ETV Bharat / state

ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ: ಏ. 8ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭ - Bellary City Corporation election neews

ಏಪ್ರಿಲ್ ತಿಂಗಳಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯನ್ನ ಪೂರ್ಣಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಏಪ್ರಿಲ್ 27ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, 30 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.

Bellary City Corporation election
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ
author img

By

Published : Mar 29, 2021, 3:10 PM IST

ಬಳ್ಳಾರಿ: ಕಳೆದ 2019ನೇ ಸಾಲಿನಲ್ಲಿ ನಡೆಯಬೇಕಿದ್ದ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಪ್ರಕ್ರಿಯೆಯು ವಾರ್ಡುವಾರು ಮೀಸಲಾತಿ ಗೊಂದಲದಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಎರಡು ವರ್ಷಗಳ ನಂತರ ಪಾಲಿಕೆ ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

Bellary City Corporation election
ರಾಜ್ಯ ಚುನಾವಣಾ ಆಯೋಗದ ಆದೇಶ

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 35 ವಾರ್ಡ್​ಗಳಿವೆ. ನಾಲ್ಕು ವಾರ್ಡ್​ಗಳನ್ನ ಹೆಚ್ಚುವರಿಯಾಗಿ ವಿಸ್ತರಿಸಿ, ಇದೀಗ 39 ವಾರ್ಡ್​ಗಳನ್ನಾಗಿಸಿ, ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶವನ್ನೂ ಹೊರಡಿಸಿತ್ತು. ಈ ಮೀಸಲಾತಿ ಪ್ರಶ್ನಿಸಿ ಕೆಲವರು ಹೈಕೋರ್ಟಿನ ಮೊರೆ ಹೋಗಿದ್ದರು. ಆದ್ರೀಗ ಏಪ್ರಿಲ್ ತಿಂಗಳಲ್ಲಿ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣಾ ಪ್ರಕ್ರಿಯೆಯನ್ನ ಪೂರ್ಣಗೊಳಿಸುವಂತೆ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿರೋದು ಅಚ್ಚರಿ ಮೂಡಿಸಿದೆ.

ಓದಿ:ಲೇಂಗಿ ನೃತ್ಯದಲ್ಲಿ ಭಾಗಿಯಾಗಿ ಹೆಜ್ಜೆ ಹಾಕಿದ ಶಾಸಕ ಭೀಮಾನಾಯ್ಕ್

ಏಪ್ರಿಲ್ ಎಂಟರಿಂದ ಈ ಚುನಾವಣಾ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು, ಏಪ್ರಿಲ್ 27ರಂದು ಮತದಾನ ಪ್ರಕ್ರಿಯೆ ನಡೆಸಲು ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಏಪ್ರಿಲ್ 15 ರಂದು ಉಮೇದುವಾರಿಕೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 16ರಂದು ಉಮೇದುವಾರಿಕೆ ಪರಿಶೀಲನೆ ಕಾರ್ಯ ನಡೆಯಲಿದೆ. 19 ರಂದು ಉಮೇದುವಾರಿಕೆ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. 27 ರಂದು ಮತದಾನ ಹಾಗೂ 29 ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 30 ರಂದು ಮತ ಎಣಿಕೆ ಕಾರ್ಯವನ್ನ ನಡೆಸಲು ರಾಜ್ಯ ಚುನಾವಣಾ ಅಯೋಗವು ನಿರ್ಧರಿಸಿದೆ.

ವಾರ್ಡ್​ವಾರು ಮೀಸಲಾತಿ ವಿವರ ಈ ಕೆಳಗಿನಂತಿದೆ:

