ETV Bharat / state

ಬಳ್ಳಾರಿಯಲ್ಲಿ ಸಂಸದರ ನೂತನ ಕಚೇರಿ ಆರಂಭ... ದಿನದ 24 ಗಂಟೆಯೂ ಕಾರ್ಯಾರಂಭ - etv bharat

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿಸಂಸದರ ನೂತನ ಕಚೇರಿಗೆ ಬಿಜೆಪಿಯ ಸಂಸದ ವೈ.ದೇವೇಂದ್ರಪ್ಪ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಸಂಸದರ ನೂತನ ಕಚೇರಿ ಆರಂಭ
author img

By

Published : Jun 3, 2019, 7:20 PM IST

ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಸಂಸದರ ನೂತನ ಕಚೇರಿಗೆ ಸಂಸದ ವೈ.ದೇವೇಂದ್ರಪ್ಪ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರು ಈ ಕಚೇರಿಯನ್ನು ಐದು ತಿಂಗಳ ಹಿಂದಷ್ಟೇ ಆರಂಭಿಸಿದ್ದರು. ಕಚೇರಿಯ ಉದ್ಘಾಟನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ದೇವೇಂದ್ರಪ್ಪ, ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆಯ ಅಹವಾಲು ಅರ್ಜಿಗಳನ್ನು ಸ್ವೀಕರಿಸುವ ಸಲುವಾಗಿಯೇ ಈ ಕಚೇರಿಯನ್ನು ಶುರು ಮಾಡಲಾಗಿದೆ. ಪ್ರತಿದಿನ ಈ ಕಚೇರಿಗೆ ತಮ್ಮ ಕುಂದುಕೊರತೆಯ ಅರ್ಜಿಗಳನ್ನು ನಮ್ಮ ಆಪ್ತ ಸಹಾಯಕರಿಗೆ ಸಲ್ಲಿಸಬಹುದು ಎಂದರು.

ಪ್ರತಿಮೂರು‌ ದಿನಗಳಿಗೆ ಒಮ್ಮೆ ಕಚೇರಿಯಲ್ಲಿ ಕುಂದುಕೊರತೆ ಅರ್ಜಿಗಳ ಪರಿಶೀಲನೆ ನಡೆಯಲಿದೆ. ಆಯಾ ಇಲಾಖೆಯ ಅಧಿಕಾರಿಗಳು ಅರ್ಜಿದಾರರಿಗೆ‌ ನ್ಯಾಯ ಒದಗಿಸಿ ಕೊಡುತ್ತಾರೆ ಎಂದು ವೈ.ದೇವೇಂದ್ರಪ್ಪ ತಿಳಿಸಿದ್ದಾರೆ.

ಸಂಸದರ ನೂತನ ಕಚೇರಿ ಆರಂಭ

ಅಲ್ಲದೇ, ದಿನದ ಇಪ್ಪತ್ತು‌ ನಾಲ್ಕು ಗಂಟೆಗಳಕಾಲ ಈ ಕಚೇರಿ ಕಾರ್ಯನಿರ್ವಹಿಸುತ್ತದೆ. ನಾನು ಊರಲ್ಲಿ ಇರಲಿ ಅಥವಾ ಇಲ್ಲದಿರಲಿ ಕುಂದುಕೊರತೆಯ ಅಹವಾಲು‌ ಅರ್ಜಿಗಳನ್ನು ನಿಗದಿತ ದಿನಾಂಕದಂದು ಇತ್ಯರ್ಥಗೊಳಿಸಲಾಗುವುದು ಎಂದರು.

