ಬಳ್ಳಾರಿ: ನಬಾರ್ಡ್ ಯೋಜನೆ ಅಡಿಯಲ್ಲಿ ಸ್ಥಿರಾ ಉತ್ಪಾದನಾ ವಸ್ತುಗಳ ಪ್ರದರ್ಶನ 76 ವೆಂಕಟಾಪುರ ಕ್ಯಾಂಪ್‍ನ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಜರುಗಿತು.
ಬಳ್ಳಾರಿ ಸ್ಥಿರಾ ಸಂಸ್ಥೆಯ ಸಹಯೋಗದಲ್ಲಿ ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಕ್ಯಾಂಪ್ನಲ್ಲಿ ಮೇ 14ರಿಂದ ಜುಲೈ 14ರವರೆಗೆ ಬುಕ್ಕಸಾಗರ ಗ್ರಾಮ ಪಂಚಾಯತ್ ವ್ಯಾಪ್ತಿಯ 11 ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಪೇಪರ್ ಬ್ಯಾಗ್, ಮಾಸ್ಕ್, ವೈಯರ್ ಬ್ಯಾಗ್ ಹಾಗೂ ಚಟ್ನಿ ಪುಡಿ ಉತ್ಪಾದನೆ ಕುರಿತು ತರಬೇತಿ ನೀಡಲಾಗಿತ್ತು. ಶಿಬಿರದ ಸಮಾರೋಪ ಸಮಾರಂಭ ಹಾಗೂ ಸ್ಥಿರಾ ಸ್ತ್ರೀಶಕ್ತಿ ಸಂಘಗಳ ಉತ್ಪಾದನಾ ವಸ್ತುಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಬಳ್ಳಾರಿ ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕರಾದ ಅಪರ್ಣಾ ಕೋಲ್ತೆ, ನಬಾರ್ಡ್ ಸ್ಥಿರಾ ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರು ಆರ್ಥಿಕವಾಗಿ ಸದೃಢರಾಗಲು ಬಟ್ಟೆ, ಕಾಗದ ಕವರ್ ತಯಾರಿಸುವುದು, ಮಾಸ್ಕ್, ವೈಯರ್ ಬ್ಯಾಗ್, ಬಟ್ಟೆ ಕೈಚೀಲಗಳನ್ನು ತಯಾರಿಸುವ ತರಬೇತಿ ನೀಡಲಾಗಿದೆ. ಈ ಮೂಲಕ ಸ್ಥಳೀಯ ಮಾರುಕಟ್ಟೆಗಳನ್ನು ಬಳಸಿಕೊಂಡು ಚಿಕ್ಕ ಚಿಕ್ಕ ಉದ್ಯಮಗಳನ್ನು ನಡೆಸಬಹುದು ಎಂದರು.