ETV Bharat / state

ಬಳ್ಳಾರಿಯಲ್ಲಿ ತಾಯಿ, ಮಗುವಿಗೆ ಅಂಟಿದ ಕೊರೊನಾ! - ಬಳ್ಳಾರಿಯಲ್ಲಿ ನವಜಾತ ಶಿಶುವಿಗೆ ನೆಗೆಟಿವ್

ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ ಕೊರೊನಾ ಸೋಂಕಿತರ ಪ್ರೈಮರಿ ಕಾಂಟಾಕ್ಟ್ ಹೊಂದಿರುವ ಎರಡು ಮಗು ಹಾಗೂ ಮಹಿಳೆಯಲ್ಲಿ ಕೊರೊನಾ ದೃಢಪಟ್ಟಿದೆ.

NAKUL
ಬಳ್ಳಾರಿ
author img

By

Published : Jun 21, 2020, 3:15 AM IST

ಬಳ್ಳಾರಿ: ಸಂಡೂರು ತಾಲೂಕಿನ ತೋರಣಗಲ್ಲಿನಲ್ಲಿರುವ ಜಿಂದಾಲ್ ಸಮೂಹ ಸಂಸ್ಥೆಯ ಉಕ್ಕು ಕಾರ್ಖಾನೆಯ ಕೊರೊನಾ ಸೋಂಕಿತರ ಪ್ರೈಮರಿ ಕಾಂಟಾಕ್ಟ್ ಹೊಂದಿರುವ ಒಂದು ವರ್ಷದ ಮಗು, ಮಗುವಿನ ತಾಯಿ ಹಾಗೂ ಮತ್ತೊಬ್ಬರ ನಾಲ್ಕು ತಿಂಗಳ ಮಗುವಿಗೆ ಕೊರೊನಾ ಸೋಂಕಿರೋದು ಪತ್ತೆಯಾಗಿದೆ.

ಇವರಲ್ಲಿ ಸೋಂಕಿರುವ ನಾಲ್ಕು ತಿಂಗಳ ಮಗುವಿನ ತಾಯಿಗೆ ಕೊರೊನಾ ನೆಗೆಟಿವ್ ಬಂದಿದೆ. ಆದರೂ ಕೂಡ ತಾಯಿ ಜಿಲ್ಲಾ ಕೋವಿಡ್ -19 ಆಸ್ಪತ್ರೆಯಲ್ಲಿ ತನ್ನ ಮಗುವಿನೊಂದಿಗೆ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ನಾಲ್ಕು ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿರೋದರಿಂದ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಗುವಿನ ತಾಯಿಗೆ ಕೊರೊನಾ ‌ನೆಗೆಟಿವ್ ಬಂದಿದ್ದು, ನಾಲ್ಕು ತಿಂಗಳ ಮಗುವಿಗೆ ಕೊರೊನಾ ಸೋಂಕಿರೋದರಿಂದ ತಾಯಿ, ಮಗುವನ್ನು ಆಸ್ಪತ್ರೆಯಲ್ಲಿ ಬೇರೆ ಬೇರೆಯಾಗಿ ಇರಿಸಲಾಗಿದೆ ಎಂದರು.

ಮಗುವಿಗೆ ‌ಹಾಲುಣಿಸುವ ಪ್ರಕ್ರಿಯೆಯನ್ನು ವೈದ್ಯರು ಮಾಡುತ್ತಿದ್ದಾರೆ. ಶಿಶುವಿಗೆ ಸೋಂಕು ತಗುಲಿರೋದರ ಕುರಿತು ಟ್ರಾವೆಲ್ ಹಿಸ್ಟರಿಯನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಹಾಗೆಯೇ ಇನ್ನೊಂದೆಡೆ ಒಂದು ವರ್ಷದ ಮಗು ಮತ್ತು ಆ ಮಗುವಿನ ತಾಯಿಗೂ ಕೊರೊನಾ ದೃಢಪಟ್ಟಿದೆ ಎಂದು ಡಿಸಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.