ವಿಜಯನಗರ : ಡೀಸೆಲ್ ಸಾಗಿಸುತ್ತಿದ್ದ ಟ್ಯಾಂಕರ್ ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಸಜೀವ ದಹನವಾದ ಘಟನೆ ಜಿಲ್ಲೆಯ ಹರಪನಹಳ್ಳಿ ರೈಲ್ವೆ ಗೇಟ್ ಬಳಿ ನಡೆದಿದೆ. ಬೈಕ್ಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದರೂ ಕೂಡ ಸಾಧ್ಯವಾಗದೆ ಅವಘಡ ಸಂಭವಿಸಿದೆ.
ಬೆಂಕಿಗೆ ಸಿಲುಕಿದ ಬೈಕ್ ಸವಾರ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಂಪಪಟ್ನಾ ಗ್ರಾಮದ ನಾಗರಾಜ್(35) ಎಂಬುವರು ಸ್ಥಳದಲ್ಲೇ ಸಜೀವ ದಹನವಾಗಿದ್ದಾರೆ. ಜೊತೆಗಿದ್ದ ವ್ಯಕ್ತಿಗೆ ಗಂಭೀರ ಸುಟ್ಟಗಾಯವಾಗಿದ್ದು, ಟ್ಯಾಂಕರ್ ಚಾಲಕ ಪ್ರಾಣಾಯಾದಿಂದ ಪಾರಾಗಿದ್ದಾನೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿಗೆ 5 ಕಿಲೋ ಮೀಟರ್ ದೂರ ಇರುವಾಗ ಈ ಅವಘಡ ಸಂಭವಿಸಿದೆ. ದಾವಣಗೆರೆ ಡೀಸೆಲ್ ಟ್ಯಾಂಕರ್ನಲ್ಲಿ 8 ಸಾವಿರ ಲೀಟರ್ ಡಿಸೇಲ್ 4 ಸಾವಿರ ಲೀಟರ್ ಪೆಟ್ರೋಲ್ ತುಂಬಿಕೊಂಡು ಬರುತ್ತಿತ್ತು. ಎದುರು ಬಂದ ಬೈಕ್ ತಪ್ಪಿಸಲು ಹೋಗಿ ಪಕ್ಕಕ್ಕೆ ಬಿದ್ದಿ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ಬೈಕ್ ಸವಾರ ನಾಗರಾಜ್ ಟ್ಯಾಂಕರ್ ಕೆಳಗೆ ಬಿದ್ದು ಸುಟ್ಟು ಕರಕಲಾಗಿದ್ದಾನೆ. ಜೊತೆಗಿದ್ದ ಮತ್ತೊಬ್ಬ ಸವಾರನಿಗೆ ಗಂಭೀರ ಗಾಯಗಳಾಗಿವೆ. ಕೂಡಲೆ ಆತನನ್ನು ತಾಲೂಕು ಆಸ್ಪತ್ರೆಗೆ ರಾವಾನೆ ಮಾಡಿ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಸುಟ್ಟು ಕರಕಲಾದ ನಾಗರಾಜ್ ಹಗರಿಬೊಮ್ಮನಹಳ್ಳಿ ತಾಲೂಕಿನ ಸೊನ್ನ ಮೂರುಗೇರೆ ಗ್ರಾಮದವನಾಗಿದ್ದಾರೆ. ಇವರು ಹರಪನಹಳ್ಳಿಯಲ್ಲಿ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗ್ತಿದೆ. ಹೆಂಡತಿಯ ತವರು ಮನೆಗೆ ಹೋಗಿ ಅಲ್ಲಿಂದ ಅವರ ಜಮೀನಿಗೆ ತೆರಳುವ ದಾರಿಯಲ್ಲಿ ಈ ಅವಘಡ ಸಂಭವಿಸಿದೆ.
ಟ್ಯಾಂಕರ್ ಚಾಲಕ ಟ್ಯಾಂಕರ್ ನಿಂದ ಜಿಗಿದು ಪ್ರಾಣಾಯಾದಿಂದ ಪಾರಾಗಿದ್ದಾನೆ. ಟ್ಯಾಂಕರ್ನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಹಾಗೇ ಇರುವ ಹಿನ್ನೆಲೆ ಪದೇ ಪದೇ ಹೊಗೆಯಾಡುತ್ತಿದೆ. ಅವಘಡ ಸಂಭವಿಸಿದ ಸ್ಥಳದ ಸುತ್ತಮುತ್ತ ಜನರ ಹಾಗೂ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ : ವಿಜಯನಗರ: ಧಗಧಗನೆ ಹೊತ್ತಿ ಉರಿದ ಡೀಸೆಲ್ ಟ್ಯಾಂಕರ್, ಬೆಂಕಿಗೆ ಸಿಲುಕಿ ಬೈಕ್ ಸವಾರ ಸಾವು