ETV Bharat / state

ಜಿಂದಾಲ್ ಕಾರ್ಖಾನೆ ಲಾಕ್​​ಡೌನ್ ಮಾಡೋಕೆ ಆಗಲ್ಲ: ಜಿಲ್ಲಾಧಿಕಾರಿ‌ ನಕುಲ್ - ಬಳ್ಳಾರಿ ಡಿಸಿ‌ ಎಸ್.ಎಸ್.ನಕುಲ್ ಲೇಟೆಸ್ಟ್​ ಮಾಧ್ಯಮಗೋಷ್ಟಿ

ಲಾಕ್​ಡೌನ್​ ಸಡಿಲಿಕೆಯಾದ ಹಿನ್ನೆಲೆ ಸುಮಾರು 30 ಸಾವಿರ ನೌಕರರನ್ನು ಹೊಂದಿರುವ ಜಿಂದಾಲ್​ ಕಾರ್ಖಾನೆಯನ್ನ ಲಾಕ್​​ಡೌನ್​ ಮಾಡಲು ಬರುವುದಿಲ್ಲ. ಈ ಸಂಬಂಧ ನಾಳೆ ಸಚಿವ ಆನಂದ್​ ಸಿಂಗ್​ ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ. ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

bellary dc Nakul pressmeet
ಡಿಸಿ‌ ಎಸ್.ಎಸ್.ನಕುಲ್ ಸ್ಪಷ್ಟನೆ
author img

By

Published : Jun 21, 2020, 12:07 PM IST

ಬಳ್ಳಾರಿ: ಲಾಕ್​​​ಡೌನ್ ಸಡಿಲಿಕೆಯಾದ ಹಿನ್ನೆಲೆ ಜಿಲ್ಲೆಯ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನು ಲಾಕ್​​ಡೌನ್ ಮಾಡಲು ಆಗಲ್ಲವೆಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ತಿಳಿಸಿದ್ದಾರೆ.

ಜಿಂದಾಲ್​ ಕಾರ್ಖಾನೆ ಲಾಕ್​ಡೌನ್​ ಕುರಿತು ಜಿಲ್ಲಾಧಿಕಾರಿ‌ ಎಸ್.ಎಸ್. ನಕುಲ್ ಮಾಹಿತಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಸೂರಿನ ಜುಬಿಲಂಟ್ ಕಾರ್ಖಾನೆ ಸಣ್ಣ ಪ್ರಮಾಣದ ಉತ್ಪಾದನೆ ಹೊಂದಿದೆ. ಇದಲ್ಲದೆ, ಅದು ಕೇವಲ 1000 ನೌಕರರನ್ನ ಮಾತ್ರ ಹೊಂದಿದೆ. ಹೀಗಾಗಿ, ಕಾರ್ಖಾನೆಯನ್ನ ಲಾಕ್​​ಡೌನ್ ಮಾಡಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ಸೊನ್ನೆಗೆ ತರಲಾಯಿತು. ಆದರೆ, ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆ ಸುಮಾರು 30 ಸಾವಿರ ನೌಕರರನ್ನ ಹೊಂದಿದೆ. ಮೇಲಾಗಿ, ಉತ್ಪಾದನಾ ಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿರುವ ಈ ಕಾರ್ಖಾನೆಯನ್ನ ಕೇಂದ್ರ ಸರ್ಕಾರದ ಗೈಡ್​​ಲೈನ್ಸ್ ಪ್ರಕಾರ ಲಾಕ್​​ಡೌನ್ ಮಾಡಲು ಬರೋದಿಲ್ಲ ಎಂದ್ರು.

ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ನಾಳೆ ಆರೋಗ್ಯ ಇಲಾಖೆಯ ಕಾರ್ಯದರ್ಶಿ ಅವರೊಂದಿಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಬಳಿಕ, ಸಚಿವರು ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥರೊಂದಿಗೆ ತುರ್ತು ಸಭೆ ಕೈಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಏನೇನು ನಿರ್ಧಾರಗಳು ಆಗುತ್ತವೆ ಎಂಬುದನ್ನ ಕಾದು ನೋಡೋಣವೆಂದ್ರು.

ಜಿಂದಾಲ್​​ ದೊಡ್ಡ ಕಂಟೈನ್​​ಮೆಂಟ್ ಝೋನ್ ಆಗಿ ಘೋಷಣೆ:

ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯನ್ನ ಈಗ ದೊಡ್ಡ ಕಂಟೈನ್​​ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಹೊರಗಿಂದ ನೌಕರರನ್ನ ಕರೆ ತರುವ ಪ್ರಕ್ರಿಯೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ. ನಾನಾ ರೀತಿಯ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಂದಾಜು 898 ಜನರನ್ನು ಈಗಾಗಲೇ ಜೆಎಸ್ ಡಬ್ಲ್ಯು ಗುರುತಿಸಿ, ಅವರಿಗೆ ವೇತನ ಸಹಿತ ರಜೆ ನೀಡಿ ಮನೆಗೆ ಕಳಿಸಿಕೊಟ್ಟಿದೆ.

ಜೊತೆಗೆ ಸುಮಾರು 1086 ಮಂದಿಯನ್ನ ಕ್ವಾರಂಟೈನ್ ಮಾಡಲಾಗಿತ್ತು. ಅದರಲ್ಲಿ 246 ಮಂದಿಗೆ ಪಾಸಿಟಿವ್ ಬಂದಿದೆ. ಉಳಿದ 300 ಮಂದಿಯ ತಪಾಸಣೆ ವರದಿ ಇಂದು ಅಥವಾ ನಾಳೆ ಬರಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.