ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಶುಕ್ರವಾರ ಒಂದೇ ದಿನ 1284 ಜನರಲ್ಲಿ ಸೋಂಕು ದೃಢಪಟ್ಟಿದ್ದು, 24 ಜನ ಮೃತಪಟ್ಟಿದ್ದಾರೆ.
ಈ ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 59,334 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 862 ಕ್ಕೆ ಏರಿದೆ.
ಬಳ್ಳಾರಿ - 480, ಸಂಡೂರು - 246, ಸಿರುಗುಪ್ಪ - 96, ಹೊಸಪೇಟೆ - 172, ಹೆಚ್.ಬಿ.ಹಳ್ಳಿ - 57, ಕೂಡ್ಲಿಗಿ - 74, ಹರಪನಹಳ್ಳಿ - 82, ಹಡಗಲಿ- 77 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ.
ರಾಜ್ಯಾದ್ಯಂತ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸೋಮವಾರದಿಂದ ಲಾಕ್ಡೌನ್ ಘೋಷಿಸಿದೆ.