ಬಳ್ಳಾರಿ: ಸಾಮ್ರಾಜ್ಯ ಶಾಹಿ ಧೋರಣೆ ಅನುಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕ್ರಮ ಖಂಡಿಸಿ ಎಸ್ಯುಸಿಐ (ಕಮ್ಯೂನಿಸ್ಟ್) ಪಕ್ಷದ ಪದಾಧಿಕಾರಿಗಳು ನಗರದ ಪಕ್ಷದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಟ್ರಂಪ್ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು, ಅಮೆರಿಕ ಅಧ್ಯಕ್ಷರ ವಿರುದ್ಧ ಘೋಷಣೆ ಕೂಗಿದರು. ಅಮೆರಿಕದಲ್ಲಿ ಕರಿಯರ ಮೇಲೆ ನಡೆದ ಜನಾಂಗೀಯ ಹಲ್ಲೆಯನ್ನ ಎಸ್ಯುಸಿಐ (ಸಿ) ತೀವ್ರವಾಗಿ ಖಂಡಿಸುತ್ತದೆ. ಬಡತನ, ನಿರುದ್ಯೋಗ ಮತ್ತು ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಟ್ರಂಪ್ ವಿಫಲರಾಗಿದ್ದಾರೆ ಎಂದು ದೂರಿದರು.