ETV Bharat / state

ಮೂವರಿಗೆ ಬೆಸ್ಟ್​ ಎಂಪ್ಲಾಯಿ ಪ್ರಶಸ್ತಿ ನೀಡಿದ ಬಳ್ಳಾರಿ ಡಿಸಿ ನಕುಲ್

author img

By

Published : Oct 14, 2019, 5:35 PM IST

Updated : Oct 14, 2019, 9:17 PM IST

ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶೀಘ್ರವಾಗಿ ಕಡತ ವಿಲೇವಾರಿ ಮಾಡಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಬೆಸ್ಟ್ ಎಂಪ್ಲಾಯಿ ಪ್ರಶಸ್ತಿಯನ್ನು ಡಿಸಿ ನಕುಲ್​ ನೀಡಿದ್ದಾರೆ.

ಬೆಸ್ಟ್​ ಎಂಪ್ಲಾಯಿ ಪ್ರಶಸ್ತಿ

ಬಳ್ಳಾರಿ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಇ- ಆಫೀಸ್ ಅನುಷ್ಠಾನಗೊಂಡಿದ್ದು, ಕಡತಗಳ ವಿಳಂಬಕ್ಕೆ ಅಸ್ಪದವಿಲ್ಲದೇ ಶೀಘ್ರವಾಗಿ ವಿಲೇವಾರಿಯಾಗುತ್ತಿವೆ.

ಕಚೇರಿಯಲ್ಲಿ ತ್ವರಿತಗತಿಯಲ್ಲಿ ಕಡತಗಳ ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಾಗಿಯೇ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಬೆಸ್ಟ್ ಎಂಪ್ಲಾಯಿ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ. ಪ್ರತಿ ತಿಂಗಳು ತಮ್ಮ ವ್ಯಾಪ್ತಿಗೆ ‌ಬರುವ ಅರ್ಜಿಗಳು, ನಿಗದಿಪಡಿಸಿದ ಅವಧಿಯೊಳಗೆ ಕಡತಗಳ‌‌ ವಿಲೇವಾರಿ ಮೂಲಕ ಸ್ಪಂದನೆ, ಇ-ಹಾಜರಾತಿ ಪ್ರಗತಿಯನ್ನು ಪರಿಶೀಲಿಸಿ ಮೂರು ಮಂದಿ ನೌಕರರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

2019ರ ಸೆಪ್ಟಂಬರ್​​ ತಿಂಗಳ ಪ್ರಶಸ್ತಿಗೆ ಡಿಸಿ ಕಚೇರಿಯ ಕೆ.ಸುಧಾ, ಮಂಜುಳಾ ನಂದಿಕೋಲಮಠ, ಎಂ. ಹಸೀನಾಬಾನು ಅವರು ಆಯ್ಕೆಯಾಗಿದ್ದು, ಆಯ್ಕೆಯಾದವರಿಗೆ ಜಿಲ್ಲಾಧಿಕಾರಿ ನಕುಲ್ ಅವರು ಸೋಮವಾರ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಿ ಶುಭ ಹಾರೈಸಿದ್ದಾರೆ.

ಈ ಬೆಸ್ಟ್ ಎಂಪ್ಲಾಯಿ ಪ್ರಶಸ್ತಿಯನ್ನು ಪ್ರದಾನ ಮಾಡಿ ಮಾತನಾಡಿದ ಡಿಸಿ ನಕುಲ್ ಅವರು, ಡಿಸಿ ಕಚೇರಿಯ ಎಲ್ಲ ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಕಚೇರಿಗೆ ಸಮಸ್ಯೆ ಹೊತ್ತು ಬರುವವರೆಗೆ ಸಿಬ್ಬಂದಿ ಸಕಾಲದಲ್ಲಿ ಸ್ಪಂದಿಸುವಂತೆ ಸೂಚಿಸಿದರು.

