ETV Bharat / state

ಲೋಕಲ್ ಸಮರ: ಬಳ್ಳಾರಿ ಜಿಲ್ಲೆಯ 3 ಪುರಸಭೆ, 1 ಪಟ್ಟಣ ಪಂಚಾಯತ್​​ ಗದ್ದುಗೆಗೆ ಗುದ್ದಾಟ - undefined

ಲೋಕಸಭಾ ಚುನಾವಣೆ ಸಮರ ಮುಗಿದ ಬಳಿಕ ಲೋಕಲ್ ಸಮರ ಶುರುವಾಗಿದೆ. ಬಳ್ಳಾರಿ ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯತ್​ನ ಗದ್ದುಗೆಯನ್ನು ಅಲಂಕರಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಪೈಪೋಟಿ ನಡೆಸಿವೆ.

ಲೋಕಲ್ ಸಮರ
author img

By

Published : May 27, 2019, 9:37 PM IST

ಬಳ್ಳಾರಿ: ಲೋಕಸಭಾ ಸಮರ ಮುಗಿದ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣಾ ಕಾವು ಜೋರಾಗಿದೆ. ಜಿಲ್ಲೆಯ ಪುರಸಭೆ ಹಾಗೂ ಪಟ್ಟಣ ಪಂಚಾಯತ್​ನ ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತೀವ್ರ ಪೈಪೋಟಿ ನಡೆಸಿವೆ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಸಹ ಈ ಚುನಾವಣೆಯಲ್ಲೂ ಭರ್ಜರಿ ಹೋರಾಟ ನಡೆಸಿದೆ.

ಸಂಡೂರು, ಹೂವಿನ ಹಡಗಲಿ ಪುರಸಭೆ ಹಾಗೂ ಕಮಲಾಪುರ ಪಟ್ಟಣ ಪಂಚಾಯತ್​ ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದರೆ, ಹರಪನಹಳ್ಳಿ ಪುರಸಭೆ ಬಿಜೆಪಿ ತೆಕ್ಕೆಯಲ್ಲಿದೆ. ಹೇಗಾದರೂ ಮಾಡಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದ್ರೂ ತನ್ನ ಅಧಿಪತ್ಯ ಮುಂದುವರಿಸಬೇಕೆಂಬ ಹಂಬಲ ಕಾಂಗ್ರೆಸ್ ಪಕ್ಷದ್ದು. ಆದರೆ, ಬಿಜೆಪಿ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲ ವಾರ್ಡ್​​ಗಳಲ್ಲೂ ತನ್ನ ಅಧಿಪತ್ಯ ಸಾಧಿಸಬೇಲು ಪಣ ತೊಟ್ಟಿದೆ. ಆ ಕಾರಣಕ್ಕಾಗಿಯೇ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಆಯಾ ಪುರಸಭೆ ವ್ಯಾಪ್ತಿಯಲ್ಲಿ ರೋಡ್ ಶೋ ಮತ್ತು ಮನೆ ಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಯಾರೊಬ್ಬರೂ ಮತಪ್ರಚಾರಕ್ಕೆ ಬಾರದಿರುವುದು ಉಭಯ ಪಕ್ಷಗಳ ಅಭ್ಯರ್ಥಿಗಳಲ್ಲಿ ತಲ್ಲಣ ಮೂಡಿಸಿದೆ.

3 ಪುರಸಭೆ, 1 ಪಟ್ಟಣ ಪಂಚಾಯತ್​ ಗದ್ದುಗೆ ಏರಲು ಅಂತಿಮ ಕಸರತ್ತು

ಈ ಬಾರಿಯ ಚುನಾವಣೆಯಲ್ಲಿ 85- ಕಾಂಗ್ರೆಸ್, 83 - ಬಿಜೆಪಿ, 31- ಜೆಡಿಎಸ್, 1- ಬಿಎಸ್ ಪಿ ಹಾಗೂ 70- ಪಕ್ಷೇತರರು ಸೇರಿದಂತೆ 270 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 92 ವಾರ್ಡ್​ಗಳಿಗೆ ಮೇ. 29 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ 19 ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜಿಲ್ಲೆಯ ಹೂವಿನಹಡಗಲಿ ಪುರಸಭೆಯಲ್ಲಿ 24,676 ಹಾಗೂ ಕಮಲಾಪುರ ಪಟ್ಟಣ ಪಂಚಾಯಯತ್​ನಲ್ಲಿ 20,649, ಸಂಡೂರು ಪುರಸಭೆಯಲ್ಲಿ 30, 876 ಮತ್ತು ಹರಪನಹಳ್ಳಿ ಪುರಸಭೆಯಲ್ಲಿ 39,420 ಸೇರಿದಂತೆ ಒಟ್ಟಾರೆಯಾಗಿ ಸುಮಾರು 1,15, 621 ಮತದಾರರು ಈ 4 ಸ್ಥಳೀಯ ಸಂಸ್ಥೆಗಳಲ್ಲಿ ಇದ್ದಾರೆ. ಅಲ್ಲದೇ, ಹಡಗಲಿ ಪುರಸಭೆಯಲ್ಲಿ ಪದವೀಧರೆ, ಅಂಗನವಾಡಿ ಕಾರ್ಯಕರ್ತೆ ಸೇರಿ ಬಡ ಹಾಗೂ ಕೂಲಿಕಾರ್ಮಿಕರು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

