ETV Bharat / state

ಗಣಿ ಜಿಲ್ಲೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಕೊಡುಗೆ ಏನು? - Contribution of Parliamentary Area Development Fund

ಕಳೆದ 2018- 19ನೇಯ ಆರ್ಥಿಕ ವರ್ಷದ ಸಾಲಿನಲ್ಲಿ ಕೇಂದ್ರ ಸರ್ಕಾರವು ಬಳ್ಳಾರಿ ಜಿಲ್ಲೆಗೆ ಕನಿಷ್ಠ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿದೆ. ಆದರೆ ಜಿಲ್ಲೆಯಲ್ಲಿ ಯಾವ ಯಾವ ಯೋಜನೆಗಳಿಗೆ ಬಳಕೆಯಾಗಿವೆ ಎಂಬ ಅಂಶ ಮಾತ್ರ ಶೂನ್ಯದಾಯಕ ಆಗಿದೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿಬರುತ್ತಿವೆ.

Ballary district four MPs who did not utilize development found
ಗಣಿ ಜಿಲ್ಲೆಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಕೊಡುಗೆ ಏನು?
author img

By

Published : Jan 23, 2021, 10:00 AM IST

ಬಳ್ಳಾರಿ: ಕಳೆದ 2018-19ನೇಯ ಆರ್ಥಿಕ ವರ್ಷದ ಸಾಲಿನಲ್ಲಿ ಕೇಂದ್ರ ಸರ್ಕಾರವು ಕಳೆದ 2018- 19ನೇಯ ಆರ್ಥಿಕ ವರ್ಷದ ಸಾಲಿನಲ್ಲಿ ಕೇಂದ್ರ ಸರ್ಕಾರವು ಗಣಿನಾಡು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಈ ನಾಲ್ವರ ಹೆಸರಿನಡಿ ಬಿಡುಗಡೆಯಾದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಕೊಡುಗೆ ಏನು ಎಂಬ ಪ್ರಶ್ನೆ ಸದ್ಯ ಸಾರ್ವಜನಿಕ ವಲಯದಲ್ಲಿ ಉದ್ಭವಿಸಿದೆ.

ಹೌದು, ಕಳೆದ 2018-19ನೇಯ ಆರ್ಥಿಕ ವರ್ಷದ ಸಾಲಿನಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿದ ಅಂದಾಜು 10 ಕೋಟಿ ರೂಪಾಯಿ ಹಣ ಯಾವ ಯಾವ ಯೋಜನೆಗಳಿಗೆ ಬಳಕೆಯಾಗಿದೆ ಎಂಬ ಅಂಶ ಮಾತ್ರ ಶೂನ್ಯವಾಗಿದೆ ಎಂಬ ಆರೋಪ ಕೇಳಿಬಂದಿವೆ.

ಗಣಿ ಜಿಲ್ಲೆಯ ಮತದಾರರ ಮುಂದೆ ಅನೇಕ ಭರವಸೆಗಳನ್ನು ನೀಡುವ ಮುಖೇನ ಬಳ್ಳಾರಿ ಲೋಕಸಭಾ ಸದಸ್ಯ ವೈ. ದೇವೇಂದ್ರಪ್ಪ ಆಯ್ಕೆಯಾಗಿದ್ದಾರೆ. ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಈ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಮತದಾರರು ಕೂಡ ಸಂಗಣ್ಣ ಕರಡಿಯವರನ್ನು ಸಂಸದರನ್ನಾಗಿ ಆಯ್ಕೆಮಾಡಿದ್ದಾರೆ.‌ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಹರಪನಹಳ್ಳಿ ತಾಲೂಕಿನ ಮತದಾರರರು ಜಿ. ಎಂ. ಸಿದ್ದೇಶ ಅವರನ್ನು ಅಯ್ಕೆ ಮಾಡಿಕೊಂಡಿದ್ದಾರೆ. ಮೂಲತಃ ಬಳ್ಳಾರಿ ನಗರದವರಾದ ಸೈಯದ್ ನಾಸೀರ್ ಹುಸೇನ್ ಅವರೂ ಕೂಡ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಆದರೆ, ಈ ನಾಲ್ವರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮವಹಿಸುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಈ ನಾಲ್ವರಿಗೆ ಬರುವ ಸಂಸದರ ನಿಧಿಯೆಷ್ಟು ಗೊತ್ತಾ?: 2018-19 ನೇ ಸಾಲಿನಲ್ಲಿ ಈ ನಾಲ್ವರು ಸಂಸದರ ಹೆಸರಿನಡಿ ಬರೋಬ್ಬರಿ ಹತ್ತು ಕೋಟಿ ರೂಪಾಯಿ ಅನುದಾನ ಬಂದಿದೆ. ಈ ಅನುದಾನ ಯಾವ-ಯಾವ ಅಭಿವೃದ್ಧಿ ಯೋಜನೆಗಳಿಗೆ ಬಳಕೆಯಾಗಿದೆ ಎಂಬಂಶ ಮಾತ್ರ ಇಲ್ಲಿ ಗೌಣವಾಗಿದೆ.

