ಬಳ್ಳಾರಿ: ಬೆಂಗಳೂರಿನ ಡಿ.ಜೆ.ಹಳ್ಳಿ ಹಿಂಸಾಚಾರ ಉದ್ದೇಶಪೂರ್ವಕವಾಗಿದೆ. ರಾಜ್ಯ ಸರ್ಕಾರಕ್ಕೆ ಮಸಿ ಬಳಿಯುವ ಕಾರ್ಯ ಇದಾಗಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.
ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾ ಹೊಸಳ್ಳಿ ಹೋಬಳಿ ವ್ಯಾಪ್ತಿಯ ಹುಲಿಕೆರೆ ಗ್ರಾಮ ಹೊರವಲಯದ ಸೂರ್ಯಕಾಂತಿ ಬೆಳೆ ಸಮೀಕ್ಷೆ ಕಾರ್ಯದ ಆ್ಯಪ್ ಅನ್ನು ರೈತರಿಂದ ಅಪ್ ಡೇಟ್ ಮಾಡಿಸಿ, ನಂತರ ಮಾತನಾಡಿ ಅವರು, ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ಇದರ ಹಿಂದೆ ಇದೆ. ಲಾಠಿ ಚಾರ್ಜ್ ಅಥವಾ ಗೋಲಿಬಾರ್ನಲ್ಲಿ ಮೃತಪಟ್ಟವರು ಅಮಾಯಕರಲ್ಲ ಎಂದು ಹೇಳಿದರು.
ಇದೊಂದು ರಾಷ್ಟ್ರದ್ರೋಹ ಎಸಗುವಂತಹ ಕೃತ್ಯ. ಇವರನ್ನು ಯಾರೂ ಕೂಡ ಕ್ಷಮಿಸಬಾರದು. ಡಿ.ಜೆ.ಹಳ್ಳಿಯ ಘಟನೆಯಲ್ಲಿ ಭಾಗಿಯಾದವರು ಅಪರಾಧಿಗಳು, ಗೂಂಡಾಗಳು. ಅವರಿಗೆ ಕಠಿಣ ಶಿಕ್ಷೆಯಾಗಬೇಕು. ಅದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.