ETV Bharat / state

ಮಗ ಹುಟ್ಟಿದನೆಂದು ಪಾರ್ಟಿ ಕೊಟ್ಟ ಪಿಎಸ್​ಐ.. ಕಂಪ್ಲಿ‌ ಪೊಲೀಸ್ ಠಾಣೆ ಸೀಲ್​​​​ಡೌನ್.. - ಕಂಪ್ಲಿ‌ ಪೊಲೀಸ್ ಠಾಣೆ ಸೀಲ್​​​​ಡೌನ್

ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್​​ಐ ಮೌನೇಶ ರಾಥೋಡ್ ಅವರು, ತಮಗೆ ಗಂಡು ಮಗು ಹುಟ್ಟಿದೆ ಎಂಬ ಸಂತಸದಲ್ಲಿ ಪಾರ್ಟಿ ಕೊಟ್ಟಿದ್ದರು. ಆ ಪಾರ್ಟಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಭಾಗಿಯಾಗಿದ್ದರು..

KAMPLI POLICE STATION SEAL DOWN
ಕಂಪ್ಲಿ‌ ಪೊಲೀಸ್ ಠಾಣೆ ಸೀಲ್​​​​ಡೌನ್
author img

By

Published : Jun 27, 2020, 3:38 PM IST

ಬಳ್ಳಾರಿ : ಗಣಿ ಜಿಲ್ಲೆಯ ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್​​ಐ ಮಾಡಿದ ಒಂದು ಎಡವಟ್ಟಿಗೆ ಇಡೀ ಕಂಪ್ಲಿ‌ ಪಟ್ಟಣದ ಪೊಲೀಸ್ ಠಾಣೆಯನ್ನೇ ಸೀಲ್​​​​ಡೌನ್ ಮಾಡೋ ಹಂತ ತಲುಪಿದೆ.

ಕಂಪ್ಲಿ ಪೊಲೀಸ್ ಠಾಣೆಯ ಪಿಎಸ್​​ಐ ಮೌನೇಶ ರಾಥೋಡ್ ಅವರು, ತಮಗೆ ಗಂಡು ಮಗು ಹುಟ್ಟಿದೆ ಎಂಬ ಸಂತಸದಲ್ಲಿ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿದಂತೆ ಸಂಬಂಧಿಕರಿಗೆ ಹಾಗೂ ಹಿತೈಷಿಗಳಿಗೆ ಪಾರ್ಟಿ ಕೊಟ್ಟಿದ್ದರು. ಆ ಪಾರ್ಟಿಯಲ್ಲಿ ಕೊರೊನಾ ಸೋಂಕಿತರೊಬ್ಬರು ಭಾಗಿಯಾಗಿದ್ದರು.

ಜೂನ್ 19ರಂದು ಕಂಪ್ಲಿ ಪಟ್ಟಣದ ಹೊರವಲಯದಲ್ಲಿರುವ ಸಮುದಾಯ ಭವನದಲ್ಲಿ ಈ ಪಾರ್ಟಿಯನ್ನ ಮೌನೇಶ್ ರಾಥೋಡ್ ಆಯೋಜಿಸಿದ್ದರು. ಆ ಪಾರ್ಟಿಯಲ್ಲಿ 50ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಆದರೆ, ಈ ಪಾರ್ಟಿಗೂ ಮನ್ನವೇ ಕಂಪ್ಲಿ ಠಾಣೆಯ ಪೊಲೀಸ್ ಪೇದೆಗೆ ಕೊರೊನಾ ಸೋಂಕಿರೋದು ದೃಢಪಟ್ಟಿದೆ. ಆ ಸೋಂಕಿತನೂ ಕೂಡ ಭಾಗಿಯಾಗಿದ್ದು, ಕಂಪ್ಲಿ ಸಿಪಿಐಡಿ ಹುಲುಗಪ್ಪ ಕೂಡ ಈ ಪಾರ್ಟಿಯಲ್ಲಿದ್ದರು.

ಕಂಪ್ಲಿ‌ ಪೊಲೀಸ್ ಠಾಣೆ ಸೀಲ್​​​​ಡೌನ್..

ಪಿಎಸ್ಐ​​​ ಮೌನೇಶ್ ರಾಥೋಡ್, ಬಸಪ್ಪ ಲಮಾಣಿ ಹಾಗೂ ಕಂಪ್ಲಿ ಪೊಲೀಸ್ ಠಾಣೆಯ ಸಿಬ್ಬಂದಿ ಸೇರಿ 50ಕ್ಕೂ ಹೆಚ್ಚು ಮಂದಿಯನ್ನ ಈಗ ಕ್ವಾರಂಟೈನ್‌ ಮಾಡಲಾಗಿದೆ. ಸೋಂಕಿತ ಪೇದೆಯು ಜೂನ್​​ 20ರಂದು ರಾತ್ರಿ ತಾಲೂಕಿನ ಚಿನ್ನಾಪುರ ಗ್ರಾಮದ ಕಂಟೇನ್​ಮೆಂಟ್​​ ಪ್ರದೇಶ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಜೂನ್ 21ರಂದು ಪಟ್ಟಣದಲ್ಲಿ ರಾತ್ರಿ ಬೀಟ್‍ನಲ್ಲಿಯೂ ಕೆಲಸ ಮಾಡಿದ್ದರು.

ಜೂನ್​​ 22 ರಿಂದ 25ರವರೆಗೆ ರಜೆ ತೆಗೆದುಕೊಂಡು ಹಗರಿಬೊಮ್ಮನಹಳ್ಳಿ ಬಳಿಯ ತಮ್ಮ ಸ್ವಗ್ರಾಮಕ್ಕೆ ತೆರಳಿದ್ದರು. 23ರಂದು ಹಗರಿಬೊಮ್ಮನಹಳ್ಳಿ ಫೀವರ್ ಕ್ಲಿನಿಕ್​​ನಲ್ಲಿ ಅನಾರೋಗ್ಯದ ಕಾರಣದಿಂದ ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. 25ರ ವರದಿಯಲ್ಲಿ ಅವರಿಗೆ ಸೋಂಕಿರುವುದು ದೃಢಪಟ್ಟಿದೆ. ಅವರನ್ನು ತೋರಣಗಲ್ಲಿನ ಜಿಂದಾಲ್ ಸಂಜೀವಿನಿ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.