ETV Bharat / state

ಮನದಾಸೆ ನಾಲಿಗೆ ಮೇಲೆ ನಲಿಯುತಿದೆ.. ವಿಜಯನಗರ ಜಿಲ್ಲೆ ಎಂದು ಹೇಳಿ ಕ್ಷಮೆ ಕೇಳಿದ ಆನಂದಸಿಂಗ್ - ವಿಜಯನಗರ ವಿಧಾನಸಭೆ ಉಪಚುನಾವಣೆ

ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಹದಿನಾಲ್ಕು ತಿಂಗಳು ವನವಾಸಕ್ಕೆ ಹೋದ ಅನುಭವವಾಯಿತು ಅಂತಾ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್​ ಸಿಂಗ್ ಹೇಳಿದ್ದಾರೆ.

ಆನಂದ್ ಸಿಂಗ್
author img

By

Published : Nov 25, 2019, 4:18 PM IST

ಬಳ್ಳಾರಿ: ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ವಿಜಯನಗರ ಜಿಲ್ಲೆ ಎಂದು ಹೇಳಿ ತಕ್ಷಣ ಕ್ಷಮೆಯಾಚಿಸಿದ ಪ್ರಸಂಗ ಜಿಲ್ಲೆಯ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಕಮಲಾಪುರದಲ್ಲಿ ನಡೆದಿದೆ.

ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್..

ಉಪಚುನಾವಣೆ ಪ್ರಚಾರದ ವೇಳೆ ಬಿ ಎಸ್‌ ಯಡಿಯೂರಪ್ಪನವರು ವೇದಿಕೆ ಮೇಲಿದ್ದಾಗ ಈ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಬಿಎಸ್​ವೈ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆಂದರು. ಬಿಎಸ್​ವೈಗೆ ಇರುಸುಮುರುಸು ಆಗಬಾರದೆಂದು ತಕ್ಷಣ ಕ್ಷಮೆ ಕೇಳಿ ಈ ವಿಜಯನಗರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆ ಎಂದರು.

ಹದಿನಾಲ್ಕು ತಿಂಗಳ ವನವಾಸ ನನ್ನದು: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ 14 ತಿಂಗಳು ವನವಾಸಕ್ಕೆ ಹೋದ ಅನುಭವವಾಯಿತು. ಮೈತ್ರಿ ಸರ್ಕಾರದಲ್ಲಿ ಆರು ಕೋಟಿ ಜನರ ಜೀವನದ ಜೊತೆಗೆ ಚೆಲ್ಲಾಟ ನಡೆಸಿದ್ರು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗಾಗಲಿ, ಕಾಂಗ್ರೆಸ್ ಮುಖಂಡರಿಗಾಗಲಿ ಜನರ ನಾಡಿಮಿಡಿತ ಗೊತ್ತಾಗಲಿಲ್ಲ.‌ ಈ ಕಾರಣಕ್ಕಾಗಿ ನಾನು ಹದಿನಾಲ್ಕು ತಿಂಗಳು ವನವಾಸ ಅನುಭವಿಸಿದೆ ಎಂದರು.

ಆ ಹದಿನಾಲ್ಕು ತಿಂಗಳು ಇಡೀ ರಾಜ್ಯಕ್ಕೆ ಗ್ರಹಣ ಬಡಿದಿತ್ತು. ಅಭಿವೃದ್ಧಿ ಶೂನ್ಯ ಸಾಧನೆಯಾಗಿತ್ತು. ಅಂತಹ ಪಕ್ಷಕ್ಕೆ ಸೇರ್ಪಡೆ ಆಗಿದ್ದ ನನಗೆ ಒಂದು ರೀತಿಯ ಇರುಸುಮುರುಸು ಉಂಟಾಯಿತು. ಬಿಜೆಪಿ ತೊರೆಯಲಿಕ್ಕೆ ಕೆಲ ತಾಂತ್ರಿಕ ಕಾರಣ ಇದ್ದವು. ಹಾಗಾಗಿ ಪಕ್ಷ ತೊರೆದಿದ್ದೇ ಎಂದಿದ್ದಾರೆ.

Intro:ವಿಜಯನಗರ ಜಿಲ್ಲೆ ಎಂದು ಉಚ್ಚರಿಸಿ ಸ್ವಾರಿ ಕೇಳಿದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್...!
ಬಳ್ಳಾರಿ: ವಿಜಯನಗರ ಜಿಲ್ಲೆ ಎಂದು ಉಚ್ಚರಿಸಿದ್ದಲ್ಲದೇ,
ಆ ಮೇಲೆ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಸ್ವಾರಿ ಕೇಳಿದ ಪ್ರಸಂಗ ನಡೆಯಿತು.
ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ವಿಜಯನಗರ ಕ್ಷೇತ್ರ
ವ್ಯಾಪ್ತಿಯ ಕಮಲಾಪುರದಲ್ಲಿಂದು ಉಪಚುನಾವಣೆ
ನಿಮಿತ್ತ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವ್ರು ಪ್ರಚಾರಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿ,
ಈ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸಿಎಂ ಬಿಎಸ್ ವೈ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆಂದರು. ಆ ವೇದಿಕೆಯ ಮೇಲಿದ್ದ ಸಿಎಂ ಬಿಎಸ್ ವೈ ನೋಡುತ್ತಲೇ ಅಂದಾಗ,
ಅವರಿಗೆ ಇರುಸು,‌ ಮುರುಸು ಆಗಬಾರದೆಂದು ತತ್ ಕ್ಷಣ
ದಲ್ಲೇ ಸ್ವಾರಿ ಕೇಳಿದ ಆನಂದಸಿಂಗ್ ಅವರು ಈ ವಿಜಯ
ನಗರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಿದ್ದಾರೆಂದರು. ವೇದಿಕೆ ಮೇಲೆ ಶಾಸಕ ಸೋಮಶೇಖರರೆಡ್ಡಿಯವ್ರು ಕೂಡ ಕುಳಿತಿದ್ದರು.