Intro:ಇ-ಆಫೀಸ್ ನಡಿ ಕಡತಗಳ ಶೀಘ್ರ ವಿಲೇವಾರಿ
ಮೂರು ಜನ ಡಿಸಿ ಕಚೇರಿ ಸಿಬ್ಬಂದಿಗೆ ಬೆಸ್ಟ್ ಎಂಪ್ಲಾಯ್ ಪ್ರಶಸ್ತಿ
ಬಳ್ಳಾರಿ: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಇ- ಆಫೀಸ್ ಅನುಷ್ಠಾನಗೊಂಡಿದ್ದು, ಕಡತಗಳು ವಿಳಂಬಕ್ಕೆ ಅಸ್ಪದವಿಲ್ಲದೇ ಶೀಘ್ರವಾಗಿ ವಿಲೇವಾರಿಯಾಗುತ್ತಿವೆ.
ತ್ವರಿತಗತಿಯಲ್ಲಿ ಕಡತಗಳ ವಿಲೇವಾರಿ ಮಾಡೋದರ ಮೂಲಕ ಸಾರ್ವಜನಿಕರಿಗೆ ಸಕಾಲದಲ್ಲಿ ಸ್ಪಂದಿಸುವ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಾಗಿಯೇ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಯನ್ನು ಸ್ಥಾಪಿಸಿದ್ದು, ಪ್ರತಿ ತಿಂಗಳು ತಮ್ಮ ವ್ಯಾಪ್ತಿಗೆ ‌ಬರುವ ಅರ್ಜಿಗಳು, ನಿಗದಿಪಡಿಸಿದ ಅವಧಿ ಯೊಳಗೆ ಕಡತಗಳ‌‌ ವಿಲೇವಾರಿ ಮೂಲಕ ಸ್ಪಂದನೆ, ಇ-ಹಾಜರಾತಿ ಪ್ರಗತಿಯನ್ನು ಪರಿಶೀಲಿಸಿ ಮೂರುಮಂದಿ ನೌಕರರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
Body:2019ರ ಸೆಪ್ಟೆಂಬರ್ ತಿಂಗಳ ಪ್ರಶಸ್ತಿಗೆ ಡಿಸಿ ಕಚೇರಿ ಕೆ.ಸುಧಾ, ಮಂಜುಳಾ ನಂದಿಕೋಲಮಠ, ಎಂ.ಹಸೀನಾಬಾನು ಅವರು ಆಯ್ಕೆಯಾಗಿದ್ದು, ಆಯ್ಕೆಯಾದವರಿಗೆ ಜಿಲ್ಲಾಧಿಕಾರಿ ನಕುಲ್ ಅವರು ಸೋಮವಾರ ಪ್ರಶಸ್ತಿಪತ್ರ ಹಾಗೂ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಈ ಬೆಸ್ಟ್ ಎಂಪ್ಲಾಯ್ ಪ್ರಶಸ್ತಿಯನ್ನು ಪ್ರದಾನ ಮಾಡಿದ ಡಿಸಿ ನಕುಲ್ ಅವರು ಮಾತನಾಡಿ, ಡಿಸಿ ಕಚೇರಿಯ ಎಲ್ಲ ಸಿಬ್ಬಂದಿ ಜನಸ್ನೇಹಿಯಾಗಿ ಕೆಲಸ ಮಾಡಬೇಕು, ಕಚೇರಿಗೆ ಸಮಸ್ಯೆ ಹೊತ್ತು ಬರುವವರೆಗೆ ಸಕಾಲದಲ್ಲಿ ಸ್ಪಂದಿಸಿ ಎಂದರು. ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಹಾಜರಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_DC_NAKUL_BEST_EMPLOYEES_PRIZE_DISTRIBUTION_7203310

KN_BLY_4c_DC_NAKUL_BEST_EMPLOYEES_PRIZE_DISTRIBUTION_7203310

KN_BLY_4d_DC_NAKUL_BEST_EMPLOYEES_PRIZE_DISTRIBUTION_7203310
Last Updated : Oct 14, 2019, 9:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.