ETV Bharat / state

ಬಳ್ಳಾರಿ ಪಾಲಿಕೆ ವಾರ್ಡುಗಳ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೊರೆ: ಏ.8ಕ್ಕೆ ತೀರ್ಪು - Dharwad latest news

ಬಳ್ಳಾರಿ ಪಾಲಿಕೆಯ ನಾನಾ ವಾರ್ಡುಗಳಲ್ಲಿ ನಿಗದಿಪಡಿಸಲಾಗಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಸದಸ್ಯರು ಧಾರವಾಡದ ಹೈಕೋರ್ಟ್​ ಮೊರೆ ಹೋಗಿದ್ದು, ಈ ಸಂಬಂಧ ಏ.8ಕ್ಕೆ ತೀರ್ಪು ಕಾಯ್ದಿರಿಸಿ ಆದೇಶವನ್ನ ಹೊರಡಿಸಿದೆ.

Bellary
ಬಳ್ಳಾರಿ ಮಹಾನಗರ ಪಾಲಿಕೆ
author img

By

Published : Apr 6, 2021, 12:44 PM IST

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ ನಾನಾ ವಾರ್ಡುಗಳಲ್ಲಿ ನಿಗದಿಪಡಿಸಲಾಗಿದ್ದ ಮೀಸಲಾತಿಯನ್ನು ಪ್ರಶ್ನಿಸಿ ಸದಸ್ಯರು ಧಾರವಾಡದ ಹೈಕೋರ್ಟ್​ ಮೊರೆ ಹೋಗಿದ್ದರು. ಈ ಅರ್ಜಿಯನ್ನು ನಿನ್ನೆ ವಿಚಾರಣೆ ನಡೆಸಿದ್ದ ನ್ಯಾಯಾಲಯ ಏ.8ಕ್ಕೆ ತೀರ್ಪು ಕಾಯ್ದಿರಿಸಿ ಆದೇಶ ಹೊರಡಿಸಿದೆ.

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯ 23, 10, 24 ಮತ್ತು 25 ನೇ ವಾರ್ಡಿನ ಸದಸ್ಯರು ಮೀಸಲಾತಿ ನಿಗದಿಪಡಿಸಿರೋದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು‌. ಹೀಗಾಗಿ, ಕಳೆದ 2-3 ವರ್ಷಗಳಿಂದ ಮಹಾನಗರ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ.

ಈ ಮಧ್ಯೆ ರಾಜ್ಯ ಚುನಾವಣೆ ಆಯೋಗ ಇತ್ತೀಚೆಗೆ ಚುನಾವಣೆಯನ್ನು ಘೋಷಿಸಿತ್ತು. ಮೀಸಲಾತಿ ಕುರಿತ ವಿಚಾರಣೆ ನಡೆದಿದ್ದು, ಹೈಕೋರ್ಟ್ ತೀರ್ಪನ್ನು ಏ.8ಕ್ಕೆ ಕಾಯ್ದಿರಿಸಿ ಮುಂದೂಡಿದೆ. ಇದಲ್ಲದೇ, ಅಂದಿನಿಂದ ಏ. 15ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.