ETV Bharat / state

ಬಳ್ಳಾರಿಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಜೋರು: ಸಚಿವದ್ವಯರಿಂದ ಹಕ್ಕುಚಲಾವಣೆ

ಇಂದು ಬಳ್ಳಾರಿ ಜಿಲ್ಲೆ ಕಮಲಾಪುರ ಪಟ್ಟಣ ಪಂಚಾಯಿತಿಗೆ ಮತದಾನ ನಡೆಯಿತು. ಮತದಾನ ಪ್ರಕ್ರಿಯೆ ಶುರುವಾಗೋದಕ್ಕೆ ಮುಂಚಿತವಾಗಿ ಆಯಾ ಮತಗಟ್ಟೆ ಕೇಂದ್ರಗಳ ಮುಂದೆ ಮತದಾರರು ಸಾಲುಗಟ್ಟಿ ನಿಂತಿದ್ದು ಕಂಡು ಬಂತು, ಬಿರು ಬಿಸಿಲಿನಲ್ಲೂ ವಯೋವೃದ್ಧರ ಉತ್ಸುಕತೆ ಮೆಚ್ಚುವಂತಿತ್ತು.

ಹಕ್ಕು ಮೆರೆದ ವೃದ್ಧ
author img

By

Published : May 29, 2019, 9:01 PM IST

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ ಮತದಾನವು ಇಂದು ಶಾಂತಿಯುತವಾಗಿ ಮುಕ್ತಾಯವಾಗಿದೆ

ಕಮಲಾಪುರ ಪಟ್ಟಣ ಪಂಚಾಯಿತಿಯ ಮತದಾನ

ವಯೋವೃದ್ಧರಿಂದ ಮತದಾನ:

ಇಳಿ ವಯಸ್ಸಿನ ಕೆ.ಪಿ.ಪಾಂಡುರಂಗರಾವ್, ಇಂದು ಪಟ್ಟಣ ಪಂಚಾಯಿತಿ ಎಲೆಕ್ಷನ್​ ನಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನೂ ಜಿಲ್ಲೆಯ ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ ಹಾಗೂ ಧರ್ಮ ಪತ್ನಿ ತಮ್ಮ ಹಕ್ಕನ್ನು ಚಲಾಯಿಸಿದರು. ಜೊತೆಗೆ ಸಂಡೂರು ಪುರಸಭೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಸಚಿವ ಈ ತುಕಾರಾಂ ಹಾಗೂ ಕುಟುಂಬ ಸದಸ್ಯರು, ಹಾಲಿ ಸದಸ್ಯೆ ಆಶಾಲತಾ ಸೋಮಪ್ಪ ಸೇರಿದಂತೆ ಇತರರು ತಮ್ಮ ಹಕ್ಕನ್ನು ಚಲಾಯಿಸಿದರು.

ಮತದಾನ ಎಲ್ಲೆಲ್ಲಿ ಎಷ್ಟೆಷ್ಟು?:

ಮಧ್ಯಾಹ್ನ ಒಂದು ಗಂಟೆಯವರೆಗೆ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಶೇ. 52.87, ಸಂಡೂರು ಪುರಸಭೆ ಶೇ. 38.38, ಹೂವಿನ ಹಡಗಲಿ ಪುರಸಭೆ ಶೇ. 41.46, ಹರಪನಹಳ್ಳಿ ಪುರಸಭೆ ಶೇ. 45.54 ಸೇರಿದಂತೆ ‌ಒಟ್ಟು 44.08 ರಷ್ಟು ಮತದಾನ ನಡೆದಿದೆ.

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ ಮತದಾನವು ಇಂದು ಶಾಂತಿಯುತವಾಗಿ ಮುಕ್ತಾಯವಾಗಿದೆ

ಕಮಲಾಪುರ ಪಟ್ಟಣ ಪಂಚಾಯಿತಿಯ ಮತದಾನ

ವಯೋವೃದ್ಧರಿಂದ ಮತದಾನ:

ಇಳಿ ವಯಸ್ಸಿನ ಕೆ.ಪಿ.ಪಾಂಡುರಂಗರಾವ್, ಇಂದು ಪಟ್ಟಣ ಪಂಚಾಯಿತಿ ಎಲೆಕ್ಷನ್​ ನಲ್ಲಿ ಪಾಲ್ಗೊಂಡು ತಮ್ಮ ಹಕ್ಕನ್ನು ಚಲಾಯಿಸಿದರು. ಇನ್ನೂ ಜಿಲ್ಲೆಯ ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಸಚಿವ ಪಿ. ಟಿ. ಪರಮೇಶ್ವರ ನಾಯ್ಕ ಹಾಗೂ ಧರ್ಮ ಪತ್ನಿ ತಮ್ಮ ಹಕ್ಕನ್ನು ಚಲಾಯಿಸಿದರು. ಜೊತೆಗೆ ಸಂಡೂರು ಪುರಸಭೆ ವ್ಯಾಪ್ತಿಯ ಮತಗಟ್ಟೆಯಲ್ಲಿ ಸಚಿವ ಈ ತುಕಾರಾಂ ಹಾಗೂ ಕುಟುಂಬ ಸದಸ್ಯರು, ಹಾಲಿ ಸದಸ್ಯೆ ಆಶಾಲತಾ ಸೋಮಪ್ಪ ಸೇರಿದಂತೆ ಇತರರು ತಮ್ಮ ಹಕ್ಕನ್ನು ಚಲಾಯಿಸಿದರು.

