ಬಳ್ಳಾರಿ: ತೆಲುಗಿನ ಖ್ಯಾತ ನಾಯಕನಟ ನಂದಮೂರಿ ಬಾಲಕೃಷ್ಣ ಅವರ ಕಟ್ಟಾ ಅಭಿಮಾನಿಯಾಗಿದ್ದ ಬಳ್ಳಾರಿ ಬಾಲಯ್ಯ ಅವರು ಮಹಾಮಾರಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.
ಕಳೆದೊಂದು ವಾರದಿಂದಲೇ ಕೋವಿಡ್ ಸೋಂಕಿಗೆ ಒಳಗಾಗಿ ಬಳ್ಳಾರಿಯ ಟ್ರಾಮಾ ಕೇರ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಇವತ್ತು ಕೊನೆಯುಸಿರೆಳೆದಿದ್ದಾರೆ. ಬಳ್ಳಾರಿಯ ಮಿಲ್ಲರ್ ಪೇಟೆ ನಿವಾಸಿಯಾಗಿದ್ದ ಬಳ್ಳಾರಿ ಬಾಲಯ್ಯ ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು - ಬಳಗವನ್ನ ಅಗಲಿದ್ದಾರೆ.
ನಂದಮೂರಿ ಬಾಲಕೃಷ್ಣ ಅವರ ಡೈಲಾಗ್ ಅನ್ನ ಯಥಾವತ್ ಆಗಿ ಮಿಮಿಕ್ರಿ ಮಾಡೋ ಮುಖೇನ ಹಾಗೂ ಬಾಲಕೃಷ್ಣ ಅವರ ವೇಷ -ಭೂಷಣವನ್ನ ಧರಿಸುತ್ತಿದ್ದ ಬಾಲಯ್ಯ, ಬಳ್ಳಾರಿ ಬಾಲಯ್ಯ ಎಂದೇ ಖ್ಯಾತನಾಮರಾಗಿದ್ದರು.