1ನೇ ವಾರ್ಡ್ ಪರಿಶಿಷ್ಟ ಜಾತಿ, 2ನೇ ವಾರ್ಡ್ ಹಿಂದುಳಿದ ವರ್ಗ (ಎ) ಮಹಿಳೆ, 3ನೇ ವಾರ್ಡ್ ಸಾಮಾನ್ಯ, 4ನೇ ವಾರ್ಡ್ ಪರಿಶಿಷ್ಟ ಜಾತಿ (ಮಹಿಳೆ), 5ನೇ ವಾರ್ಡ್ ಪರಿಶಿಷ್ಟ ಪಂಗಡ, 6ನೇ ವಾರ್ಡ್ ಹಿಂದುಳಿದ ವರ್ಗ (ಬಿ) ಮಹಿಳೆ, 7ನೇ ವಾರ್ಡ್ ಪರಿಶಿಷ್ಟ ಜಾತಿ (ಮಹಿಳೆ), 8ನೇ ವಾರ್ಡ್ ಸಾಮಾನ್ಯ, 9ನೇ ವಾರ್ಡ್ ಹಿಂದುಳಿದ ವರ್ಗ (ಎ), 10ನೇ ವಾರ್ಡ್ ಸಾಮಾನ್ಯ (ಮಹಿಳೆ), 11ನೇ ವಾರ್ಡ್ ಹಿಂದುಳಿದ ವರ್ಗ (ಬಿ), 12ನೇ ವಾರ್ಡ್ ಹಿಂದುಳಿದ ವರ್ಗ (ಎ) ಮಹಿಳೆ, 13ನೇ ವಾರ್ಡ್ ಸಾಮಾನ್ಯ, 14ನೇ ವಾರ್ಡ್ ಸಾಮಾನ್ಯ, 15ನೇ ವಾರ್ಡ್ ಹಿಂದುಳಿದ ವರ್ಗ (ಎ), 16ನೇ ವಾರ್ಡ್ ಸಾಮಾನ್ಯ (ಮಹಿಳೆ), 17ನೇ ವಾರ್ಡ್ ಹಿಂದುಳಿದ ವರ್ಗ (ಎ) ಮಹಿಳೆ, 18ನೇ ವಾರ್ಡ್ ಸಾಮಾನ್ಯ, 19ನೇ ವಾರ್ಡ್ ಸಾಮಾನ್ಯ, 20ನೇ ವಾರ್ಡ್ ಹಿಂದುಳಿದ ವರ್ಗ (ಎ), 21ನೇ ವಾರ್ಡ್ ಸಾಮಾನ್ಯ ಮಹಿಳೆ, 22ನೇ ವಾರ್ಡ್ ಪರಿಶಿಷ್ಟ ಪಂಗಡ, 23ನೇ ವಾರ್ಡ್ ಸಾಮಾನ್ಯ, 24ನೇ ವಾರ್ಡ್ ಸಾಮಾನ್ಯ, 25ನೇ ವಾರ್ಡ್ ಸಾಮಾನ್ಯ ಮಹಿಳೆ, 26ನೇ ವಾರ್ಡ್ ಹಿಂದುಳಿದ ವರ್ಗ (ಎ), 27ನೇ ವಾರ್ಡ್ ಸಾಮಾನ್ಯ, 28ನೇ ವಾರ್ಡ್ ಸಾಮಾನ್ಯ, 29ನೇ ವಾರ್ಡ್ ಪರಿಶಿಷ್ಟ ಜಾತಿ (ಮಹಿಳೆ), 30ನೇ ವಾರ್ಡ್ ಸಾಮಾನ್ಯ (ಮಹಿಳೆ), 31ನೇ ವಾರ್ಡ್ ಸಾಮಾನ್ಯ (ಮಹಿಳೆ), 32ನೇ ವಾರ್ಡ್ ಸಾಮಾನ್ಯ (ಮಹಿಳೆ), 33ನೇ ವಾರ್ಡ್ ಪರಿಶಿಷ್ಟ ಪಂಗಡ (ಮಹಿಳೆ), 34ನೇ ವಾರ್ಡ್ ಸಾಮಾನ್ಯ (ಮಹಿಳೆ), 35ನೇ ವಾರ್ಡ್ ಪರಿಶಿಷ್ಟ ಜಾತಿ, 36ನೇ ವಾರ್ಡ್ ಸಾಮಾನ್ಯ (ಮಹಿಳೆ), 37ನೇ ವಾರ್ಡ್ ಸಾಮಾನ್ಯ (ಮಹಿಳೆ), 38ನೇ ವಾರ್ಡ್ ಪರಿಶಿಷ್ಟ ಜಾತಿ, 39ನೇ ವಾರ್ಡ್ ಪರಿಶಿಷ್ಟ ಪಂಗಡ (ಮಹಿಳೆ)ಕ್ಕೆ ಮೀಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.