ಹೊಸಪೇಟೆ: ಬೇಡ ಜಂಗಮರಿಗೆ ಅಪಮಾನವಾಗುವಂತೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ವಿಧಾನಸೌಧ ಕಲಾಪದಲ್ಲಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಬೇಡ ಜಂಗಮ ಸಮಾಜದ ಕಾರ್ಯಕರ್ತರು ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಬೇಡ ಜಂಗಮರೆಂದರೆ ಅವರು ಭಿಕ್ಷಾಟನೆ ಮಾಡುತ್ತಾರೆ. ಮಾಂಸಹಾರಿಗಳು ಮತ್ತು ಅವರು ಮದ್ಯಪಾನ ಮಾಡುತ್ತಾರೆ ಎಂದು, ಕಾರಜೋಳ ಅವರು ವಿಧಾನಸೌಧದಲ್ಲಿ ಮಾತನಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿರು.
ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ, ತಾಲೂಕಾಧಿಕಾರಿ ಹೆಚ್. ವಿಶ್ವನಾಥ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ ಸ್ವಾಮಿ ಮರಿಯಮ್ಮನಹಳ್ಳಿ, ಬೇಡ ಜಂಗಮರು ಮಾಂಸಹಾರಿಗಳಲ್ಲ. ಅದು ಎಲ್ಲರಿಗೂ ಗೊತ್ತಿದೆ. ಆದರೆ ಈ ವಿಷಯ ಡಿಸಿಎಂ ಬೇಡ ಜಂಗಮ ಜನಾಂಗದ ಕುರಿತು ತಪ್ಪು ಮಾಹಿತಿಯನ್ನು ನೀಡಿದ್ದಾರೆ ಎಂದು ಕಿಡಿ ಕಾರಿದ್ರು.
ಬೇಡ ಜಂಗಮರಿಗೆ ಸರ್ಕಾರವು ವೀರಶೈವ ಲಿಂಗಾಯತ ಎಂದು ಪ್ರಮಾಣ ಪತ್ರವನ್ನು ನೀಡುತ್ತಿದ್ದು, ವೀರಶೈವ ಬೇಡ ಜಂಗಮ ಎಂದು ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.