ಬಳ್ಳಾರಿ ಸಂಸದ ದೇವೇಂದ್ರಪ್ಪ ಹಿಂದೆ ಹೇಳಿದ್ದೇನು?:

ನಾನು ಈ ಜಿಲ್ಲೆಯವನು. ಬಳ್ಳಾರಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷನಾಗಿರುವ ಅನುಭವ ಇದೆ. ಇದೀಗ ಬಳ್ಳಾರಿ ಲೋಕಸಭಾ ಸದಸ್ಯನಾಗಿ ಜಿಲ್ಲೆಯ ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವ ತವಕವೂ ಇದೆ ಎಂಬ ಭರವಸೆ ಮಾತುಗಳನ್ನಾಡುವ ಮುಖೇನ ಬಳ್ಳಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ ಒಂದೂವರೆ ವರ್ಷ ಕಳೆದಿದ್ದಾರೆ. ಆದರೆ, ತಮಗೆ ಬಂದ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುದಾನ ಬಳಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎನ್ನಲಾಗ್ತಿದೆ.

2018-19 ರಲ್ಲಿ ಅಂದಾಜು 2.5 ಕೋಟಿ ರೂ. ಅನುದಾನ ಸಂಸದ ವೈ.ದೇವೇಂದ್ರಪ್ಪ ಅವರಿಗೆ ಬಂದಿದ್ದು,‌ ಆ ಅನುದಾನದ ಅಡಿಯಲ್ಲಿ ಜಿಲ್ಲೆಯ 71 ಕಡೆಗಳಲ್ಲಿ ಹೈ-ಮಾಸ್ಟ್ ದೀಪ ಅಳವಡಿಸುವ ಕಾಮಗಾರಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ.‌ ಆದರೆ, ವಾಸ್ತವವಾಗಿ ಈವರೆಗೂ ಆ ಯಾವ ಹೈ - ಮಾಸ್ಟ್ ದೀಪವೂ ಇನ್ನೂ ಪ್ರಜ್ವಸಲಿಲ್ಲ.!

2019-20 ನೇಯ ಸಾಲಿನ ಆರ್ಥಿಕ ವರ್ಷದಲ್ಲಿ ಮಹಾಮಾರಿ ಕೊರೊನಾ ನೆಪವೊಡ್ಡಿ‌ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಗೆ ನೀಡಲಾಗಿದ್ದ ಅನುದಾನವನ್ನು ಕೋವಿಡ್ ನಿವಾರಣಾ ಕಾರ್ಯಕ್ಕೆ ಬಳಸಲು ಕೇಂದ್ರ ಸರ್ಕಾರ ಅವಕಾಶ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಹಾಲಿ ಆರ್ಥಿಕ ವರ್ಷದಲ್ಲಿ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಆದರೆ, ಈ ಹಿಂದಿನ ಆರ್ಥಿಕ ವರ್ಷದ ಅನುದಾನ ಬಳಕೆ ಈವರೆಗೆ ಪೂರ್ಣ ಗೊಂಡಿಲ್ಲ.

ಈ ಕುರಿತು ಬಳ್ಳಾರಿ ಸಂಸದ ವೈ. ದೇವೆಂದ್ರಪ್ಪನವರ ಆಪ್ತ ವಲಯ ಹೇಳುವಂತೆ ಅಭಿವೃದ್ಧಿಕಾರ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತದ(ಕೆಆರ್‌ಐಡಿಎಲ್) ಅಧಿಕಾರ ವರ್ಗ ಸಂಸದರ ಮಾತಿಗೆ ಬೆಲೆ ಕೊಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಸದ್ಯ ಪ್ರಗತಿಯಲ್ಲಿರುವ ಅಭಿವೃದ್ಧಿ ಕಾರ್ಯಗಳೆಲ್ಲವೂ ಕಳೆದ 5 ತಿಂಗಳ ಹಿಂದೆಯೇ ಶುರುವಾಗಿವೆ. ಹೈಮಾಸ್ಟ್ ದೀಪ ಅಳವಡಿಕೆಗೆ ಕೇವಲ ಒಂದೆರೆಡು‌ ವಾರ ಸಾಕು ಎನ್ನಲಾಗುತ್ತದೆ. ಆದರೆ, 4-5 ತಿಂಗಳು ಕಳೆದರೂ ಈ ಕಾಮಗಾರಿ ನಿರಂತರವಾಗಿ ಪ್ರಗತಿಯಲ್ಲಿದೆ.