ಮತದಾನ ಎಲ್ಲೆಲ್ಲಿ ಎಷ್ಟೆಷ್ಟು?:

ಮಧ್ಯಾಹ್ನ ಒಂದು ಗಂಟೆಯವರೆಗೆ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ ಶೇ. 52.87, ಸಂಡೂರು ಪುರಸಭೆ ಶೇ. 38.38, ಹೂವಿನ ಹಡಗಲಿ ಪುರಸಭೆ ಶೇ. 41.46, ಹರಪನಹಳ್ಳಿ ಪುರಸಭೆ ಶೇ. 45.54 ಸೇರಿದಂತೆ ‌ಒಟ್ಟು 44.08 ರಷ್ಟು ಮತದಾನ ನಡೆದಿದೆ.

Intro:ಕಮಲಾಪುರ ಪಟ್ಟಣ ಪಂಚಾಯಿತಿ ಮತದಾತ ಶಾಂತಿಯುತ
ಇಳಿವಯಸ್ಸಿನಲ್ಲೂ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವೃದ್ಧ!
ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಗೆ ಇಂದು ಮತದಾನವು ಶಾಂತಿಯುತ ವಾಗಿ ನಡೆಯಿತು.
ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂದಾಜು 20 ವಾರ್ಡುಗಳಿದ್ದು, ಪ್ರತಿಯೊಂದು ವಾರ್ಡಿನಲ್ಲೂ ತಲಾ ಒಂದೊಂದು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತಗಟ್ಟೆ ಕೇಂದ್ರಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.
ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ಮತದಾನ ಪ್ರಕ್ರಿಯೆ ಶುರುವಾಗೋದಕ್ಕೆ ಮುಂಚಿತವಾಗಿ ಆಯಾ ಮತಗಟ್ಟೆ ಕೇಂದ್ರಗಳ ಸಾಲುಸಾಲಾಗಿ ನಿಂತುಕೊಂಡಿರುವುದು ಕಂಡು ಬಂತು.
ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೆರೆತಾಂಡಾದ ಮತಗಟ್ಟೆಯಲ್ಲೂ ಕೂಡ ಬಂಜಾರ ಸಮುದಾ ಯದ ಮಹಿಳೆಯರು ಮತಗಟ್ಟೆ ಕೇಂದ್ರದ ಮುಂದೆ ಸಾಲು ಸಾಲಾಗಿ ನಿಂತಿರೋದು ಕಂಡುಬಂತು.
ಪೊಲೀಸ್ ಭದ್ರತೆ: ಪ್ರತಿಯೊಂದು ಮತಗಟ್ಟೆ ಕೇಂದ್ರದ ಮುಂದೆ ಇಬ್ಬರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.‌ ಮೂರು ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆ ಕೇಂದ್ರಗಳೆಂದು ಗುರುತಿಸಿ ದ್ದು, ಅಗತ್ಯ ಪೊಲೀಸ್ ಸಿಬ್ಬಂದಿಯನ್ನ ನಿಯೋಜನೆ ಮಾಡ ಲಾಗಿದೆ ಎಂದರು‌.
ವಯೋ ವೃದ್ಧರು ಮತದಾನ: ಬಹುತೇಕ ಮತಗಟ್ಟೆ ಕೇಂದ್ರ ಗಳತ್ತ ವಯೋವೃದ್ಧರು, ಮಹಿಳೆಯರು ಹಾಗೂ ಯುವಕ, ಯುವತಿಯರೇ ಮತಗಟ್ಟೆಗಳತ್ತ ಮುಖಮಾಡಿ ತಮ್ಮ ಹಕ್ಕನ್ನು ಚಲಾಯಿಸಲು ಉತ್ಸುಕರಾಗಿದ್ದರು.
ಮೂರನೇ ವಾರ್ಡಿನ ಮತಗಟ್ಟೆ ಕೇಂದ್ರದತ್ತ ಬಂದ ಇಳಿ ವಯಸ್ಸಿನ ಕೆ.ಪಿ.ಪಾಂಡುರಂಗರಾವ್ ಆಗಮಿಸಿ, ತಮ್ಮ ಹಕ್ಕನ್ನು ಚಲಾಯಿಸಿ ಹೆಬ್ಬೆರಳಿಗೆ ಹಚ್ಚಿದ ಶಾಹಿಯನ್ನು ಪ್ರದರ್ಶಿಸಿದರು. ಬಳಿಕ ಈ ಟಿವಿ ಭಾರತ್ ದೊಂದಿಗೆ ಅವರು ಮಾತನಾಡಿ, ರೈತಾಪಿವರ್ಗದ ಕುಟುಂಬದ ಹಿನ್ನಲೆಯಲ್ಲಿ ಬಂದ ನನಗೆ ಕಡ್ಡಾಯವಾಗಿ ಮತದಾನ ಮಾಡೋದು ಅಭ್ಯಾಸ ಆಗಿದೆ. ಪ್ರತಿಯೊಬ್ಬರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಬೇಕು. ಈ ದೇಶದ ಸುಭದ್ರತೆಗೆ ಮತದಾನ ಹಕ್ಕು ಚಲಾಯಿಸೋದು ಬಹುಮುಖ್ಯವಾಗಿದೆ. ಇದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಎಂದು ತಾತ್ಸಾರ ಮನೋಭಾವ ಮಾಡಬಾರದು. ಇದು ಕೂಡ ನಗರಗಳ ಅಭಿವೃದ್ಧಿಗೂ ಭದ್ರ ಬುನಾದಿ ಇದ್ದಂತೆ ಈ ಚುನಾವಣೆ ಎಂದರು.