Body:ಹದಿನಾಲ್ಕು ತಿಂಗಳ ವನವಾಸ ನನ್ನದು: ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದಾಗ ಹದಿನಾಲ್ಕು ತಿಂಗಳ ವನವಾಸಕ್ಕೆ ಹೋದಂತ ಅನುಭವ ನನಗಾಯಿತು. ಮೈತ್ರಿ
ಕೂಟ ಸರ್ಕಾರದಲ್ಲಿ ಆರುಕೋಟಿ ಜನರ ಜೀವನದ ಜೊತೆಗೆ ಚೆಲ್ಲಾಟ ನಡೆಸಿದ್ರು. ಮೈತ್ರಿ ಸರ್ಕಾರದ ಮುಖ್ಯಮಂತ್ರಿಗೇನೆ ಆಗಲಿ, ಕಾಂಗ್ರೆಸ್ ಮುಖಂಡರಿಗಾಗಲಿ ಜನರ ನಾಡಿಮಿಡಿತ ಗೊತ್ತಾಗಲಿಲ್ಲ.‌ ಈ ಕಾರಣಕ್ಕಾಗಿ ನಾನು ಹದಿನಾಲ್ಕು ತಿಂಗಳು ವನವಾಸ ಅನುಭವಿಸಿದೆ ಎಂದರು.
ಆ ಹದಿನಾಲ್ಕು ತಿಂಗಳು ಇಡೀ ರಾಜ್ಯಕ್ಕೆ ಗ್ರಹಣ ಬಡಿದಿತ್ತು. ಅಭಿವೃದ್ಧಿ ಶೂನ್ಯ ಸಾಧನೆಯಾಗಿತ್ತು. ಅಂತಹ ಪಕ್ಷಕ್ಕೆ ಸೇರ್ಪಡೆ ಆಗಿರೊ ನನಗೇನೇ ಒಂದು ರೀತಿಯ ಇರುಸು, ಮುರುಸು ಉಂಟಾಯಿತು. ಬಿಜೆಪಿ ತೊರೆಯಲಿಕ್ಕೆ ಕೆಲವೊಂದು ತಾಂತ್ರಿಕ ಕಾರಣ ಇದ್ದವು. ಆಗಾಗಿ, ಪಕ್ಷ ತೊರೆದಿದ್ದೇ ಎಂದ್ರು ಆನಂದ ಸಿಂಗ್.
ಮತಪೆಟ್ಟಿಗೆ ಡಬ್ಬಾರ್ ಅಂತ ತೆರೆದ್ರೆ; ನಮ್ಮ ಸಿಎಂ
ಬಿಎಸ್ ವೈ ಯವರ ರಾಜಹುಲಿಯ ಗರ್ಜನೆ ಇರಬೇಕು: 2019ರ ಡಿಸೆಂಬರ್ 5 ಮತದಾನ ಪ್ರಕ್ರಿಯೆ ಮುಗಿದ ಬಳಿಕ. ಡಿಸೆಂಬರ್ 9ರಂದು ಮತಎಣಿಕೆ ಪ್ರಕ್ರಿಯೆಯಲಿ ವಿಜಯನಗರ ಕ್ಷೇತ್ರದ ಮತಪೆಟ್ಟಿಗೆ ಡಬ್ಬಾರ್ ಅಂತ ತೆರೆದ್ರೆ. ನಮ್ಮ ಸಿಎಂ ಬಿಎಸ್ ವೈ ರಾಜಹುಲಿಯ ಗರ್ಜನೆ ಇರಬೇಕು. ಅಂದ್ರೆ ಅಭಿವೃದ್ಧಿಯ ಸುರಿಮಳೆಯೇ ಕಾಣಬೇಕು. ಅಂತಹ ಫಲಿತಾಂಶವನ್ನು ವಿಜಯನಗರ ಕ್ಷೇತ್ರದ ಮತದಾರರು ನೀಡಬೇಕೆಂದು ಆನಂದಸಿಂಗ್ ಮನವಿ ಮಾಡಿಕೊಂಡ್ರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_BJP_CANDIDATE_ANADASINGH_SPEECH_VSL_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.