ಹಗರಿಬೊಮ್ಮನಹಳ್ಳಿ ತಾಲ್ಲೂಕಿನ 20, ಕೂಡ್ಲಿಗಿ 31, ಹೂವಿನ ಹಡಗಲಿ ತಾಲ್ಲೂಕಿನ 19 ಗ್ರಾಮಗಳಲ್ಲಿ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇತ್ತ ಕೆಆರ್‌ಐಡಿಎಲ್ ಅಧಿಕಾರಿಗಳು ಈಗಾಗಲೇ ಕೆಲಸ ಆರಂಭವಾಗಿದೆ ಎನ್ನುತ್ತಾರೆ.

ಆದರೆ, ಮೇ 2018 ರಲ್ಲಿ ನಡೆದ ಚುನಾವಣೆ ನಂತರ ಲೋಕಸಭಾ ಸದಸ್ಯರು ಈವರೆಗೆ ಒಂದೂ ಕೆಲಸ ಮಾಡದೇ ಇರುವುದು ಸೋಜಿಗದ ಸಂಗತಿ. ಒಬ್ಬ ಸಂಸದರಿಗೆ ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅಡಿ 2.5 ಕೋಟಿ ರೂ. ವಾರ್ಷಿಕ ಅನುದಾನ ಸಿಗುತ್ತದೆ. ಸಂಸದರು ತಾವು ಕೈಗೊಳ್ಳುವ ಕಾಮಗಾರಿ ಕುರಿತು ಕ್ರಿಯಾ ಯೋಜನೆ ಸಿದ್ಧಪಡಿಸಿ, ಅನುಮೋದನೆ ಪಡೆದರೆ ಅನುದಾನ ಬಿಡುಗಡೆ ಆಗುತ್ತದೆ.

ಒಮ್ಮೆ ಬಿಡುಗಡೆಯಾದ ಅನುದಾನದ ಶೇ.75ರಷ್ಟು ಬಳಕೆಯಾಗಿ, ಅದರ ಪ್ರಮಾಣಪತ್ರ ಸಲ್ಲಿಕೆಯಾದ್ರೆ ಮಾತ್ರ ಉಳಿದ ಅನುದಾನ ಬಿಡುಗಡೆಯಾಗುತ್ತದೆ. ಆದರೆ, ನಮ್ಮ ಸಂಸದರು ತಮ್ಮ ಅನುದಾನ ಬಳಕೆ ಮಾಡಿಯೇ ಇಲ್ಲ.

