರಿಸುತ್ತದೆ. ನವಶಕ್ತಿ ಸಮಾವೇಶದಿಂದ ಮುಂದೆ ಲಂಕೆ ದಹನ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷವನ್ನು ಪತನಗೊಳಿಸಲು ಈ ಸಮಾವೇಶದಿಂದಲೇ ಆರಂಭವಾಗಲಿದೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿಣದ ವಾಜಪೇಯಿ‌: ಸಿಎಂ ಬಸವರಾಜ ಬೊಮ್ಮಾಯಿಗೆ ಜೋಡು ಗುಂಡಿಗೆ ಇವೆ. ಮೀಸಲಾತಿ ಹೆಚ್ಚಳ ಮಾಡುವ ಮೂಲಕ ಎಂಟು ಗುಂಡಿಗೆ ಪ್ರದರ್ಶನವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ದಕ್ಷಿಣದ ವಾಜಪೇಯಿ‌ ಆಗಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಮೀಸಲಾತಿ ಏಕೆ ಮಾಡಲಿಲ್ಲ, ನಮ್ಮ ಬಿಜೆಪಿಯಿಂದ ಮೀಸಲಾತಿ ಹೆಚ್ಚಿಸಿ ಬದ್ಧತೆ ತೋರಿದೆ‌ ಎಂದರು.

ಇದನ್ನೂ ಓದಿ : ಬಿಜೆಪಿಗೆ ಹೆಚ್ಚು ಜನರು ಬರುತ್ತಿರುವುದು ಕಾಂಗ್ರೆಸ್‌ ಆತಂಕ ಹೆಚ್ಚಿಸಿದೆ: ಅರುಣ್ ಸಿಂಗ್

Last Updated : Nov 20, 2022, 10:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.