ಒಟ್ಟಾರೆಯಾಗಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯು ವಿಶೇಷ ಹಾಗೂ ಜಿದ್ದಾಜಿದ್ದಿನ ಅಖಾಡವಾಗಿ‌ ಮಾರ್ಪಟ್ಟಿದೆ. ಯಾವಯಾವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಆಯಾ ಪಕ್ಷದಿಂದ ಎಷ್ಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ಮಾಹಿತಿ ಹೀಗಿದೆ :

ಕಮಲಾಪುರ ಪಟ್ಟಣ ಪಂಚಾಯಿತಿ :

ಒಟ್ಟು 20 ವಾರ್ಡ್​ಗಳಿವೆ.

ಕಾಂಗ್ರೆಸ್ - 20,

ಬಿಜೆಪಿ - 18,

ಜೆಡಿಎಸ್ - 8,

ಪಕ್ಷೇತರರು - 39

ಅಂತಿಮ ಕಣದಲ್ಲಿ - 85

ಸಂಡೂರು ಪುರಸಭೆ :

ಒಟ್ಟು 23 ವಾರ್ಡ್​ಗಳಿದ್ದು,

ಕಾಂಗ್ರೆಸ್ - 23,

ಬಿಜೆಪಿ - 23,

ಬಿಎಸ್ ಪಿ -1,

ಪಕ್ಷೇತರರು -9

ಅಂತಿಮ ಕಣದಲ್ಲಿ - 56

ಹರಪನಹಳ್ಳಿ ಪುರಸಭೆ :

ಒಟ್ಟು 27 ವಾರ್ಡ್​ಗಳು-

ಕಾಂಗ್ರೆಸ್ - 27,

ಬಿಜೆಪಿ - 27,

ಜೆಡಿಎಸ್ - 09,

ಪಕ್ಷೇತರರು - 12

ಅಂತಿಮ ಕಣದಲ್ಲಿ - 75 ಅಭ್ಯರ್ಥಿಗಳಿದ್ದಾರೆ.

ಹೂವಿನಹಡಗಲಿ ಪುರಸಭೆ:

ಒಟ್ಟು 22- ವಾರ್ಡ್​ಗಳು

ಕಾಂಗ್ರೆಸ್ - 15,

ಬಿಜೆಪಿ- 15,

ಜೆಡಿಎಸ್ - 14,

ಪಕ್ಷೇತರರು - 10

ಅಂತಿಮ ಕಣದಲ್ಲಿ - 54 ಅಭ್ಯರ್ಥಿಗಳಿದ್ದಾರೆ.

