ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ, ಮೂರು ದಿನಗಳಿಂದ ನಡೆಯುತ್ತಿದ್ದ ಕನ್ನಡ ರಂಗ ಹಬ್ಬ ನಾಟಕೋತ್ಸವ ಇಂದು ಮುಕ್ತಾಯವಾಯಿತು.
ಇಂದು ಬೆಳಗ್ಗೆ 12 ಗಂಟೆಗೆ ಶ್ರವಣ್ ಕುಮಾರ್ ಹೆಗ್ಗೋಡು ನಿರ್ದೇಶನದ ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕ ನಡೆಯಿತು. ಈ ನಾಟಕ ನೋಡಲು ಶಾಲಾ ಕಾಲೆಜ್ ಮಕ್ಕಳು ಆಗಮಿಸಿದ್ದರು.
ಈ ಕುರಿತು ಮಾತನಾಡಿದ ಹಿರಿಯ ಕಲಾವಿದ ವೆಂಕೋಬ್ ಆಚಾರ್ ರೆಕ್ಸ್ ಅವರ್ಸ್ ಡೈನೋ ಏಕಾಂಗಿ ಪಯಣ ನಾಟಕ ಅದ್ಭುತ ಪರಿಕಲ್ಪನೆ. ಬಳ್ಳಾರಿಯಲ್ಲಿ ಸರೀಸೃಪ ಬಗ್ಗೆ ನಾಟಕವಾಗಿತ್ತು ಅದ್ರೇ ಈ ರೀತಿಯ ನಾಟಕ ಬಳ್ಳಾರಿಯಲ್ಲಿ ಮೊದಲು ಎಂದರು.