ETV Bharat / state

ಅಪಘಾತದಲ್ಲಿ ಬದುಕುಳಿದು ಕೆನಡಾಗೆ ಹೊರಟ ‘ಅನಂತ್ಯಾ’..ಇದು ಬಳ್ಳಾರಿ ನಾಯಿಮರಿಯ ರೋಚಕ ಕಹಾನಿ..! - Animal care

ನಾಯಿ ಮರಿ ಪಾರ್ಕ್​​​ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ ಮಲಗಿದ್ದಾಗ, ಕಾರಿನ ಮಾಲೀಕ ಅದರ ಅರಿವಿಲ್ಲದೇ ಮರಿಯ ಮೇಲೆ ಹರಿಸಿದ್ದಾನೆ. ಬಳಿಕ ಸಾವು ಗೆದ್ದು ಈಗ ವಿದೇಶಿಗರ ಮನೆ ಸೇರಲು ತಯಾರಾಗಿ ನಿಂತಿದೆ.

bellary-street-dog-now-flying-to-canada-for-its-new-home
ಇದು ಬಳ್ಳಾರಿ ನಾಯಿಮರಿಯ ರೋಚಕ ಕಹಾನಿ..!
author img

By

Published : Apr 16, 2021, 10:51 PM IST

ಬಳ್ಳಾರಿ: ಗಿಜುಗುಡುವ ರಸ್ತೆಯಲ್ಲಿ ವಾಹನಗಳಿಗೆ ಸಿಕ್ಕು ನಿತ್ಯ ಪ್ರಾಣಿಗಳು ಬಲಿಯಾಗುತ್ತವೆ. ಅಂತೆಯೇ ಬೀದಿ ನಾಯಿಗಳೂ ಸಹ ರಸ್ತೆಯಲ್ಲಿ ವಾಹನಗಳಿಗೆ ಸಿಕ್ಕು ಬಲಿಯಾಗುತ್ತವೆ. ಜೊತೆಗೆ ಕೆಲವು ಬಾರಿ ಅಂಗಾಂಗ ಕಳೆದುಕೊಂಡು ನರಳುತ್ತವೆ. ಇಂತಹ ಪ್ರಾಣಿಗಳಿಗೆ ಆಶ್ರಯ ನೀಡಲೆಂದೇ ಹುಟ್ಟಿಕೊಂಡಿದ್ದ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ, ಇದೀಗ ಬಳ್ಳಾರಿ ಬೀದಿ ನಾಯಿ ಒಂದನ್ನು ವಿದೇಶಕ್ಕೆ ಕಳುಹಿಸಲು ಸಿದ್ಧತೆ ನಡೆಸಿದೆ.

ಅಪಘಾತದಲ್ಲಿ ಬದುಕುಳಿದು ಕೆನಡಾಗೆ ಹೊರಟ ‘ಅನಂತ್ಯಾ’

ಹೀಗೆ ಮುಖದಲ್ಲಿ ಗಾಯದ ಗುರುತು ತುಂಬಿಕೊಂಡಿರುವ ಈ ನಾಯಿ ಮರಿ ಈಗ ವಿದೇಶ ಪ್ರಯಾಣಕ್ಕೆ ರೆಡಿಯಾಗಿದೆ. ಈ ನಾಯಿ ಮರಿ ಪಾರ್ಕ್​​​ ಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ ಮಲಗಿದ್ದಾಗ, ಕಾರಿನ ಮಾಲೀಕ ಅದರ ಅರಿವಿಲ್ಲದೇ ಮರಿಯ ಮೇಲೆ ಹರಿಸಿದ್ದಾನೆ. ಅಪಘಾತದಲ್ಲಿ ನಾಯಿ ಮುಖ ಸಂಪೂರ್ಣ ಜಜ್ಜಿ ಹೋಗಿತ್ತು. ಬಳಿಕ ಹ್ಯೂಮನ್ ವರ್ಲ್ಡ್ ಫಾರ್ ಅನಿಮಲ್ಸ್ ಸಂಸ್ಥೆ ವಿಷಯ ತಿಳಿದು ಈ ನಾಯಿಯ ಆರೈಕೆಗೆ ಮುಂದಾಗಿ, ಇದೀಗ ಮರುಜೀವ ನೀಡಿದೆ.