Intro:ಲೋಕ ಸಮರ ಆಯ್ತು; ಈಗ ಲೋಕಲ್ ಸಮರ ಶುರು!
ಮೂರು ಪುರಸಭೆ, ಪಟ್ಟಣ ಪಂಚಾಯಿತಿ ಗದ್ದುಗೆಗೆ ಎರಡೂ ರಾಷ್ಟ್ರೀಯ ಪಕ್ಷಗಳ ಗುದ್ದಾಟ…
ಬಳ್ಳಾರಿ: ಲೋಕಸಭಾ ಸಾರ್ವತ್ರಿಕ ಚುನಾವಣಾ ಸಮರ ಮುಗಿತು. ಈಗ ಲೋಕಲ್ ಸಮರ ಶುರುವಾಗಿದೆ. ಜಿಲ್ಲೆಯ ಮೂರು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯ ಗದ್ದುಗೆಯನ್ನು ಅಲಂಕರಿಸಲು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ - ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ತೀವ್ರ ಪೈಪೋಟಿ ನಡೆಸಿದೆ.
ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿ ಪಕ್ಷ ಸ್ಥಳೀಯ ಸಂಸ್ಥೆಗಳ ಚುನಾವಣೆ ಯನ್ನು ಕಡೆಗಣಿಸಿಲ್ಲ. ಲೋಕ ಸಮರದಲ್ಲಿ ಮಕಾಡೆ ಮಲಗಿದ್ದ ಮೈತ್ರಿಕೂಟ ಪಕ್ಷಗಳಾದ ಕಾಂಗ್ರೆಸ್- ಜೆಡಿಎಸ್ ಪಕ್ಷಗಳೂ ಕೂಡ ಏಕಾಂಗಿಯಾಗಿ ಹೋರಾಟ ನಡೆಸಿವೆ.
ಸಂಡೂರು, ಹೂವಿನ ಹಡಗಲಿ ಪುರಸಭೆ ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಪಕ್ಷದ ತೆಕ್ಕೆಯಲಿದ್ದರೆ, ಹರಪನ ಹಳ್ಳಿ ಪುರಸಭೆ ಬಿಜೆಪಿ ತೆಕ್ಕೆಯಲ್ಲಿದೆ. ಹೇಗಾದರೂ ಮಾಡಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಾದ್ರೂ ತನ್ನ ಅಧಿ ಪತ್ಯ ಮುಂದುವರಿಸಬೇಕೆಂಬ ಹಂಬಲ ಕಾಂಗ್ರೆಸ್ ಪಕ್ಷದ್ದು ಆಗಿದೆ. ಆದರೆ, ಬಿಜೆಪಿ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲಿ
ಎಲ್ಲ ವಾರ್ಡುಗಳಲ್ಲೂ ತನ್ನ ಅಧಿಪತ್ಯ ಸಾಧಿಸಬೇಕೆಂಬ ಪಣವನ್ನು ತೊಟ್ಟಿದೆ. ಆ ಕಾರಣಕ್ಕಾಗಿಯೇ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ನೇರವಾಗಿ ಅಖಾಡಕ್ಕಿಳಿದಿದ್ದಾರೆ. ಆಯಾ ಪುರಸಭೆ ವ್ಯಾಪ್ತಿಯಲ್ಲಿ ರೋಡ್ ಶೋ, ಮನೆಮನೆಗೆ ತೆರಳಿ ಮತಯಾಚನೆ ಮಾಡುವ ಮೂಲಕ ವಿಶೇಷ ಗಮನ ಸೆಳೆದಿದ್ದಾರೆ.
ಶಾಸಕ ಶ್ರೀರಾಮುಲು ಮಾತ್ರ ನೇರವಾಗಿ ಆಖಾಡಕ್ಕಿಳಿದಿದ್ದು, ಬಿಟ್ಟರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದಿಂದ ಯಾರೊಬ್ಬರೂ ಆಖಾಡಕ್ಕಿಳಿದಿಲ್ಲರುವುದು ಉಭಯ ಪಕ್ಷಗಳ ಅಭ್ಯರ್ಥಿಗಳಲ್ಲಿ ತಲ್ಲಣ ಶುರುವಾಗಿದೆ. ಜಿಲ್ಲೆಯಲ್ಲಿ ಇಬ್ಬರು ಸಚಿವರು, ನಾಲ್ವರು ಶಾಸಕರು ಹಾಗೂ ಇಬ್ಬರು ಎಂಎಲ್ ಸಿಗಳಿದ್ದರೂ ಕೂಡ ಈವರೆಗೂ ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸಿದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕೈಗೊಳ್ಳದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Body:ಈ ಬಾರಿಯ ಚುನಾವಣೆಯಲಿ 85- ಕಾಂಗ್ರೆಸ್, 83 - ಬಿಜೆಪಿ, 31- ಜೆಡಿಎಸ್, 1- ಬಿಎಸ್ ಪಿ ಹಾಗೂ 70- ಪಕ್ಷೇತರರು ಸೇರಿದಂತೆ 270 ಮಂದಿ ಕಣದಲ್ಲಿದ್ದಾರೆ. ಅಂದಾಜು 92 ವಾರ್ಡುಗಳಿಗೆ ಮೇ. 29 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಹೂವಿನ ಹಡಗಲಿ ಪುರಸಭೆ ವ್ಯಾಪ್ತಿಯ 19ನೇ ವಾರ್ಡಿನ ಬಿಜೆಪಿ ಅಭ್ಯರ್ಥಿ ನಾಮ ಪತ್ರ ಹಿಂಪಡೆದಿರುವುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ಹೂವಿನಹಡಗಲಿ ಪುರಸಭೆಯಲ್ಲಿ 24,676 ಹಾಗೂ ಕಮಲಾಪುರ ಪಟ್ಟಣ ಪಂಚಾಯಿತಿಯಲ್ಲಿ 20,649, ಸಂಡೂರು ಪುರಸಭೆಯಲ್ಲಿ 30, 876 ಮತ್ತು ಹರಪನಹಳ್ಳಿ ಪುರಸಭೆಯಲ್ಲಿ 39, 420 ಸೇರಿದಂತೆ ಒಟ್ಟಾರೆಯಾಗಿ ಸರಿಸುಮಾರು 1,15, 621 ಮತದಾರರು ಈ ನಾಲ್ಕೂ ಸ್ಥಳೀಯ ಸಂಸ್ಥೆಗಳಲ್ಲಿ ಇದ್ದಾರೆ. ಅಲ್ಲದೇ, ಹಡಗಲಿ ಪುರಸಭೆಯಲ್ಲಿ ಪದವೀಧರೆ, ಅಂಗನವಾಡಿ ಕಾರ್ಯಕರ್ತೆ ಸೇರಿ ಬಡ ಹಾಗೂ ಕೂಲಿಕಾರ್ಮಿಕರು ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲಿ ಸ್ಪರ್ಧಿಸಿದ್ದಾರೆ.
ಅಲ್ಲದೇ, ಸಂಡೂರು ಪುರಸಭೆಯಲ್ಲಿ ಸತತ ನಾಲ್ಕು ಬಾರಿಯೂ ಗೆಲುವಿನತ್ತ ಮುನ್ನಡೆದವರೂ ಕೂಡ ಈ ಬಾರಿಯ ಚುನಾವಣೆ ಯಲಿ ಸ್ಪರ್ಧಿಸಿದ್ದಾರೆ. ಐದನೇ ಬಾರಿಗೂ ಗೆಲುವು ಹೊಂದುವ ನಿರೀಕ್ಷೆಯಲ್ಲಿ ಅವರಿದ್ದಾರೆ. ಒಟ್ಟಾರೆಯಾಗಿ ಈ ಬಾರಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯು ವಿಶೇಷ ಹಾಗೂ ಜಿದ್ದಾಜಿದ್ದಿನ ಅಖಾಡ ವಾಗಿ‌ ಮಾರ್ಪಟ್ಟಿದೆ.
ಯಾವಯಾವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಆಯಾ ಪಕ್ಷದಿಂದ ಎಷ್ಟು ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂಬ ಮಾಹಿತಿ ಹೀಗಿದೆ ನೋಡಿ.