ಜಲಾಶಯ ಭರ್ತಿಗೂ ಕ್ರಮ: ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಂದ್ರಪ್ಪ, ಜಿಲ್ಲೆಯಲ್ಲಿ ಖಾಲಿಯಿರುವ ಕೆರೆ ಕಟ್ಟೆಗಳ ಭರ್ತಿಗೂ ಅಗತ್ಯಕ್ರಮ ಜರುಗಿಸಲಾಗುವುದು. ಹಾಗೂ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಅಗತ್ಯ ಪರಿಹಾರ‌ ಕಂಡು ಕೊಳ್ಳುವಲ್ಲಿ ನಾನು‌ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ತುಂಗಭದ್ರಾ ಜಲಾಶಯದಲ್ಲಿನ ಹೂಳೆತ್ತುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಎಸ್​ವೈ ಸಿಎಂ ಆಗಲೆಂದು ದೇವರಲ್ಲಿ ಪ್ರಾರ್ಥಿಸುವೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆದಷ್ಟು ಬೇಗನೆ ಮುಖ್ಯಮಂತ್ರಿ ಹುದ್ದೆಯನ್ನ ಅಲಂಕರಿಸಬೇಕೆಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವೆ ಎಂದು ಸಂಸದ ದೇವೇಂದ್ರಪ್ಪ ತಿಳಿಸಿದ್ದಾರೆ. ಇನ್ನು ಅತೃಪ್ತ ಶಾಸಕರು ತಮ್ಮ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾರೂ ಅಂತಾನೆ ನನಗ‌ ಗೊತ್ತಿಲ್ಲ. ಅವರ ಮುಖ ಸಹಿತ ನಾನೂ ನೋಡಿಲ್ಲ ಎಂದರು.

Intro:ಸಂಸದರ ನೂತನ ಕಚೇರಿ ಆರಂಭ
ಮೂರು ದಿನದೊಳಗೆ ಸಾರ್ವಜನಿಕರ ಅರ್ಜಿಗಳ ವಿಲೇವಾರಿ!
ಬಳ್ಳಾರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿರುವ ಸ್ಪಂದನ ಕೇಂದ್ರದಲ್ಲಿ ಹಾಲಿ ಸಂಸದರ ನೂತನ ಕಚೇರಿಯನ್ನು‌ ಇಂದು ಆರಂಭಿಸಲಾಯಿತು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪನವರು ಈ ಕಚೇರಿಯನ್ನು ಐದು ತಿಂಗಳ ಹಿಂದಷ್ಟೇ ಆರಂಭಿಸಿದ್ದರು. ಇದೀಗ ಬಿಜೆಪಿಯ ಹಾಲಿ ಸಂಸದ ವೈ.ದೇವೇಂದ್ರಪ್ಪನವರು ವಿಶೇಷ ಪೂಜೆ ಸಲ್ಲಿಸಿ ಕಚೇರಿಗೆ ಪಾದಾರ್ಪಣೆ ಮಾಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ದೇವೇಂದ್ರಪ್ಪ, ಜಿಲ್ಲೆಯ ಸಾರ್ವಜನಿಕರ ಕುಂದುಕೊರತೆಯ ಅಹವಾಲು ಅರ್ಜಿಗಳನ್ನು ಸ್ವೀಕರಿಸುವ ಸಲುವಾಗಿಯೇ ಈ ಕಚೇರಿಯನ್ನು ಶುರು ಮಾಡಲಾಗಿದೆ. ಪ್ರತಿದಿನ ಈ ಕಚೇರಿಗೆ ತಮ್ಮ ಕುಂದುಕೊರತೆಯ ಬಗ್ಗೆ ಅರ್ಜಿಗಳನ್ನು ನಮ್ಮ ಆಪ್ತ ಸಹಾಯಕರಿಗೆ ಸಲ್ಲಿಸಬಹುದು. ಪ್ರತಿಮೂರು‌ ದಿನಗಳಿಗೆ ಒಮ್ಮೆಯಾದ್ರೂ ಕಚೇರಿಗೆ ಬಂದ ಕುಂದುಕೊರತೆಯ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಆಯಾ ಇಲಾಖಾಧಿಕಾರಿ ಸಂಪರ್ಕ ಸಾಧಿಸಿ ಅರ್ಜಿದಾರರಿಗೆ‌ ನ್ಯಾಯ ದೊರಕಿಸಿಕೊಡಲು ತಾವು ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.
ಅಲ್ಲದೇ, ದಿನದ ಇಪ್ಪತ್ತು‌ ನಾಲ್ಕು ಗಂಟೆಗಳಕಾಲ ಈ ಕಚೇರಿ ಕಾರ್ಯನಿರ್ವಹಿಸುತ್ತದೆ. ನಾನು ಊರಲ್ಲಿ ಇರಲಿ ಅಥವಾ ಬಿಡಲಿ ಕುಂದುಕೊರತೆ ಅಹವಾಲು‌ ಅರ್ಜಿಗಳನ್ನು ನಿಗದಿತ ದಿನಾಂಕದಂದು ಇತ್ಯರ್ಥಗೊಳಿಸಲಾಗುವುದೆಂದರು.

