ಬಳ್ಳಾರಿ: ದಿಶಾ ಆತ್ಯಾಚಾರ ಪ್ರಕರಣದ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಎನ್ಕೌಂಟರ್ ಮಾಡಿದ್ದಕ್ಕೆ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ತಂಡವು ಗುರುವಾರ ಅತ್ಯಾಚಾರಕ್ಕೆ ಆರೋಪಿಗಳಿಗೆ ಗಲ್ಲು ಶಿಕ್ಷೆ ಅಥವಾ ನಡು ರಸ್ತೆಯಲ್ಲಿ ಶೂಟೌಟ್ ಮಾಡಬೇಕೆಂದು ಮಾಜಿ ಸಂಸದೆ ಜೆ.ಶಾಂತ ನೇತೃತ್ವದಲ್ಲಿ ಪ್ರತಿಭಟನೆ ಮಾಡಿದ್ದರು.
ಇದೀಗ ಅವರು ಅಂದುಕೊಂಡಿದ್ದು ನೆರವೇರಿದ ಬೆನ್ನಲ್ಲೇ ಮಹಿಳಾ ಮೋರ್ಚಾದ ಶಶಿಕಲಾ ಇಂದು ಬಳ್ಳಾರಿಯ ಮಹಿಳಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಿಹಿ ಹಂಚುವ ಮೂಲಕ ಸಂಭ್ರಮ ಆಚರಣೆ ಮಾಡಿದರು.