ಕಮಲಾಪುರ ಪಟ್ಟಣ ಪಂಚಾಯಿತಿ ಒಟ್ಟು 20 ವಾರ್ಡುಗಳು
ಕಾಂಗ್ರೆಸ್ - 20, ಬಿಜೆಪಿ - 18, ಜೆಡಿಎಸ್ - 8, ಪಕ್ಷೇತರರು - 39
ಅಂತಿಮ ಕಣದಲ್ಲಿ - 85 ಮಂದಿ ಇದ್ದಾರೆ.

ಸಂಡೂರು ಪುರಸಭೆ ಒಟ್ಟು 23 ವಾರ್ಡುಗಳು
ಕಾಂಗ್ರೆಸ್ - 23, ಬಿಜೆಪಿ - 23, ಬಿಎಸ್ ಪಿ -1, ಪಕ್ಷೇತರರು -9
ಅಂತಿಮ ಕಣದಲ್ಲಿ - 56 ಮಂದಿ ಇದ್ದಾರೆ.

ಹರಪನಹಳ್ಳಿ ಪುರಸಭೆ ಒಟ್ಟು 27 ವಾರ್ಡುಗಳು
ಕಾಂಗ್ರೆಸ್ - 27, ಬಿಜೆಪಿ - 27, ಜೆಡಿಎಸ್ - 09, ಪಕ್ಷೇತರರು - 12
ಅಂತಿಮ ಕಣದಲ್ಲಿ - 75 ಮಂದಿ ಇದ್ದಾರೆ.

ಹೂವಿನಹಡಗಲಿ ಪುರಸಭೆ ಒಟ್ಟು 22 ವಾರ್ಡುಗಳು
ಕಾಂಗ್ರೆಸ್ - 15, ಬಿಜೆಪಿ- 15, ಜೆಡಿಎಸ್ - 14, ಪಕ್ಷೇತರರು - 10
ಅಂತಿಮ ಕಣದಲ್ಲಿ - 54 ಮಂದಿ ಇದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_02_27_LOCAL_BODY_ELECTION_OVER_ALL_STORY_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.