ETV Bharat / state

ಕೊರೊನಾ ಲಾಕ್​ಡೌನ್​ ನಡುವೆಯೂ ಮದುವೆ: ನಾಲ್ಕೇ ನಿಮಿಷದಲ್ಲಿ ಮುಗೀತು ಎಮರ್ಜೆನ್ಸಿ ಪ್ರೇಮ ವಿವಾಹ!

ಕೊರೊನಾ ಎಮರ್ಜೆನ್ಸಿ ವೇಳೆ ಅತ್ಯಂತ ತುರ್ತಾಗಿ ಕೆಲವೇ ನಿಮಿಷಗಳಲ್ಲಿ ಸರಳ ರೀತಿಯಲ್ಲಿ ಎರಡೂ ಕುಟುಂಬಗಳ ಸದಸ್ಯರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಪ್ರೇಮ ವಿವಾಹವೊಂದು ನೆರವೇರಿದೆ.

ನಾಲ್ಕೇ ನಿಮಿಷದಲ್ಲಿ ಮದುವೆ
ನಾಲ್ಕೇ ನಿಮಿಷದಲ್ಲಿ ಮದುವೆ
author img

By

Published : Mar 27, 2020, 5:46 PM IST

ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ಎಮರ್ಜೆನ್ಸಿ ನಡುವೆಯೂ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಮಲಿಯಮ್ಮ ದೇವಿ ಸನ್ನಿಧಾನದಲ್ಲಿ ಇಂದು ಎಮರ್ಜೆನ್ಸಿ ಪ್ರೇಮವಿವಾಹ ಜರುಗಿದೆ. ಕೇವಲ ನಾಲ್ಕೇ ನಿಮಿಷದಲ್ಲಿ ಈ ಮದುವೆ ಕಾರ್ಯ ಮಾಡುವ ಮೂಲಕ ಹೊಸ ದಾಖಲೆ ಬರೆದಂತಾಗಿದೆ.

ಸಿದ್ಧಾಪುರ ಗ್ರಾಮದ ರೊಹಿಣಿ(20) ಮತ್ತು ಮಧು(25) ಕೊರೊನಾ ಲಾಕ್​ಡೌನ್​ ಸಂದರ್ಭದಲ್ಲಿ ಮದುವೆಯಾದ ಜೋಡಿ. ಇವರಿಬ್ಬರೂ ಸಿದ್ಧಾಪುರ ಗ್ರಾಮದ ಒಂದೇ ಸಮುದಾಯಕ್ಕೆ ಸೇರಿದವರು. ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳ ಸದಸ್ಯರೊಡಗೂಡಿ ಅತ್ಯಂತ ಸರಳ ರೀತಿಯಲ್ಲಿ ಎಮರ್ಜೆನ್ಸಿ ಮದುವೆ ನೆರವೇರಿಸಿದ್ದಾರೆ.‌

ಕೆಲವೇ ನಿಮಿಷಗಳಲ್ಲಿ ಜರುಗಿದ ಪ್ರೇಮ ವಿವಾಹ:

ಕೊರೊನಾ ಎಮರ್ಜೆನ್ಸಿ ವೇಳೆ ಅತ್ಯಂತ ತುರ್ತಾಗಿ ಕೆಲವೇ ನಿಮಿಷಗಳಲ್ಲಿ ಈ ಸರಳವಾಗಿ ಎರಡೂ ಕುಟುಂಬಗಳ ಸದಸ್ಯರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಮಲಿಯಮ್ಮ ದೇವಿಯ ಸನ್ನಿಧಾನದಲ್ಲಿ ವರನಿಂದ ವಧುವಿಗೆ ಮಾಂಗಲ್ಯ ಕಟ್ಟಿಸುವ ಮೂಲಕ ಜೋಡಿಹಕ್ಕಿಗಳನ್ನು ಒಂದುಗೂಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.