ಬಳ್ಳಾರಿ : ನಗರದ ಜೀವನ್ ಫಾರ್ಮಸಿ ವತಿಯಿಂದ ವಿಮ್ಸ್ ಆಸ್ಪತ್ರೆ ರೋಗಿಗಳಿಗೆ ಆಹಾರ ವಿತರಿಸಲಾಯಿತು.
ಜೀವನ್ ಫಾರ್ಮಸಿಯ ಮುಖ್ಯಸ್ಥ ರವಿ ಕುಮಾರ್ ಹಾಗೂ ಬಿಜೆಪಿ ಮೀಡಿಯಾ ಸೆಲ್ನ ಕೃಷ್ಣಾರೆಡ್ಡಿ ರೋಗಿಗಳಿಗೆ ಆಹಾರದ ಪ್ಯಾಕೆಟ್ ನೀಡಿದರು.
ಕಳೆದ 20 ದಿನಗಳಿಂದ ಆಹಾರ ವಿತರಣೆ ಮಾಡಲಾಗುತ್ತಿದ್ದು, ಇದುವರೆಗೆ ಸುಮಾರು 350 ಜನರಿಗೆ ಆಹಾರ ವಿತರಿಸಲಾಗಿದೆ. ರವಿ ಕುಮಾರ್ ತನ್ನ ಮನೆಯಲ್ಲೇ ಆಹಾರ ತಯಾರಿಸಿ ವಿಮ್ಸ್ ಆಸ್ಪತ್ರೆಯ ಬಡ ರೋಗಿಗಳಿಗೆ ಹಂಚುತ್ತಿದ್ದಾರೆ.