ETV Bharat / state

ಬಳ್ಳಾರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದೆ ಬೃಹತ್ ಧರಣಿ - ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘಗಳು

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ, ಸಮನ್ವಯ ಮತ್ತು ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಯಿತು.

ಬೃಹತ್ ಧರಣಿ
ಬೃಹತ್ ಧರಣಿ
author img

By

Published : Jan 5, 2020, 3:31 PM IST

ಬಳ್ಳಾರಿ: ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಕರೆಯ ಮೇರೆಗೆ ಆಗಮಿಸಿದ 300 ಕ್ಕೂ ಹೆಚ್ಚು ಬ್ಯಾಂಕ್​​​ ನೌಕರರು ಮತ್ತು ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಧರಣಿ ನಡೆಸಿದರು.

ಹಲವು ಬೇಡಿಕೆಗಳನ್ನು ಈಡೇರಿಸಲು ಕಳೆದೊಂದು ವರ್ಷದಿಂದ ನಮ್ಮ ಪದಾಧಿಕಾರಿಗಳು ಬ್ಯಾಂಕಿನ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಈವರೆಗೂ ನಮ್ಮ ಯಾವ ಬೇಡಿಕೆಯೂ ಈಡೇರಿಲ್ಲ. ಬ್ಯಾಂಕಿನ ಆಡಳಿತ ಮಂಡಳಿ ತನ್ನ ಹಠಮಾರಿ ಧೋರಣೆಯನ್ನು ಹೀಗೆಯೇ ಮುಂದುವರೆಸಿದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು‌.

ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಬೃಹತ್ ಧರಣಿ

ನಮಗೆ ನ್ಯಾಯಯುತವಾಗಿ ಜಾರಿಯಾಗಬೇಕಾಗಿದ್ದ ಭವಿಷ್ಯ ನಿಧಿಯ ಹಣ(ಪಿಎಫ್‌) ಹಣ ಜಾರಿ ಮಾಡದಿರುವುದು, ಮನೆ ಸಾಲ ಮರುಪಾವತಿಯನ್ನು 70 ವರ್ಷಗಳವರೆಗೆ ತನಕ ವಿಸ್ತರಿಸದಿರುವುದು, ರಾಜೀನಾಮೆ ಕೊಟ್ಟ ನೌಕರರರಿಗೆ ನಿವೃತ್ತಿ ವೇತನ ಜಾರಿ ಮಾಡದಿರುವ ಬ್ಯಾಂಕಿನ ಕ್ರಮಗಳನ್ನು ಪ್ರತಿಭಟನೆಯಲ್ಲಿ ಖಂಡಿಸಲಾಯ್ತು.

ಬಳ್ಳಾರಿ: ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಕರೆಯ ಮೇರೆಗೆ ಆಗಮಿಸಿದ 300 ಕ್ಕೂ ಹೆಚ್ಚು ಬ್ಯಾಂಕ್​​​ ನೌಕರರು ಮತ್ತು ಅಧಿಕಾರಿಗಳು ತಮ್ಮ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಧರಣಿ ನಡೆಸಿದರು.

ಹಲವು ಬೇಡಿಕೆಗಳನ್ನು ಈಡೇರಿಸಲು ಕಳೆದೊಂದು ವರ್ಷದಿಂದ ನಮ್ಮ ಪದಾಧಿಕಾರಿಗಳು ಬ್ಯಾಂಕಿನ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಈವರೆಗೂ ನಮ್ಮ ಯಾವ ಬೇಡಿಕೆಯೂ ಈಡೇರಿಲ್ಲ. ಬ್ಯಾಂಕಿನ ಆಡಳಿತ ಮಂಡಳಿ ತನ್ನ ಹಠಮಾರಿ ಧೋರಣೆಯನ್ನು ಹೀಗೆಯೇ ಮುಂದುವರೆಸಿದಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು‌.

ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಬೃಹತ್ ಧರಣಿ

ನಮಗೆ ನ್ಯಾಯಯುತವಾಗಿ ಜಾರಿಯಾಗಬೇಕಾಗಿದ್ದ ಭವಿಷ್ಯ ನಿಧಿಯ ಹಣ(ಪಿಎಫ್‌) ಹಣ ಜಾರಿ ಮಾಡದಿರುವುದು, ಮನೆ ಸಾಲ ಮರುಪಾವತಿಯನ್ನು 70 ವರ್ಷಗಳವರೆಗೆ ತನಕ ವಿಸ್ತರಿಸದಿರುವುದು, ರಾಜೀನಾಮೆ ಕೊಟ್ಟ ನೌಕರರರಿಗೆ ನಿವೃತ್ತಿ ವೇತನ ಜಾರಿ ಮಾಡದಿರುವ ಬ್ಯಾಂಕಿನ ಕ್ರಮಗಳನ್ನು ಪ್ರತಿಭಟನೆಯಲ್ಲಿ ಖಂಡಿಸಲಾಯ್ತು.

