ಬಳ್ಳಾರಿ: ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿರಗುಪ್ಪ ತಾಲೂಕಿನ ಇಬ್ರಾಂಪುರದ ಹೆದ್ದಾರಿ 150/ಎ ನಲ್ಲಿ ನಡೆದಿದೆ.
ಬಂಡ್ರಾಳು ಗ್ರಾಮದ ನಿವಾಸಿ ಸಿದ್ದನಗೌಡ (55) ಮೃತ ದುರ್ದೈವಿಯಾಗಿದ್ದಾನೆ. ಅಪಘಾತ ಸಂಭವಿಸುತ್ತಿದ್ದಂತೆ, ಕಾರು ಚಾಲಕ ಪರಾರಿಯಾಗಿದ್ದಾನೆ. ರಸ್ತೆ ಬದಿಯಲ್ಲಿದ್ದ ಜನರು, ಕೂಡಲೇ ಸ್ಥಳಕ್ಕೆ ಬಂದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಜನರಿಂದ ಮಾಹಿತಿ ಪಡೆದು, ಆರೋಪಿ ಬಸವರಾಜ್ನನ್ನು ಬಂಧಿಸಿದ್ದಾರೆ.