ಫೇಸ್​ಬುಕ್​​ನಿಂದ ಫೇಮಸ್ ಆದ ನಾಯಿಮರಿ

ನಾಯಿ ಮರಿಗೆ ದೆಹಲಿಯ ಪ್ರಸಿದ್ಧ ಪಶು ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲಿಂದ ನಿಧಾನವಾಗಿ ಜೇತರಿಸಿಕೊಳ್ಳಲು ಆರಂಭಿಸಿ ಮೊದಲಿನಂತಾಗಿದೆ. ಆದರೆ, ಇಷ್ಟೆಲ್ಲ ಸಾಹಸ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿದೆ. ಫೇಸ್​​​ಬುಕ್​​ನಲ್ಲಿ ಈ ಕುರಿತು ಪೋಸ್ಟ್​​ ನೋಡಿದ ಕೆನಡಾದಲ್ಲಿ ವಾಸ ಇರುವ ಭಾರತೀಯ ಮೂಲದ ಮಹಿಳೆಯೊಬ್ಬರು, ಈ ನಾಯಿ ಮರಿ ದತ್ತು ಪಡೆಯಲು ಮುಂದೆ ಬಂದಿದ್ದಾರೆ.

ನಾಯಿ ಮರಿಗೆ ‘ಅನಂತ್ಯಾ’ ನಾಮಕರಣ

ಅಪಘಾತದಿಂದ ಗಾಯಗೊಂಡು ನರಳುತ್ತಿದ್ದ ಈ ನಾಯಿ ಮರಿ ಈಗ ವಿದೇಶಕ್ಕೆ ಹಾರಲು ಒಂಟಿ ಕಾಲಲ್ಲಿ ನಿಂತಿದೆ. ಇತ್ತ ಈ ನಾಯಿ ಮರಿಗೆ ಅನಂತ್ಯಾ ಅಂತ ನಾಮಕರಣ ಮಾಡಲಾಗಿದ್ದು, ಹಳೆಯ ನೋವಿನಿಂದ ಸಂಪೂರ್ಣ ಚೇತರಿಸಿಕೊಂಡಿದೆ. ಈ ನಾಯಿ ಮರಿ ಒಂದೇ ಅಲ್ಲ ನಗರದ ಸಾವಿರಾರು ಪ್ರಾಣಿಗಳ ಆರೈಕೆ ಮಾಡುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ.

ಸಾವಿರಾರು ರೂಪಾಯಿ ವ್ಯಯಿಸಿ ವಿದೇಶಿ ತಳಿ ನಾಯಿಗಳ ಮೊರೆ ಹೋಗುವ ಮಂದಿ, ತಮ್ಮ ಕಣ್ಣೆದುರು ಆಹಾರವಿಲ್ಲದೇ ಅಲೆಯುವ ಸ್ವದೇಶಿ ತಳಿಗಳ ಬಗ್ಗೆ ಅಸಡ್ಡೆ ತೋರುವುದು ನಿಜಕ್ಕೂ ನೋವಿನ ಸಂಗತಿ. ಆದರೆ, ಇಂತಹವರ ಮಧ್ಯೆಯೂ ಯಾವುದೇ ಲಾಭವಿಲ್ಲದಿದ್ದರೂ ಪ್ರಾಣಿಗಳ ನೋವಿಗೆ ಸ್ಪಂದಿಸುವ ಸಂಸ್ಥೆ ಕಟ್ಟಿ ಬೆಳೆಸುವ ಜನರ ಕೆಲಸ ಶ್ಲಾಘನೀಯ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.