Intro:
KN_02_bly_040120_protestnewsbank_ka10007

ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಬೃಹತ್ ಧರಣಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ ಮತ್ತು     ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ    ಹಾಗೂ ಸಮನ್ವಯ ಮತ್ತು ಜಂಟಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ ಮುಂದೆ ಬೃಹತ್ ಧರಣಿ
ಮಾಡಿದರುBody:. .

ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳ ಸಂಘ ಮತ್ತು ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘಗಳ ಕರೆಯ ಮೇರೆಗೆ ಇಂದು 300 ಕ್ಕೂ ಹೆಚ್ಚು ಸದಸ್ಯರು ತಮ್ಮ ಪ್ರಮುಖವಾದ ಬೇಡಿಕೆಗಳ ಬಗ್ಗೆ ಧರಣಿ ಮಾಡಿದರು.

ಈ ಬೃಹತ್ ಧರಣಿಯನ್ನು NFRRRBS ದ ಪ್ರಧಾನ ಕಾರ್ಯದರ್ಶಿ ಗಣಪತಿ ಹೆಗಡೆ ಅವರು ಉದ್ಘಾಟಿಸಿ ಮಾಗನಾಡಿದ ಅವರು ಆಡಳಿತ ಮಂಡಳಿಯ ನೀತಿಗಳನ್ನು ಕಟುವಾಗಿ ಟೀಕಿಸಿದರು, ಅದರಲ್ಲೂ ನಿವೃತ್ತಿ ಹೊಂದುತ್ತಿರುವ ಕಾಲದಲ್ಲಿ ಬಹುತೇಕ ಅಧಿಕಾರಿಗಳಿಗೆ ಚಾರ್ಚಶೀಟ್ ನೀಡಿ ಅವರಿಗೆ ನ್ಯಾಯಯುತವಾಗಿ ದೊರೆಯ ಬೇಕಾಗಿದ್ದೆ, ನಿವೃತ್ತಿ ಸೌಲಭ್ಯಗಳಿಗೆ ಕಡಿವಾಣ ಹಾಕುತ್ತಿರುವ ಬ್ಯಾಂಕಿನ ಕ್ರಮಗಳನ್ನು ವಿರೋಧಿಸಿದರು. ಆಡಳಿತ ಮಂಡಳಿಯ ಕಾರ್ಮಿಕ ವಿರೋಧಿ ನೀತಿಗಳನ್ನು ಕಟುವಾಗಿ ಟೀಕಿಸುತ್ತಾ,ನ್ಯಾಯಯುತವಾಗಿ ಜಾರಿ ಮಾಡಬೇಕಾಗಿದ್ದ ಸೌಲಭ್ಯಗಳನ್ನು ಈ ಕೂಡಲೇ ಜಾರಿ ಮಾಡುವಂತೆ ಒತ್ತಾಯಿಸಿದರು.

ಈಟಿವಿ ಭಾರತ ದೊಂದಿಗೆ ಮಾತನಾಡಿದ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಜೋಷಿ ಮಾತನಾಡಿ ನಮ್ಮ ಹಲವಾರು ಬೇಡಿಕೆಗಳು ವರ್ಷಗಟ್ಟಲೇ ಕಳೆದಾಗ್ಯೂ ಈಡೇರದೆ ಉಳಿದಿರುವುದು ಅಧಿಕಾರಿಗಳ ಹಾಗು ನೌಕರರ ಮೇಲಿನ ಕಾಳಜಿ ಆಡಳಿತ ಮಂಡಳಿಗೆ ಎಷ್ಟರ ಮಟ್ಟಿಗೆ ಇದೆ ಎಂಬುದು ಸ್ವಷ್ಟ ವಾಗಿ ಗೊಚರಗೊಂಡಿದೆ.

ಕಳೆದ ಒಂದು ವರ್ಷ ಕ್ಕೂ ಹೆಚ್ಚು ಕಾಲದಿಂದ ಬ್ಯಾಂಕ್ ಯಾವುದೇ ಸೌಲಭ್ಯಗಳನ್ನು ಜಾರಿ ಮಾಡುವ ನಿಟ್ಟೀನಲ್ಲಿ ವಿಫಲಗೊಂಡಿದ್ದು ,ಈ ಧರಣಿ ಅನಿರ್ವಾಯ ವಾಗಿದ್ದು,ಈ ಧರಣಿ ಮೂಲಕ ಆಡಳಿತ ಮಂಡಳಿಯನ್ನು ಈ ಕೂಡಲೇ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯೀಸುತ್ತಾ ಇಲ್ಲವಾದಲ್ಲಿ ಸಂಘಗಳು ಇನ್ನಷ್ಟು ಹೋರಟಗಳಿಗೆ ಮುಂದಾಗಲಿದೆ ಎಂದು ಎಚ್ಚರಿಸಿದರು.

ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಕಾಂ.ಕೆ.ಎಂ.ಗುರುಮೂರ್ತಿ ಮಾತನಾಡಿ ಆಡಳಿತ ಮಂಡಳಿಯ ಹಟಮಾರಿ ಧೋರಣೆಯನ್ನು ಕಟುವಾಗಿ ಟೀಕಿಸಿದರು.

ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಒಂದು ವರ್ಷ ಕ್ಕೂ ಹೆಚ್ಚು ಕಾಲದಿಂದ ನಮ್ಮ ಪದಾಧಿಕಾರಿಗಳು ಬ್ಯಾಂಕಿನ ಅಧ್ಯಕ್ಷರನ್ನು ಭೇಟಿಮಾಡಿ ಮಾತು ಕತೆ ನಡೆಸಿದ್ದು,ಬ್ಯಾಂಕಿನ ನಿರ್ದೇಶಕ ಮಂಡಳಿಯ ನಿರ್ದೇಶರನ್ನು ಭೇಟಿ ಮಾಡಿ ಒತ್ತಾಯಿಸಲಾಗಿದೆ,ಪ್ರೇರಕ ಬ್ಯಾಂಕಿನ ಗ್ರಾಮೀಣ ಬ್ಯಾಂಕ್ ವಿಭಾಗದ ಪ್ರಧಾನ ಪ್ರಬಂಧಕರನ್ನು,ಕಾರ್ಯನಿರ್ವಾಹಕ ನಿರ್ದೇಶಕರನ್ನು ಭೇಟಿಮಾಡಿ ಬೇಡಿಕೆಗಳ ಕುರಿತು ಮಾತುಕತೆಯನ್ನು ನಡೆಸಿದಾಗ್ಯೂ ಬೇಡಿಕೆಗಳು ಈಡೇರದೆ ಹೋದಾಗ ಅನಿವಾರ್ಯ ವಾಗಿ ಹೋರಾಟದ ದಾರಿಯನ್ನು ಕಂಡುಕೊಳ್ಳಬೇಕಾಗಿದ್ದು.ಆಡಳಿತ ಮಂಡಳಿ ತನ್ನ ಹಟಮಾರಿ ಧೋರಣೆಯನ್ನು ಮುಂದುವರಿಸಿದಲ್ಲಿ ಹೆಚ್ಚಿನ ಹೋರಾಟಗಳಿಗೆ ಕರೆ ನೀಡಲಾಗುವುದು.ಮುಂಬರುವ ದಿನಗಳಲ್ಲಿ ಪ್ರೇರಕ ಬ್ಯಾಂಕಿನ ಮುಂದೆ ಒಂದು ದಿನದ ಧರಣಿ,ಪ್ರಧಾನ ಕಚೇರಿ ಮುಂದೆಜಿಲ್ಲಾವಾರು ಸರದಿಧರಣಿ,ಸಂರ್ಪೂಣ ಮುಷ್ಕರದಂತಹ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು‌

ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಗಂಗಪ್ಪ ಪತ್ತರ್ ಮಾತನಾಡಿ,ಬ್ಯಾಂಕ್ ನಿವೃತ್ತಿ ಕಾಲದಲ್ಲಿ ಅಧಿಕಾರಿಗಳಿಗೆ ಚಾರ್ಚಶೀಟ್ ಗಳನ್ನು ನೀಡಿ 150 ಕ್ಕೂ ಹೆಚ್ಚು ಅಧಿಕಾರಿಗಳ ನಿವೃತ್ತಿ ಸೌಲಭ್ಯಗಳನ್ನು ತಡೆ ಹಿಡಿದಿರುವ ಬ್ಯಾಂಕಿನ ಕ್ರಮವನ್ನು ಖಂಡಿಸಿದರು.