Body:ಜಲಾಶಯ ಭರ್ತಿಗೂ ಕ್ರಮ: ಜಿಲ್ಲೆಯಲ್ಲಿ ಖಾಲಿಯಿರುವ ಕೆರೆ ಕಟ್ಟೆಗಳ ಭರ್ತಿಗೂ ಅಗತ್ಯಕ್ರಮ ಜರುಗಿಸಲಾಗುವುದು. ಹಾಗೂ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಅಗತ್ಯ ಪರಿಹಾರ‌ ಕಂಡು ಕೊಳ್ಳುವಲ್ಲಿ ನಾನು‌ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ತುಂಬಿಕೊಂಡಿರುವ ಹೂಳೆತ್ತುವ ಕ್ರಮದ ಕುರಿತ ಹಾಗೂ ಕೊಟ್ಟೂರು - ಹರಿಹರ ರೈಲುಮಾರ್ಗದ ಸಂಪರ್ಕ ಕಲ್ಪಿಸಿದ್ದು, ಆ ಮಾರ್ಗದ ರೈಲು ಸಂಚಾರಕ್ಕೆ ಅಗತ್ಯ ಕ್ರಮವಹಿಸಲಾಗುವುದೆಂದರು.
ಬಿಎಸ್ ವೈ ಸಿಎಂಗಾಗಿ ದೇವರಲ್ಲಿ ಪ್ರಾರ್ಥನೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಆದಷ್ಟು ಬೇಗನೆ ಮುಖ್ಯಮಂತ್ರಿ ಹುದ್ದೆಯನ್ನ ಅಲಂಕರಿಸಬೇಕೆಂದು ಆ ದೇವರಲ್ಲಿ ಪ್ರಾರ್ಥಿಸಿಕೊಳ್ಳುವೆ ಎಂದು ಸಂಸದ ದೇವೇಂದ್ರಪ್ಪ ತಿಳಿಸಿದ್ದಾರೆ.
ಈ ದಿನ‌ ಬೆಳಿಗ್ಗೆ ನಗರದ ಅದಿದೇವತೆ ಕನಕದುರ್ಗಮ್ಮ ದೇಗುಲಕ್ಕೆ ಭೇಟಿ ನೀಡಿದ್ದ ಸಂಸದ ದೇವೇಂದ್ರಪ್ಪನವರಿಗೆ ಮಾಧ್ಯಮ ಪ್ರತಿನಿಧಿಗಳು ಅತೃಪ್ತ ಶಾಸಕರು ತಮ್ಮ ಜೊತೆಗೆ ಸಂಪರ್ಕದಲ್ಲಿ ಇದ್ದಾರೆ ಎಂಬ ಮಾಹಿತಿ ಇದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಯಾರೂ ಅಂತಾನೆ ನನಗ‌ ಗೊತ್ತಿಲ್ಲ. ಅವ್ರು ಮುಖ ಸಹಿತನೂ ನಾನೂ ನೋಡಿಲ್ಲ ಎಂದರು.
ಹಾಗಾದ್ರೆ ಬಿಎಸ್ ವೈ ಈ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುತ್ತಾರಾ ಎಂದಾಗ, ಆಗಲಿ ಅಂತ ನಾನೂ ಕೂಡ ಆ ದೇವರಲ್ಲಿ ಬೇಡಿಕೊಳ್ಳುತ್ತಿರುವೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_03_MP_DEVENDRAPPA_PRESS_MEET_BYTE_7203310

KN_BLY_02a_03_MP_DEVENDRAPPA_PRESS_MEET_BYTE_7203310

ETV Bharat Logo

Copyright © 2025 Ushodaya Enterprises Pvt. Ltd., All Rights Reserved.