ಸದ್ಯ ಒದಗಿಸಿದ ಕ್ರಿಯಾ ಯೋಜನೆ ಅನ್ವಯ 2.13 ಕೋಟಿ ರೂ.ನ ಕಾಮಗಾರಿ ಕೈಗೊಳ್ಳಲು ಶೇ.75ರಷ್ಟು ಅಂದರೆ 1.60 ಕೋಟಿ ರೂ.ಗೆ ಅನುಮೋದನೆ ಸಿಕ್ಕು ಬಿಡುಗಡೆ ಸಹ ಆಗಿದೆ. ಆದರೆ, ಈವರೆಗೆ ಇದರ ಬಳಕೆ ಆದ ಕುರಿತು ಪ್ರಮಾಣ ಪತ್ರ ಸಲ್ಲಿಕೆ ಆಗಿಲ್ಲ. ಹೀಗಾಗಿ, ಕಾಮಗಾರಿ ಪೂರ್ಣಗೊಂಡಿಲ್ಲ.ಇನ್ನು ಬಳ್ಳಾರಿ ಸಂಸದರಿಗೆ ಪ್ರದೇಶಾಭಿವೃದ್ಧಿ ನಿಧಿಯ ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ನಿಗಮ, ಜಿಲ್ಲಾ ಖನಿಜ ನಿಧಿಯಿಂದಲೂ ಅನುದಾನ ಬರುತ್ತದೆ. ಇದರ ಬಳಕೆ ಕುರಿತು ಮಾಹಿತಿ ಪಡೆಯಲು ಸಂಸದರು ಸಿಗುತ್ತಿಲ್ಲ. ಅವರ ಆಪ್ತ ಸಹಾಯಕರು ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾರೆ.ನಿಜಕ್ಕೂ ದೊಡ್ಡ ದುರಂತವೇ ಸರಿ. ಮೊದಲೇ ಕೋವಿಡ್ ಕಾರಣಕ್ಕೆ ಅನುದಾನ ಬರುತ್ತಿಲ್ಲ. ಬಂದ ಅನುದಾನ ಬಳಸಲು ಸಂಸದರಲ್ಲಿ ಇಚ್ಛಾಸಕ್ತಿ ಕೊರತೆ ಇದೆಯೋ ಅಥವಾ ಅಧಿಕಾರವರ್ಗದ ನಿರ್ಲಕ್ಷ್ಯತನ ಎದ್ದು ತೋರುತ್ತಿದೆಯೋ ಎಂಬುದು ತಿಳಿಯದಾಗಿದೆ. ಆದರೆ, ಬಳ್ಳಾರಿ ಸಂಸದರನ್ನಾಗಿ ಆಯ್ಕೆಮಾಡಿದವರು ಮಾತ್ರ ಕಣ್ಣು- ಬಾಯಿ ಬಿಟ್ಟುಕೊಂಡು ನೋಡಬೇಕಿದೆ.

ಕರಡಿ ನೀಡದ ಅನುದಾನ: ಕೊಪ್ಪಳ ಲೋಕಸಭಾ ಸಂಸದರಾಗಿ ಆಯ್ಕೆಯಾದ ಕರಡಿ ಸಂಗಣ್ಣನವರು ತಮ್ಮ ವ್ಯಾಪ್ತಿಗೆ ಬರುವ ಜಿಲ್ಲೆಯ ಸಿರುಗುಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ಈ ಬಾರಿ ಯಾವುದೇ ಕಾಮಗಾರಿ ಕೈಗೊಂಡಿಲ್ಲ. ಇದಲ್ಲದೇ, ಜಿಲ್ಲೆಯ ಹರಪನಹಳ್ಳಿ ತಾಲೂಕು ದಾವಣಗೆರೆ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಸಂಸದ ಜಿ.ಎಂ.ಸಿದ್ದೇಶ್ವರ ತಮಗೆ ಬಂದ 2.5 ಕೋಟಿ ರೂ.ನ ಅನುದಾನದಲ್ಲಿ ಕೇವಲ 9 ಲಕ್ಷ ರೂ.ಗಳಲ್ಲಿ ಮೂರೇ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿದ್ದಾರೆ.

ಕೇರಳ ರಾಜ್ಯಕ್ಕೆ ಅನುದಾನ ನೀಡಿದ ರಾಜ್ಯಸಭಾ ಸದಸ್ಯ ನಾಸೀರ್: ಬಳ್ಳಾರಿ ಜಿಲ್ಲೆಯಿಂದಲೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಸೈಯದ್ ನಾಸೀರ್ ಹುಸೇನ್ ಅವರು ತಮಗೆ ಕೊಟ್ಟ ಅನುದಾನದ ಪೈಕಿ 2.45 ಕೋಟಿ ರೂ. ಅನುದಾನ ಬಳಕೆಗೆ ಕ್ರಿಯಾ ಯೋಜನೆ ಕೊಟ್ಟಿದ್ದಾರೆ. ಈ ಪೈಕಿ ಬಹುತೇಕ ಕಲಬುರಗಿ, ಯಾದಗಿರಿ, ಅಫ್ಜಲ್‌ಪುರ, ಸೇಡಂ ಸೇರಿದಂತೆ ಇತರೆ ಪ್ರದೇಶಗಳಿಗೆ ಅನುದಾನ ನೀಡಿದ್ದಾರೆ. ಅಷ್ಟೇ ಅಲ್ಲದೇ, ಕೇರಳ ರಾಜ್ಯದ ಕೆಲ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು 25 ಲಕ್ಷ ರೂ.ಗಳ ಅನುದಾನ ನೀಡಿದ್ದಾರೆ. ಆದರೆ, ಬಳ್ಳಾರಿಗೆ ಯಾವುದೇ ಅನುದಾನ ನೀಡಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.