ಬ್ಯಾಂಕ್ ಸಂಘದ ಜೊತೆ ಪತ್ರ ವ್ಯವಹಾರ ವನ್ನು ಮಾಡದಿರುವುದನ್ನು,ನ್ಯಾಯಯುತವಾಗಿ ಜಾರಿಯಾಗಬೇಕಾಗಿದ್ದ ಪಿಎಫ್ ಹಣ ಜಾರಿಮಾಡದೆ ಹೋಗಿರುವುದನ್ನು,ಮನೆ ಸಾಲ ಮರುಪಾವತಿಯನ್ನು 70 ವರ್ಷ ತನಕ ವಿಸ್ತರಿಸದೆ ಹೋಗಿರುವುದನ್ನು ,ರಾಜಿನಾಮೆ ಕೊಟ್ಟ ನೌಕರರರಿಗೆ ನಿವೃತ್ತಿ ವೇತನ ಜಾರಿ ಮಾಡದೆ ಹೋಗಿರುವ ಬ್ಯಾಂಕಿನ ಕ್ರಮಗಳನ್ನು ಬಲವಾಗಿ ಖಂಡಿಸಿದರು.

ನೌಕರರ ಸಂಘದ ಅಧ್ಯಕ್ಷರಾದ ಕಾಂ ಪುಟ್ಟರಾಜ್ ಮಾತನಾಡಿ ಹೊರ ಗುತ್ತಿಗೆಯನ್ನು ಈ ಕೂಡಲೇ ಹಿಂಪಡೆಯ ಬೇಕೆಂದು ಒತ್ತಾಯಿಸಿದರು.

ಬೇಡಿಕೆಗಳು :-

01.ನೇರ ನೇಮಕಾತಿ ಮತ್ತು ಬಡ್ತಿ ಹುದ್ದೆಗಳನ್ನು ವೈಜ್ಞಾನಿಕ ಮಾನವ ಶಕ್ತಿ ಆಧಾರದ ಮೇಲೆ ಸೃಷ್ಠಿಸ ಬೇಕು.

02.ಪ್ರೇರಕ ಬ್ಯಾಂಕಿನ ಅಧಿಕಾರಿಗಳಿಗೆ ಮತ್ತು ನೌಕರರಿಗೆ ಸಿಗುವ ಎಲ್ಲಾ ಸಾಲ ಸೌಲಭ್ಯಗಳನ್ನು ಮತ್ತು ಇತರ ಸೌಲಭ್ಯಗಳನ್ನು ನಮ್ಮ ಅಧಿಕಾರಿಗಳಿಗೂ ವಿಸ್ತರಿಸಬೇಕು.

03.ರಾಜ್ಯ ವಿಭಾಗೀಯ ಪೀಠದ ಆದೇಶದಂತೆ ಎಲ್ಲಾ ನೌಕರರಿಗೂ ಕಂಪ್ಯೂಟರ್ ಇನ್ ಕ್ರೀಮೆಂಟ್ ಜಾರಿಗೊಳಿಸಬೇಕು.

04.ಬ್ಯಾಂಕಿನಲ್ಲಿ ಹೊರ ಗುತ್ತಿಗೆ ಆಧಾರದ ಮೇಲಿನ ನೇಮಕಾತಿಗಳನ್ನು ರದ್ದುಗೊಳಿಸಬೇಕು.

05.ಈಗಿರುವ ಎಲ್ಲಾ ಎಂಪೇನಲ್ ಡೇಲಿವೇಜರ್ ಗಳನ್ನು ಖಾಯಂಗೊಳಿಸಬೇಕು.

06.ನೌಕರರು ನಿವೃತ್ತಿ ಹೊಂದಿದ ದಿನವೇ ಅವರಿಗೆ ನಿವೃತ್ತಿ ಹೊಂದಿದ ದಿನವೇ ನಿವೃತ್ತಿ ವೇತನ ಸೇರಿದಂತೆ ಇತರೆ ಎಲ್ಲಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು

Conclusion:ಈ ಧರಣಿಯಲ್ಲಿ ನೌಕರರ ಸಂಘದ ಪದಾಧಿಕಾರಿಗಳಾದ ಪ್ರಾಣೇಶ್ ಮುತ್ತಾಲಿಕ್,ರಾಜೇಂದ್ರ, ಮದಗುಂಟಿ, ಶ್ರೀನಿವಾಸ,ಸಾಗರ್ ಅಧಿಕಾರಿಗಳ ಸಂಘದ ಪದಾಧಿಕಾರಿ ಗಳಾದ ಕೃಷ್ಣಾಮೂರ್ತಿ,ಗುತ್ತೇದಾರ್,ಶ್ರೀನಿವಾಸ, ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗಂಗಪ್ಪ ಪತ್ತರ್,ಶಿವ ಕುಮಾರ ಕೌತಾಳ ಹಾಜರಿದ್ದರು.


ETV Bharat Logo

Copyright © 2025 Ushodaya Enterprises Pvt. Ltd., All Rights Reserved.