Body:ಕಮಲಾಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಂಟನೇ ವಾರ್ಡಿನ ಮತಗಟ್ಟೆ ಕೇಂದ್ರದಲ್ಲಿ ಹಾಲಿ ಕಾಂಗ್ರೆಸ್ ಸದಸ್ಯ ಡಾ.ಬಿ.ಆರ್. ಮಳಲಿ ಹಾಗೂ ಪತ್ನಿ ಜಯಶ್ರೀ ಮಳಲಿ ಅವರು ತಮ್ಮ ಹಕ್ಕನ್ನು ಚಲಾಯಿಸಿ, ಮತಗಟ್ಟೆ ಹೊರಬಂದು ಹೆಬ್ಬೆರಳಿಗೆ ಹಚ್ಚಿದ ಶಾಹಿಯನ್ನ ಪ್ರದರ್ಶಿಸಿದರು.
ಜಿಲ್ಲೆಯ ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ ಮತಗಟ್ಟೆ ಒಂದರಲ್ಲಿ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಹಾಗೂ ಧರ್ಮ ಪತ್ನಿ ತಮ್ಮ ಹಕ್ಕನ್ನು ಚಲಾಯಿಸಿದರು. ಅಲ್ಲದೇ, ಸಂಡೂರು ಪುರಸಭೆ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಸಚಿವ ಈ ತುಕಾರಾಂ ಹಾಗೂ ಕುಟುಂಬ ಸದಸ್ಯರು, ಹಾಲಿ ಸದಸ್ಯೆ ಆಶಾಲತಾ ಸೋಮಪ್ಪ ಸೇರಿದಂತೆ ಇತರರು ತಮ್ಮ ಹಕ್ಕನ್ನು ಚಲಾಯಿಸಿದರು.
ಮತದಾನ ಎಲ್ಲೆಲ್ಲಿ ಎಷ್ಟೇಷ್ಟು?: ಮಧ್ಯಾಹ್ನ ಒಂದು ಗಂಟೆ ಯವರೆಗೆ ಕಮಲಾಪುರ ಪಟ್ಟಣ ಪಂಚಾಯಿತಿ 52.87, ಸಂಡೂರು ಪುರಸಭೆ 38.38, ಹೂವಿನ ಹಡಗಲಿ ಪುರಸಭೆ 41.46, ಹರಪನಹಳ್ಳಿ ಪುರಸಭೆ 45.54 ಸೇರಿದಂತೆ ‌ಒಟ್ಟಾರೆ ಯಾಗಿ 44.08ರಷ್ಟು ಮತದಾನ ನಡೆದಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.


Conclusion:KN_BLY_02_29_KAMALPUR_PATTAN_PANCHAYATHI_ELECTION_VISUALS_7203310

KN_BLY_02a_29_KAMALPUR_PATTAN_PANCHAYATHI_ELECTION_VISUALS_7203310

KN_BLY_02b_29_KAMALPUR_PATTAN_PANCHAYATHI_ELECTION_VISUALS_7203310

KN_BLY_02c_29_KAMALPUR_PATTAN_PANCHAYATHI_ELECTION_VISUALS_7203310

KN_BLY_02d_29_KAMALPUR_PATTAN_PANCHAYATHI_ELECTION_VISUALS_7203310

KN_BLY_02e_29_KAMALPUR_PATTAN_PANCHAYATHI_ELECTION_BYTE_7203310

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.